ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.9
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಕಮ್ಯೂನಿಸಂ.djvu/೧೨೯
104
98747
325131
273618
2026-07-01T04:01:21Z
Vikashegde
1258
/* Proofread */
325131
proofread-page
text/x-wiki
<noinclude><pagequality level="3" user="Vikashegde" />{{rh|center=ಸಮಾಜವಾದವೇ ಅಥವಾ ಬಂಡವಾಳವಾದವೇ?|left=|right=೧೧೫}}</noinclude>{{gap}}ಫೇಬಿಯನ್ ಸಮಾಜವಾದಿಗಳು<sup>1</sup> ತಮ್ಮ ವಾದವನ್ನು ಮಂಡಿಸಿ,
ಕಾರ್ಮಿಕರು ತಮ್ಮ ವಿಮೋಚನೆಗಾಗಿ ಕ್ರಾಂತಿಕಾರ ಚಳವಳಿಯನ್ನು ಮೊದಲು ಬಿಡಬೇಕೆಂದರು. ವರ್ಗಗಳಾಗಲೀ ಮತ್ತು ವರ್ಗವಿರಸವಾಗಲೀ ಇಲ್ಲವೆಂದರು. ಕಾರ್ಮಿಕರು ತಮ್ಮ ಧ್ಯೇಯ ಸಾಧನೆಗಾಗಿ ಕ್ರಾಂತಿಯ ಮೂಲಕ ಏಕೈಕ ಕಾರ್ಮಿಕರ ಪ್ರಭುತ್ವವನ್ನು ರಚಿಸುವುದೂ, ಒಪ್ಪದವರನ್ನು ಒಪ್ಪುವ ಹಾಗೆ ಬಲಾತ್ಕಾರಪಡಿಸುವುದೂ ಪ್ರಜಾಪ್ರಭುತ್ವದ ತತ್ತ್ವಕ್ಕೆ ವಿರುದ್ಧವಾಗಿದೆ ಎಂದರು. ಮೊದಲು ಮಾಡಬೇಕಾಗಿರುವ ಕೆಲಸವೆಂದರೆ
ಎಲ್ಲರಿಗೂ ಬೇಕಾಗಿರುವ ಸೌಲಭ್ಯಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸಾರ್ವಜಸಿಕರೇ ಒಟ್ಟಿನಲ್ಲಿ ನಡೆಸಬೇಕು. ಈ ರೀತಿಯ ಸಾರ್ವಜನಿಕ ಉದ್ಯಮಗಳಿಂದ (Public Utilies) ಆಗುವ ಪ್ರಯೋಜನಗಳನ್ನು ಜನರಿಗೆ ತಿಳಿಸಬೇಕು. ಉದಾಹರಣೆಗೆ ಒಂದು ಊರಿಗೆ ದೀಪ, ನೀರು, ಹಾಲು, ಇತ್ಯಾದಿ ಎಲ್ಲರಿಗೂ ಬೇಕಾದ್ದರಿಂದ ಇವುಗಳನ್ನು ಖಾಸಗೀ ಉದ್ಯಮಕ್ಕೆ ಬಿಡದೆ ಮುನಿಸಿಪಾಲಿಟಿ ಅಥವಾ ಗ್ರಾಮಪಂಚಾಯಿತಿ ವಹಿಸಿಕೊಂಡು ನಡೆಸಬೇಕು. ಇಷ್ಟು ಮಾಡಿದರೆ, ಸಾರ್ವಜನಿಕ ಉದ್ಯಮಗಳಿಂದ ಆಗುವ ಪ್ರಯೋಜನಗಳಿಂದ ಜನರು ಪರಿವರ್ತನೆ ಹೊಂದುವರು. ಅವ್ಯವಸ್ಥೆಗೆ
{{rule}}
<small>
(1) ಜಾರ್ಜ್ ಬನಾರ್ಡ್ ಷಾ, ಸಿಡ್ನಿ ವೆಬ್ ಮತ್ತು ಇತರರಿಂದ ಪ್ರತಿಪಾದಿತವಾದ
ವಾದ. ಮಾರ್ಕ್ಸ್ ಎಂಗೆಲ್ಸರು ಬಂಡವಾಳ ಆರ್ಥಿಕವ್ಯವಸ್ಥೆಯ ಬಗ್ಗೆ ಮಾಡಿದ
ವಿಮರ್ಶೆಯನ್ನು ಅಂಗೀಕರಿಸಲು ನಿರಾಕರಿಸಿದರು. ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರ ತತ್ತ್ವ ಮತ್ತು ಸಂಪ್ರದಾಯಕ್ಕೆ ಮನ್ನಣೆಕೊಡಲಾಯಿತು, ಜಾನ್ ಸ್ಟೂವರ್ಟ್ ಮಿಲ್ ಮತ್ತು ಜವನ್ಸ್‌ರ ಅರ್ಥಶಾಸ್ತ್ರಗಳಿಂದ ಸ್ಫೂರ್ತಿ ಪಡೆದು ಹೊಸಬಗೆಯ ಸಮಾಜವಾದೀ ತತ್ತ್ವದ ಪ್ರತಿಪಾದನೆಗೆ ಮಾರ್ಗದರ್ಶನವನ್ನು ಅವರು ಕಂಡರು. ಬಹಳ ಕಾಲದವರೆಗೆ ಫೇಬಿಯನ್ನರು ಒಂದು ಸಣ್ಣ ಗುಂಪಾಗಿಯೇ ಉಳಿದಿದ್ದರು. ಕ್ರಮೇಣ 1918 ರಲ್ಲಿ ಫೇಬಿಯನ್ ತತ್ತ್ವಗಳನ್ನು ಬ್ರಿಟಷ್ ಲೇಬರ್ ಪಕ್ಷ ಅಂಗೀಕರಸಿ ಸಮಾಜವಾದೀ ಕಾರ್ಯಕ್ರಮವನ್ನು ಮಂಡಿಸಿತು. ಇದರಿಂದಾಗಿ ಬ್ರಿಟಿಷ್ ಸಮಾಜವಾದದ ಹುಟ್ಟು ಮತ್ತು ಹಿನ್ನೆಲೆ ಬೇರೆಯಾಯಿತು.
ರೋಮ್ ದೇಶದ ಫೇಬಿಯಸ್ ಎಂಬ ಯೋಧನು ಶತ್ರುಗಳನ್ನು ಸದೆಬಡಿಯಲು ಅನುಸರಿಸಿದ ಚಾಕಚಕ್ಯತೆಗಳಿಗೆ ಮೆಚ್ಚಿಗೆ ಸೂಚಿಸಿ ಸಂಘಕ್ಕೆ ಫೇಬಿಯನ್ ಸಂಘವೆಂದು ಹೆಸರು ಕೊಡಲಾಯಿತು.</small><noinclude></noinclude>
ie4vbkuykepntkb1vwkp9uq9hmdhehv
ಪುಟ:ಕಮ್ಯೂನಿಸಂ.djvu/೧೩೦
104
98748
325132
273620
2026-07-01T04:06:34Z
Vikashegde
1258
/* Proofread */
325132
proofread-page
text/x-wiki
<noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೧೬|right=}}</noinclude>ಕಾರಣವಾದ ಬಂಡವಾಳ ಆರ್ಥಿಕವ್ಯವಸ್ಥೆಯ ನಾಶಕ್ಕೆ ಬೆಂಬಲವೂ ಬಹುಮತವೂ ಸಿಕ್ಕುತ್ತದೆ. ಸಮಾಜವಾದದ ಸ್ಥಾಪನೆ ಸುಗಮವಾಗುತ್ತದೆ.
{{gap}}ಗಿಲ್ಡ್ ಸಮಾಜವಾದಿಗಳು<sup>1</sup> ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಅವ್ಯವಸ್ಥೆಗಳಿಗೆ ಉತ್ಪಾದನಾ ಸಾಧನಗಳ ನಿರ್ವಹಣೆಯಲ್ಲೂ ಮತ್ತು
ರಾಜ್ಯಾಡಳಿತದಲ್ಲೂ ದುಡಿಯುವವರಿಗೆ ಮತ್ತು ಜನಸಮುದಾಯಕ್ಕೆ ಸರಿಸಮಾನ ಪ್ರಾತಿನಿಧ್ಯ ಮತ್ತು ಪ್ರಜಾಸತ್ತೆ ಇಲ್ಲದಿರುವುದೇ ಕಾರಣವೆಂದು ತಿಳಿಸಿದರು. ಆದುದರಿಂದ ಆರ್ಥಿಕ ಕ್ಷೇತ್ರದಲ್ಲಿ ಪ್ರತಿಯೊಂದು ಗುಂಪಿಗೂ ಪ್ರಾಧಾನ್ಯತೆ ಮತ್ತು ಪ್ರಾತಿನಿಧ್ಯವೂ, ಮತ್ತು ಅದರಂತೆ ಪ್ರತಿಯೊಂದು ಗುಂಪಿಗೂ ಪ್ರಾತಿನಿಧ್ಯ ಇರುವಂತೆ ವಿಧಾನಸಭೆಯೊಂದನ್ನು ರಚಿಸಬೇಕೆಂದರು. ಆಗ ಯಾವ ವರ್ಗವೂ ಮೇಲುಗೈ ಆಗದೆ, ವರ್ಗವಿರಸಕ್ಕೆ ಆಸ್ಪದವಿಲ್ಲದೆ, ರಾಜಕೀಯ ಪ್ರಜಾಸತ್ತೆಯ ಜೊತೆಗೆ ಆರ್ಥಿಕ ಪ್ರಜಾಸತ್ತೆಯೂ ಲಭಿಸುವುದೆಂದರು.
ಸಿಂಡಿಕ ಸಮಾಜವಾದಿಗಳು<sup>2</sup> (Syndicalists) ತಮ್ಮ ವಾದವನ್ನು
ಮಂಡಿಸಿ, ಇತರ ಸಮಾಜವಾದೀ ಮಾರ್ಗಗಳಿಂದ ಸಮಾಜವಾದದ ಆಗಮನ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ನಾಶ ಇವು ನಿಧಾನವಾಗುವುದೆಂದೂ, ಆದುದರಿಂದ ಕಾರ್ಮಿಕರು ಸಾರ್ವತ್ರಿಕ ಮುಷ್ಕರವನ್ನು ಹೂಡಬೇಕೆಂದೂ, ಅದರ ಮೂಲಕ ಸಮಾಜವಾದ ಕೂಡಲೇ ಲಭಿಸುವುದೆಂದೂ ಸೂಚಿಸಿದರು.
{{rule}}
<small>
{{gap}}(1) ಜಿ. ಡಿ. ಎಚ್. ಕೋಲ್, ಪೆಂಟ, ಎಸ್. ಜಿ. ಹಾಬ್ ಸನ್ ಮತ್ತು ಇತರರಿಂದ ಪ್ರತಿಪಾದಿತವಾದ ವಾದ. ವಿಲಿಯಮ್ ಮಾರಿಸ್ ಮತ್ತು ಜಾನ್ ರಸ್ಕಿನರ ಬರೆವಣಿಗೆಗಳು ಈ ವಾದದ ಪ್ರತಿಪಾದಕರಮೇಲೆ ತುಂಬಾ ಪರಿಣಾಮವನ್ನು ಉಂಟುಮಾಡಿದವು. ಬಂಡವಾಳ ಆರ್ಥಿಕವ್ಯವಸ್ಥೆ ಒಂದು ಯಾಂತ್ರಿಕ ವ್ಯವಸ್ಥೆಯಾಗಿ ವ್ಯಕ್ತಿಯೂ ಸಹ ಒಂದು ಯಂತ್ರವಾಗುತ್ತಿರುವುದನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದು ರಸ್ಕಿನ್ನನ ವಾದವಾಗಿತ್ತು.
{{gap}}ಫೇಬಿಯನ್ ಸಮಾಜವಾದಿಗಳಿಗಿಂತ ಗಿಲ್ಡ್ ಸಮಾಜವಾದಿಗಳು ಸ್ವಲ್ಪ ಉಗ್ರವಾದಿಗಳು. ಫೇಬಿಯನ್ನರು ನಂಬಿದ್ದಂತೆ ಕೇವಲ ಸುಧಾರಣೆಗಳಿಂದ ಸಮಾಜವಾದಿ ವ್ಯವಸ್ಥೆ ಬರುವುದಿಲ್ಲವೆಂದು ತಿಳಿಸಿದರು. ಆದರೆ ಅವರಂತೆಯೇ ಮಾರ್ಕ್ಸ್ ವಾದಸರಣಿಗೆ ವಿರೋಧವನ್ನು ವ್ಯಕ್ತಪಡಿಸಿದರು.
{{gap}}(2) ಬ್ಲಾಂಕ್ವೀ ಎಂಬಾತನು ಈ ತತ್ತ್ವದ ಮೂಲ ಪ್ರತಿಪಾದಕನು. ಕಾಲಕ್ರಮೇಣ ತತ್ತ್ವ ಹಲವು ರೂಪಾಂತರಗಳನ್ನು ತಾಳಿತು, ಕೆಲವರು ಬಾಕುನೀನ್ ಎಂಬ</small><noinclude></noinclude>
pcsfy7kgdxxi5zarzsugp3r3lnzy2nu
325133
325132
2026-07-01T04:06:51Z
Vikashegde
1258
325133
proofread-page
text/x-wiki
<noinclude><pagequality level="3" user="Vikashegde" />{{rh|center=ವೈಜ್ಞಾನಿಕ ಸಮಾಜವಾದ|left=೧೧೬|right=}}</noinclude>ಕಾರಣವಾದ ಬಂಡವಾಳ ಆರ್ಥಿಕವ್ಯವಸ್ಥೆಯ ನಾಶಕ್ಕೆ ಬೆಂಬಲವೂ ಬಹುಮತವೂ ಸಿಕ್ಕುತ್ತದೆ. ಸಮಾಜವಾದದ ಸ್ಥಾಪನೆ ಸುಗಮವಾಗುತ್ತದೆ.
{{gap}}ಗಿಲ್ಡ್ ಸಮಾಜವಾದಿಗಳು<sup>1</sup> ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಉಂಟಾಗಿರುವ ಅವ್ಯವಸ್ಥೆಗಳಿಗೆ ಉತ್ಪಾದನಾ ಸಾಧನಗಳ ನಿರ್ವಹಣೆಯಲ್ಲೂ ಮತ್ತು
ರಾಜ್ಯಾಡಳಿತದಲ್ಲೂ ದುಡಿಯುವವರಿಗೆ ಮತ್ತು ಜನಸಮುದಾಯಕ್ಕೆ ಸರಿಸಮಾನ ಪ್ರಾತಿನಿಧ್ಯ ಮತ್ತು ಪ್ರಜಾಸತ್ತೆ ಇಲ್ಲದಿರುವುದೇ ಕಾರಣವೆಂದು ತಿಳಿಸಿದರು. ಆದುದರಿಂದ ಆರ್ಥಿಕ ಕ್ಷೇತ್ರದಲ್ಲಿ ಪ್ರತಿಯೊಂದು ಗುಂಪಿಗೂ ಪ್ರಾಧಾನ್ಯತೆ ಮತ್ತು ಪ್ರಾತಿನಿಧ್ಯವೂ, ಮತ್ತು ಅದರಂತೆ ಪ್ರತಿಯೊಂದು ಗುಂಪಿಗೂ ಪ್ರಾತಿನಿಧ್ಯ ಇರುವಂತೆ ವಿಧಾನಸಭೆಯೊಂದನ್ನು ರಚಿಸಬೇಕೆಂದರು. ಆಗ ಯಾವ ವರ್ಗವೂ ಮೇಲುಗೈ ಆಗದೆ, ವರ್ಗವಿರಸಕ್ಕೆ ಆಸ್ಪದವಿಲ್ಲದೆ, ರಾಜಕೀಯ ಪ್ರಜಾಸತ್ತೆಯ ಜೊತೆಗೆ ಆರ್ಥಿಕ ಪ್ರಜಾಸತ್ತೆಯೂ ಲಭಿಸುವುದೆಂದರು.
{{gap}}ಸಿಂಡಿಕ ಸಮಾಜವಾದಿಗಳು<sup>2</sup> (Syndicalists) ತಮ್ಮ ವಾದವನ್ನು
ಮಂಡಿಸಿ, ಇತರ ಸಮಾಜವಾದೀ ಮಾರ್ಗಗಳಿಂದ ಸಮಾಜವಾದದ ಆಗಮನ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ನಾಶ ಇವು ನಿಧಾನವಾಗುವುದೆಂದೂ, ಆದುದರಿಂದ ಕಾರ್ಮಿಕರು ಸಾರ್ವತ್ರಿಕ ಮುಷ್ಕರವನ್ನು ಹೂಡಬೇಕೆಂದೂ, ಅದರ ಮೂಲಕ ಸಮಾಜವಾದ ಕೂಡಲೇ ಲಭಿಸುವುದೆಂದೂ ಸೂಚಿಸಿದರು.
{{rule}}
<small>
{{gap}}(1) ಜಿ. ಡಿ. ಎಚ್. ಕೋಲ್, ಪೆಂಟ, ಎಸ್. ಜಿ. ಹಾಬ್ ಸನ್ ಮತ್ತು ಇತರರಿಂದ ಪ್ರತಿಪಾದಿತವಾದ ವಾದ. ವಿಲಿಯಮ್ ಮಾರಿಸ್ ಮತ್ತು ಜಾನ್ ರಸ್ಕಿನರ ಬರೆವಣಿಗೆಗಳು ಈ ವಾದದ ಪ್ರತಿಪಾದಕರಮೇಲೆ ತುಂಬಾ ಪರಿಣಾಮವನ್ನು ಉಂಟುಮಾಡಿದವು. ಬಂಡವಾಳ ಆರ್ಥಿಕವ್ಯವಸ್ಥೆ ಒಂದು ಯಾಂತ್ರಿಕ ವ್ಯವಸ್ಥೆಯಾಗಿ ವ್ಯಕ್ತಿಯೂ ಸಹ ಒಂದು ಯಂತ್ರವಾಗುತ್ತಿರುವುದನ್ನು ತಡೆಗಟ್ಟುವುದು ಅಗತ್ಯವಾಗಿದೆ ಎಂದು ರಸ್ಕಿನ್ನನ ವಾದವಾಗಿತ್ತು.
{{gap}}ಫೇಬಿಯನ್ ಸಮಾಜವಾದಿಗಳಿಗಿಂತ ಗಿಲ್ಡ್ ಸಮಾಜವಾದಿಗಳು ಸ್ವಲ್ಪ ಉಗ್ರವಾದಿಗಳು. ಫೇಬಿಯನ್ನರು ನಂಬಿದ್ದಂತೆ ಕೇವಲ ಸುಧಾರಣೆಗಳಿಂದ ಸಮಾಜವಾದಿ ವ್ಯವಸ್ಥೆ ಬರುವುದಿಲ್ಲವೆಂದು ತಿಳಿಸಿದರು. ಆದರೆ ಅವರಂತೆಯೇ ಮಾರ್ಕ್ಸ್ ವಾದಸರಣಿಗೆ ವಿರೋಧವನ್ನು ವ್ಯಕ್ತಪಡಿಸಿದರು.
{{gap}}(2) ಬ್ಲಾಂಕ್ವೀ ಎಂಬಾತನು ಈ ತತ್ತ್ವದ ಮೂಲ ಪ್ರತಿಪಾದಕನು. ಕಾಲಕ್ರಮೇಣ ತತ್ತ್ವ ಹಲವು ರೂಪಾಂತರಗಳನ್ನು ತಾಳಿತು, ಕೆಲವರು ಬಾಕುನೀನ್ ಎಂಬ</small><noinclude></noinclude>
1yngi37yl7wse7kcryzbenek4evr56o