ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.39.0-wmf.23
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡೀಯವಿಕಿ ಚರ್ಚೆ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆ
ಸಹಾಯ
ಸಹಾಯ ಚರ್ಚೆ
ವರ್ಗ
ವರ್ಗ ಚರ್ಚೆ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆ
Gadget
Gadget talk
Gadget definition
Gadget definition talk
ಗುರಿ - ಕಲ್ಲಿನ ವೀಣೆಯ ಮೀಟಿದರೇನು
0
1444
246702
2506
2022-08-14T18:45:23Z
2409:4071:2481:8C7F:284C:A671:BFC7:94E3
Fixed a minor typing mistake
wikitext
text/x-wiki
ಚಿತ್ರ: '''[[ಗುರಿ]]'''

ಸಾಹಿತ್ಯ: '''[[:ವರ್ಗ:ಚಿ.ಉದಯಶಂಕರ್ ಸಾಹಿತ್ಯ|ಚಿ.ಉದಯಶಂಕರ್]]'''

ಸಂಗೀತ: '''ರಾಜನ್-ನಾಗೇಂದ್ರ'''

ಗಾಯನ: '''ಡಾ| ರಾಜ್‍ಕುಮಾರ್'''

ಕಲ್ಲಿನ ವೀಣೆಯ ಮೀಟಿದರೇನು

ನಾದವು ಹೊಮ್ಮುವುದೇ

ಮಲ್ಲಿಗೆ ಹೂಗಳು ಬಾಡಿದ ಮೇಲೆ

ಪರಿಮಳ ಚೆಲ್ಲುವುದೇ

ಹೇಳೂ.. ಪರಿಮಳ ಚೆಲ್ಲುವುದೇ

ಕಲ್ಲಿನ ವೀಣೆಯ ಮೀಟಿದರೇನು

ನಾದವು ಹೊಮ್ಮುವುದೇ

ಎಲೆ ಎಲೆಯಲ್ಲಾ ಹೂವುಗಳಾಗಿ

ಹೂವುಗಳೆಲ್ಲಾ ಬಾಣಗಳಾಗಿ

ನನ್ನೆದೆಯಾ ಸೋಕಲಿ

ಆ ಮನ್ಮಥನೇ ನನ್ನೆದುರಾಗಿ

ಮೋಹನರಾಗದೀ ನನ್ನನು ಕೂಗಿ

ಛಲದಲಿ ಹೋರಾಡಲಿ

ಎಂದಿಗು ಅವನು ಗೆಲ್ಲುವುದಿಲ್ಲಾ

ಸೋಲದೆ ಗತಿಯಿಲ್ಲಾ...

||ಕಲ್ಲಿನ ವೀಣೆಯ||

ಕಲ್ಲಿನ ವೀಣೆಯ ಮೀಟಿದರೇನು

ನಾದವೂ ಹೊಮ್ಮುವುದೇ

ಕಾಣುವ ಅಂದಕೇ ನಾ ಕುರುಡಾಗಿ

ಪ್ರೇಮದ ಹಾಡಿಗೇ ನಾ ಕಿವುಡಾಗಿ

ನೆಮ್ಮದೀ... ದೂರಾಗಿದೇ..

ರೋಷದ ಬೆಂಕಿ, ಒಡಲನು ನುಂಗಿ

ಶಾಂತಿಯು ನನ್ನಾ, ಎದೆಯಲಿ ಇಂಗಿ

ಆಸೆಯೂ ಮಣ್ಣಾಗಿದೇ..

ಗಾಳಿಯ ಹಿಡಿವ ಹಂಬಲವೇಕೆ

ಚಪಲವು ನಿನಗೇಕೇ..

||ಕಲ್ಲಿನ ವೀಣೆಯ||

{{ಪರಿವಿಡಿ}}
[[Category: ಕನ್ನಡ ಚಿತ್ರಸಾಹಿತ್ಯ]]
[[ವರ್ಗ: ಗುರಿ ಚಿತ್ರ]]
[[ವರ್ಗ: ಚಿ.ಉದಯಶಂಕರ್ ಸಾಹಿತ್ಯ]]
[[ವರ್ಗ: ಡಾ.ರಾಜ್‍ಕುಮಾರ್ ಗಾಯನ]]
6t2o37vsprur9ippcklixgtsheluc1y
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತರ್ವ್ಯಾಪ್ತಿ
0
3349
246703
9842
2022-08-14T23:43:49Z
49.207.196.31
wikitext
text/x-wiki
==ಅಂತರ್ವ್ಯಾಪ್ತಿ==
ತತ್ತ್ವಶಾಸ್ತ್ರದಲ್ಲಿ ಅಂತರ್ವ್ಯಾಪ್ತಿ ಪ್ರಶ್ನೆ ಅತಿ ಪ್ರಧಾನವಾದುದು.

ತತ್ತ್ವಜ್ಞರು ಜಗತ್ತಿನ ಸತ್ಯತೆ ಮಿಥ್ಯತೆಗಳನ್ನು ವಿಮರ್ಶಿಸುವಾಗ ಜಗತ್ತಿನಲ್ಲಿರುವ ಸತ್ಯವಾವುದು, ಅದರ ಸ್ವರೂಪವೇನು. ಸತ್ಯ ವಿಶ್ವೈಕ್ಯವಾದುದೇ ಅಥವಾ ವಿಶ್ವಾತೀತವಾದುದೇ. ಎಂದು ವಿಚಾರ ಮಾಡಬೇಕಾಗುತ್ತದೆ.

ಪರಬ್ರಹ್ಮ ವಸ್ತು ಜಗತ್ತಿನಲ್ಲಿ ಅಂತರ್ವ್ಯಾಪ್ತಾವಾದುದು ಎಂದೂ ಚೇತನಾಚೇತನಗಳಲ್ಲಿ ಅದೇ ಅಂತರ್ಗತವಾಗಿದೆ ಎಂದೂ ವಿಶ್ವೈಕ್ಯವಾದುವು ಹೇಳುತ್ತದೆ. ಪ್ರಕೃತಿಯೇ ಪರಬ್ರಹ್ಮನೆಂದು ವಾದಿಸುವವರೂ ಹೀಗೆ ಹೇಳುತ್ತಾರೆ. (ಪ್ಯಾನ್ಥೀಇಸ್ಟ್ಸ್). ಆದರೆ ಅಂತರ್ವ್ಯಾಪ್ತಿಗೆ ಮತ್ತೊಂದು ಅರ್ಥವೂ ಉಂಟು. ಜಗತ್ತಿನ ಚೇತನಗಳಲ್ಲಿ ಜೀವರುಗಳಲ್ಲಿ ಅಂತರ್ವ್ಯಾಪ್ತನಾದ ಪರಬ್ರಹ್ಮನ ಸ್ವರೂಪವನ್ನು ಈಶ್ವರವಾದಿಗಳು ಮುಂದೆ ಹೇಳುವ ರೀತಿಯಲ್ಲಿ ಪ್ರತಿಪಾದಿಸುತ್ತಾರೆ. ಅವನು ಅಸಂಖ್ಯಾತ ಜೀವರುಗಳನ್ನು ಸೃಷ್ಟಿಸಿ ಅವರಲ್ಲಿ ಪ್ರವೇಶಿಸುತ್ತಾನೆ. ಜಗತ್ತಿನ ಸರ್ವ ವ್ಯಾಪಾರವನ್ನೂ ಸೃಷ್ಟಿಸ್ಥಿತಿ ಲಯಗಳನ್ನೂ ನಡೆಸುವ ಯಂತ್ರವಾಹಕನಾಗಿರುತ್ತಾನೆ. ಪರಬ್ರಹ್ಮ ವಸ್ತುವೊಂದೇ ಸತ್ಯ ಮತ್ತು ನಿತ್ಯ. ಮತ್ತೆಲ್ಲವೂ ಅಸತ್ಯ, ಅನಿತ್ಯ. ಅವನು ಪ್ರಪಂಚದಲ್ಲಿದ್ದು ಸಪ್ರಪಂಚನಾಗಿದ್ದರೂ ಅವನೇ ಅದಕ್ಕೆ ಉಪಾದಾನ ಮತ್ತು ನಿಮಿತ್ತಕಾರಣನಾಗಿರುವುದರಿಂದ ಅವನು ವಿಶ್ವಾತೀತನೂ ಆಗಿರುತ್ತಾನೆ. ಪ್ರಪಂಚಕ್ಕೆ ಅಧೀನನಲ್ಲ. ಅಂತವಾರ್್ಯಪ್ತನಾಗಿದ್ದರೂ ಪ್ರಪಂಚವನ್ನು ಮೀರಿ ಸರ್ವಸ್ವತಂತ್ರನಾಗಿರುತ್ತಾನೆ. ಪ್ರಕೃತಿಯಲ್ಲಿ ಮತ್ತು ಜೀವರುಗಳಲ್ಲಿ ಒಂದೇ ರೀತಿಯಾಗಿ ಅಂತರ್ವ್ಯಾಪ್ತನಲ್ಲ. ಪ್ರಕೃತಿ ಜೀವರುಗಳಿಗೆ ಸಾಧನಸಾಮಗ್ರಿ. ಅವರು ಪ್ರಕೃತಿಗಿಂತ ಹೆಚ್ಚು ಸ್ವತಂತ್ರರು. ಅವರಿಗೆ ಕರ್ಮ ಮಾಡುವ ಸ್ವಾತಂತ್ರ್ಯವಿದೆ. ಅಂತರ್ವ್ಯಾಪ್ತನಾದ ಪರಮಾತ್ಮ ಕರ್ಮದ ಫಲವನ್ನು ನಿಯಾಮಕ ಮಾಡುವವ; ಕರ್ಮದಿಂದ ನಿರ್ಲಿಪ್ತನಾದರೂ ಅಸಂಗ, ಸರ್ವಸಾಕ್ಷಿ ಮತ್ತು ಸರ್ವಜ್ಞ. ಅಂತವಾರ್್ಯಪ್ತನಾದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಜೀವಾತ್ಮರುಗಳ ಸಾಧನೆಯ ಗುರಿ.
ನಿಷ್ಪ್ರಪಂಚವಾದಿಗಳ ಪ್ರಕಾರ ಜಗತ್ತು ಮಿಥ್ಯ ಮತ್ತು ಮಾಯೆಯಿಂದ ಆವೃತವಾದುದು. ಅದನ್ನು ವ್ಯಾವಹಾರಿಕ ಸತ್ಯವೆನ್ನಬಹುದು. ಜ್ಞಾನದಿಂದ ಮಾಯೆಯ ನಾಶವಾದಾಗ ಜೀವಾತ್ಮ ಪರಮಾತ್ಮರು ಬೇರೆಬೇರೆಯಲ್ಲವೆಂದು ಅರಿವು ಉಂಟಾಗುವುದೇ ಸಾಕ್ಷಾತ್ಕಾರ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
t7c4m4s9wd97yx0okf6ywi3lyjq0h65
246704
246703
2022-08-14T23:44:07Z

e1b1e5px6rtybfrgdo9kn3hzg94tfiv
ಸದಸ್ಯರ ಚರ್ಚೆಪುಟ:ಕಾಂತರಾಜು ಗುಪ್ಪಟ್ಣ
3
94415
246701
2022-08-14T16:11:52Z
ಕನ್ನಡ ವಿಕಿ ಸಮುದಾಯ
4988
ಹೊಸ ಬಳಕೆದಾರರ ಸ್ವಾಗತ
wikitext
text/x-wiki
{{ಟೆಂಪ್ಲೇಟು:ಸುಸ್ವಾಗತ|realName=|name=ಕಾಂತರಾಜು ಗುಪ್ಪಟ್ಣ}}
-- [[ಸದಸ್ಯ:ಕನ್ನಡ ವಿಕಿ ಸಮುದಾಯ|ಕನ್ನಡ ವಿಕಿ ಸಮುದಾಯ]] ([[ಸದಸ್ಯರ ಚರ್ಚೆಪುಟ:ಕನ್ನಡ ವಿಕಿ ಸಮುದಾಯ|ಚರ್ಚೆ]]) ೧೬:೧೧, ೧೪ ಆಗಸ್ಟ್ ೨೦೨೨ (UTC)
lol8lpw490svqrdttec0kp0mykg5nec