ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.8
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಕಮ್ಯೂನಿಸಂ.djvu/೧೨೬
104
98744
325126
273615
2026-06-28T15:46:50Z
Vikashegde
1258
/* Proofread */
325126
proofread-page
text/x-wiki
<noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೧೨|right=}}</noinclude>(Reformists) ಒಡ್ಡಿದ ಅಡಚಣೆ ಮತ್ತು ಅವರುಗಳು ಕಾರ್ಮಿಕವರ್ಗಕ್ಕೆ ಬಗೆದ ದ್ರೋಹ ಸಮಾಜವಾದೀ ಚಳವಳಿಯ ಮುಂದೋಟವನ್ನು ಹಿಡಿದು ನಿಲ್ಲಿಸಿದವು. ಸುಧಾರಕರು ಕಾರ್ಯೋನ್ಮುಖರಾಗಿ ನಿಂತಿದ್ದ ಕಾರ್ಮಿಕವರ್ಗವನ್ನು ತಡೆಗಟ್ಟಿದರು, ಕ್ರಾಂತಿ ನಡೆಸಲು ಸಮಯ ಬಂದಿಲ್ಲವೆಂದು ಬೆದರಿಸಿದರು, ಬಂಡವಾಳವರ್ಗದ ಸರ್ಕಾರದೊಡನೆ ಕಲೆತು ಕ್ರಾಂತಿಯ ಶತ್ರುಗಳಾಗಿ ನಿಂತರು. ಆದರೂ ಜರ್ಮನಿ, ಆಸ್ಟ್ರಿಯಾ, ಇಟಲಿ, ಹಂಗೆರಿ,
ಇತ್ಯಾದಿ ಹಲವು ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಕ್ರಾಂತಿಯು ನಡೆದು ವಿಫಲಹೊಂದಿತು.
{{gap}}ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಕಾರ್ಮಿಕರ ಕ್ರಾಂತಿ ವಿಫಲವಾದದ್ದರಿಂದ ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಜೀವದಾನ ಪಡೆಯಿತು. ಅನೇಕ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಲೆನಿನ್ ಖಂಡಿಸಿದ ಸುಧಾರಕ ಸಮಾಜವಾದೀ ತತ್ತ್ವ ಗರಿಕಟ್ಟಿಕೊಳ್ಳಲೂ ಅವಕಾಶಸಿಕ್ಕಿತು. ಸುಧಾರಕ ಸಮಾಜವಾದದ ಜೊತೆಗೆ ವಿವಿಧ ರೂಪದ ವಾದಗಳು ಸಮಾಜವಾದವೆಂಬ ಶಿರೋನಾಮೆಯಲ್ಲಿ ತಲೆಹಾಕಿದವು. ಆದರೆ ಯಾವ ಹೊಸವಾದವೂ ಬಂಡವಾಳಶಾಹಿ ವ್ಯವಸ್ಥೆ ತನ್ನೊಡನೆ ತಂದಿದ್ದ ವರ್ಗವಿರಸ, ಆರ್ಥಿಕದುಃಸ್ಥಿತಿ, ನಿರುದ್ಯೋಗ, ಯುದ್ಧ, ಶೋಷಣೆ ಮತ್ತು ಪ್ರಜಾಸತ್ತೆಯ ಸೋಗಿನಲ್ಲಿ ನಡೆಯುವ ವರ್ಗ-ರಾಜಕೀಯ ಇವುಗಳನ್ನು ಮಾರ್ಕ್ಸ್ ವಾದದಂತೆ ವಿಮರ್ಶಿಸಲೂ, ಇವುಗಳಿಗೆ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯ ಅಂತರಾಳವನ್ನು ಭೇದಿಸಲೂ ಅಶಕ್ತವಾಗಿದ್ದಿತು. ಆದರೆ, ನೊಂದ ಜನತೆ ಮಾತ್ರ
ಪರಿಹಾರವನ್ನು ಹುಡುಕುತ್ತಿತ್ತು.
{{gap}}ಈ ಹೊಸ ವಾದಗಳು ಸಮಾಜದ ಅವ್ಯವಸ್ಥೆಗೆ ಬಗೆ ಬಗೆಯ ಕಾರಣಗಳನ್ನು ಹುಡುಕಿ ಬಗೆ ಬಗೆಯ ರೂಪದ ಉತ್ತರಗಳನ್ನು ಕೊಟ್ಟವು.
{{rule}}
<small>ವಾದೀ ಪ್ರಜಾಸತ್ತಾತ್ಮಕರನ್ನು ಅನುಕೂಲಸಿಂಧುಗಳೆಂದೂ (opportunists), ಸ್ವಪಕ್ಷ ದ್ರೋಹಿ (Renegades) ಗಳೆಂದೂ ಘೋಷಿಸಿದನು. ಕ್ರಾಂತಿಕಾರೀ ಪಕ್ಷದ ಮೂರನೆ ಅಂತರರಾಷ್ಟ್ರೀಯವನ್ನು ಸ್ಥಾಪಿಸಿದನು. ಲೆನಿನ್ನನ ಹಿಂಬಾಲಕರನ್ನು ಕಮ್ಯೂನಿಸ್ಟರೆಂದೂ, ಸುಧಾರಕ ಸಮಾಜವಾದಿಗಳನ್ನು ಸಮಾಜವಾದಿಗಳೆಂದೂ (Social Democrats or Socialists) ಕರೆಯುವುದು ರೂಢಿಗೆ ಬಂದಿತು.</small><noinclude></noinclude>
573x7ytj38zut08vuwyqqo4qqhrtlm6
ಪುಟ:ಕಮ್ಯೂನಿಸಂ.djvu/೧೨೭
104
98745
325127
273616
2026-06-28T15:52:00Z
Vikashegde
1258
/* Proofread */
325127
proofread-page
text/x-wiki
<noinclude><pagequality level="3" user="Vikashegde" />{{rh|center=ಸಮಾಜವಾದವೇ ಅಥವಾ ಬಂಡವಾಳವಾದವೇ?|left=|right=೧೧೩}}</noinclude>ಸಮಾಜವಾದದ ಧ್ಯೇಯ ಹೊಸದಲ್ಲವೆಂದು ಕ್ರೈಸ್ತ ಸಮಾಜವಾದಿಗಳು ಹೇಳಿದರು. ಏಸುಕ್ರಿಸ್ತ ಮತ್ತು ಇತರ ಸಾಧುಸಂತರು ಹೇಳಿರುವ ನೀತಿಗಳನ್ನು ಉದಹರಿಸಲಾಯಿತು. ಜನರು ಕ್ರಿಸ್ತನ ಬೋಧನೆಗಳನ್ನು ಮರೆತಿರುವುದೇ ಅವ್ಯವಸ್ಥೆಗೆ ಕಾರಣವೆಂದರು. ಆದುದರಿಂದ ಕ್ರಿಸ್ತನ
ಉಪದೇಶಗಳಲ್ಲಿ ನಂಬಿಕೆಯಿಟ್ಟು ಸನ್ಮಾರ್ಗಿಗಳಾಗಬೇಕೆಂದರು. ದಾನಧರ್ಮಗಳನ್ನು ಮಾಡುವುದಾದರೆ, ನೆರೆಹೊರೆಯವರನ್ನು ಸಹೋದರ ಸಹೋದರಿಯರೆಂದು ಭಾವಿಸುವುದಾದರೆ ಎಲ್ಲವೂ ಸರಿಹೋಗುವುದೆಂದರು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತಪ್ಪಿಲ್ಲ; ಮುಖ್ಯ, ಬಂಡವಾಳಗಾರರು ತಾವು ಗಳಿಸುತ್ತಿರುವ ವರಮಾನ ಮತ್ತು ಹೊಂದಿರುವ ಸಂಸತ್ತು ಎಲ್ಲವೂ ಸಮಾಜಕ್ಕೆ ಸೇರಿದ್ದೆಂದು ಬಗೆದು, ತಾವು ಸಮಾಜದ ಧರ್ಮದರ್ಶಿಗಳೆಂದು (Trustees)
ಭಾವಿಸುವುದಾದರೆ ವರ್ಗರಹಿತ, ವಿರಸರಹಿತ ಮತ್ತು ಶೋಷಣಾರಹಿತ ಸುಖೀಸಮಾಜ ಆಗಮಿಸುತ್ತದೆ ಎಂದರು.
{{gap}}ವಿಕಾಸ ಸಮಾಜವಾದಿಗಳು<sup>1</sup> ತಮ್ಮ ವಾದವನ್ನು ಮಂಡಿಸಿ, ಸಮಾಜವಾದ ಒಂದು ಧ್ಯೇಯ ಅಥವಾ ಗುರಿ ಮಾತ್ರ ಎಂದರು. ಆದುದರಿಂದ ಅದು
ಕೂಡಲೇ ಬರಲು ಸಾಧ್ಯವಿಲ್ಲ; ಸಾವಧಾನವಾಗಿ ಅದು ಬರಬೇಕು.
{{rule}}
<small>
{{gap}}(1) ಎಡ್ವರ್ಡ್ ಬರ್ನ್ ಸೈನ್ ಎಂಬ ಜರ್ಮನಿ ದೇಶದ ಸುಧಾರಕ ಸಮಾಜವಾದಿ ವಿಕಾಸಸಮಾಜವಾದವನ್ನು ಪ್ರತಿಪಾದಿಸಿದನು. ಮಾರ್ಕ್ಸ್ ವಿಮರ್ಶಿಸಿದ ರೀತ್ಯಾ ಬಂಡವಾಳ ಆರ್ಥಿಕ ವ್ಯವಸ್ಥೆಯ ಪತನ ಮತ್ತು ಸಮಾಜವಾದಿ ವ್ಯವಸ್ಥೆಯ ಆಗಮನ ಇವು ದುಸ್ಸಾಧ್ಯವೆಂದೂ, ಸದ್ಯದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಪತನ ಸಂಭವಿಸುವುದಿಲ್ಲವೆಂದೂ ಈತನ ವಾದವಾಗಿದ್ದಿತು. ಕ್ರಮೇಣ ಕಾರ್ಲ್‌ಕಾಟ್‌ಸ್ಕೀ ಮತ್ತು ಇತರರು ವಿಕಾಸವಾದದ ಆರಾಧಕರಾದರು.
{{gap}}ವಿಕಾಸ ಸಮಾಜವಾದದ ಜೊತೆಗೆ ಇನ್ನೂ ಹಲವು ಬಗೆಯ ವಾದಗಳು
ಪ್ರತಿಪಾದಿತವಾದವು. ಇವುಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು.</small><noinclude></noinclude>
pbdbtpzxf5bow9r22gfnf5je3ew053b
ಪುಟ:ಕಮ್ಯೂನಿಸಂ.djvu/೧೨೮
104
98746
325128
273617
2026-06-28T15:57:31Z
Vikashegde
1258
/* Proofread */
325128
proofread-page
text/x-wiki
<noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೧೪|right=}}</noinclude>ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಕೆಲವು ದೋಷಗಳನ್ನು ಎಲ್ಲರೂ ಒಪ್ಪುವ ರೀತಿಯಲ್ಲಿ ತಿದ್ದುಪಡಿ ಮಾಡುವುದರ ಮೂಲಕ ಧ್ಯೇಯವನ್ನು ಸಾಧಿಸಬೇಕಾಗಿದೆ ಎಂದರು.
{{rule}}
<small>ಒಂದು ಆರ್ಥಿಕ ವಾದ, ಇನ್ನೊಂದು ರಾಜಕೀಯವಾದ. ಬಂಡವಾಳ ಆರ್ಥಿಕವ್ಯವಸ್ಥೆ ನಿರೀಕ್ಷಣೆ ಮಾಡಿದಂತೆ ಸುಗುಮವಾಗಿಯೂ ವ್ಯವಸ್ಥಿತ ರೀತಿಯಲ್ಲಿಯೂ ವರ್ತಿಸದಿದ್ದುದು ಬಂಡವಾಳ ಶಾಹಿ ಅರ್ಥಶಾಸ್ತ್ರಜ್ಞರನ್ನು ದಿಗ್ಭ್ರಮೆಗೊಳಿಸಿತು. ಬಂಡವಾಳಶಾಹಿ ಅರ್ಥಶಾಸ್ತ್ರವನ್ನು ಮರುವಿಮರ್ಶೆಗೆ ಒಳಪಡಿಸಲಾಯಿತು. ಈ ರೀತಿ ಹೊರಬಿದ್ದ ಹೊಸ ವಾದಗಳಲ್ಲಿ ಜೆ. ಎಂ. ಕೀನ್ಸ್ ಎಂಬ ಅರ್ಥಶಾಸ್ತ್ರಜ್ಞನ ವಾದವು ಬಹುಮುಖ್ಯವಾದದ್ದು. ಕೂಡಾಣಿಕ (Savings) ಮತ್ತು ಬಂಡವಾಳ ವಿನಿಯೋಗದ (Investment) ನೀತಿ ಮತ್ತು ಹಣಕಾಸಿನ ನೀತಿಯ ಮೂಲಕ ನಿರುದ್ಯೋಗವನ್ನೂ, ಆರ್ಥಿಕ ಕ್ಷೋಭೆಯನ್ನೂ ತಡೆಗಟ್ಟುವುದು ಸಾಧ್ಯವೆಂದನು. ಒಟ್ಟಿನಲ್ಲಿ, ಆಧುನಿಕ ಬಂಡವಾಳಶಾಹಿ ಅರ್ಥ ಶಾಸ್ತ್ರಜ್ಞರು ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರ ಪ್ರವೇಶಿಸುವುದನ್ನು ಅಂಗೀಕರಿಸಿದ್ದಾರೆ. ಮೊದಲು ಆರ್ಥಿಕ ಕ್ಷೇತ್ರದಲ್ಲಿ ಸರ್ಕಾರವು ಪ್ರವೇಶಿಸಕೂಡದೆಂಬುದು ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರ ವಾದವಾಗಿತ್ತು. (ಪುಟ 64, 65 ನೋಡಿ.)
ರಾಜಕೀಯ ವಾದಗಳಲ್ಲಿ 'ಬಹುವಾದ' (Pluralism) ಬಹು ಮುಖ್ಯವಾದದ್ದು. ಡುಗ್ವೀ (Duguit) ಮತ್ತು ಕ್ರಾಬೆ (Krabbe) ಈ ವಾದದ ಪ್ರಮುಖ ಪ್ರತಿಪಾದಿತರು. ಎಲಿಯಟ್, ಲಾಸ್ಕೀ, ಬಾರ್‌ಕರ್ ಇವರುಗಳು ಈ ವಾದವನ್ನು ಬೆಳಸಿದ್ದಾರೆ. ಯುದ್ಧಗಳಿಗೂ, ರಾಜ್ಯದಲ್ಲಿ ಸರ್ವಾಧಿಕಾರ ಛಾಯೆಗಳಿಗೂ ಮತ್ತು ನಶಿಸುತ್ತಿರುವ ವ್ಯಕ್ತಿ ಸ್ವಾತಂತ್ರ್ಯಗಳಿಗೂ ಸಾರ್ವಭೌಮ ತತ್ತ್ವದ (Sovereignty) ಆರಾಧನೆಯೇ ಪ್ರಮುಖ ಕಾರಣವಾಗಿದೆ ಎಂದು ವಾದಿಸಲಾಗಿದೆ. ಸಾರ್ಮಭೌಮ ತತ್ತ್ವದ ನಿರಾಕರಣೆಗೆ ಕರೆಕೊಡಲಾಗಿದೆ.
ಈ ವಾದಗಳ ಬಗ್ಗೆ ಹೆಚ್ಚು ಪ್ರಸ್ತಾವನೆ ಅನಗತ್ಯ ಸಾರ್ಮಭೌಮ ತತ್ತ್ವವು ಕುಸಿದಿಲ್ಲ ಮತ್ತು ಕುಸಿಯುವ ಚಿನ್ಹೆಗಳೂ ಇಲ್ಲ.</small><noinclude></noinclude>
29ujs8qtj930jqn25eb7ixfv3dgp6fv
ಸದಸ್ಯ:配合比全额更好(说说而已)
2
120976
325129
2026-06-28T23:38:53Z
配合比全额更好(说说而已)
8595
ಹೊಸ ಪುಟ: ನಮಸ್ಕಾರ!ನಾನು 配合比全额更好(说说而已).
325129
wikitext
text/x-wiki
ನಮಸ್ಕಾರ!ನಾನು 配合比全额更好(说说而已).
pht8p709hzm32c5xaxnums6rz2ob3cv