ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.9
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಹಗಲಿರಳು.pdf/೧೧
104
120977
325135
2026-07-03T11:48:17Z
Viveka BG
8559
/* Proofread */
325135
proofread-page
text/x-wiki
<noinclude><pagequality level="3" user="Viveka BG" /></noinclude> ಕನ್ನಡ ಕೋಗಿಲೆ , ಎಪ್ರಿಲ್-1918.
------------------------------------------------------
ವರಿಯಲಿಕ್ಕಿರುವ ಚಿಕ್ಕವರಿಗೆ, ಲೋಕವ್ಯವಹಾರಗಳನ್ನು, ಕೈಗನ್ನಡಿಯಾಗುವಂತೆ,
ತಿಳಿಸುವುದೆಂದರೆ, ಹೀಗೆಯೆ. ಆದರೆ, ಆಬೆಳಕುಳಕುಗಳ ಹುಟ್ಟು, ಯಾರಿಂದ?-ನೋಡೋಣ ಅವುಗಳು ತರತರವಾಗಿನೆ. ಅದರಿಂದ, ಅವುಗಳ ತಾಯಿಮನೆಯೂ, ಒಂದಲ್ಲ,
ಎರಡಲ್ಲ ಹತ್ತಲ್ಲ, ಹಲವು ಎಂದು ಕೆಲವರು ಹೇಳಬಹುದು. ಅದು ಸರಿಯಲ್ಲ.
ಸೊರ್ಯ ಚoದ್ರ ಅಗ್ನಿ ಮೊದಲಾದ, ಹೆಲವು ತೇಜೋರಾಶಿಗಳು, ಅಲ್ಪಸ್ವಲ್ಪ ತಾರ
ತಮ್ಯವುಳ್ಳ ಮಕ್ಕಳಂತೆ, ಒಂದೆ ತಾಯಿಯ ಮಕ್ಕಳು. ಆ ತಾಯಿಯೆ, ಯೋಗಿಗಳು
ಸೇವಿಸುವ ಬ್ರಹ್ಮವಿದ್ಯೆ ಅವಳ ನಾಡೆ 'ಆನಂದಸಾಮ್ರಾಜ್ಯವು. ಹಲವರು ಆ
ವಿದ್ಯೆಯನ್ನೂ ಅದರ ಅಂಗಗಳಾದ ಕಳಾಶಾಸ್ತ್ರಗಳನ್ನೂ ಅಭ್ಯಾಸಮಾಡಿ, ತಿಳಿದು
ಕೊಳ್ಳುತ್ತಾರೆ. ಆದರೇನು? ಅವರ ಮನಸ್ಸು ನೆಲೆಗೊಳ್ಳದಿರುವುದರಿಂದ, ಹದ
ವಾಗದ ಹಿಟ್ಟು, ಕಜ್ಚಾಯಕ್ಕೆ ಬಾರದೆ, ಅರುಚಿಗೂ, ಆಜೀರ್ಣಕ್ಯೂ, ಆಮೂಲಕ,
ರೋಗಕ್ಕೂ ಕಾರಣವಾಗುವಂತೆ, ಲೋಕಕಂಟಿಕರೆ ಆಗುತ್ತಾರೆ.
ಅದಿರಲಿ, ಆ ಅನಂದಸಾಮ್ರಾಜ್ಯದಲ್ಲಿ ಆರ್ಯ (ಸೊರ್ಯ)ನೆ ದೊರೆ. ಉಳಿ
ದವರೆಲ್ಲರೊ ಅವನ ಕಿರಿಯರು. ಆರ್ಯನು ಇದಿರುಬಂದೊಡನೆ, ಎಲ್ಲರೂ
ಕೈಮುಗಿದು ವಿಧೇಯತೆಯನ್ನು ಪ್ರಕಟಿಸುತ್ತಾರೆ.ಆದರೆ , ಆ ಒಳಗಿನವರು, ಅವನಲ್ಲಿ
ಹೊಟ್ಟೆಕಿಚ್ಚುಪಡುತ್ತಿದ್ದಾರೆ, ಅಲ್ಲವೆ, ಅವನು ಉದ್ಧತಾನಾಗಿ ಕಂಡವರ ತಲೆ
ಯಲ್ಲಿ ಪಾದವಿಡುವುದಾದರೆ, ಅದು ಅಪಾಯಕರವೆ. ಇರಲಿ ಒಳಗೊಳಗಿನ ಎಣಿಕೆ
ಗಳನ್ನು ಹೊರಹೊರಗಿಂದ ಕಂಡುಹಿಡಿಯುವುದೆಂದರೆ ಬಹಳ ಬಾರಿ ನಿಪ್ಪಲನೆ ಅಗುವುದು.
ಅಯಾ ಅಭಿಪ್ರಾಯಗಳನ್ನು ಅವರವರ ಕೆಲಸಗಳಿಂದಲೆ ಅಲ್ಲಿಂದಲ್ಲಿಗೆ ಅಚ್ಚುಕಟ್ಟಾಗಿ
ಗೊತ್ತುಹಚ್ಚುಬೇಕು. ಅನುಮಾನಕ್ಕಿಂತಲೂ ಪ್ರತ್ಯಕ್ಷ್ಯವೆ ಉತ್ತಮವಲ್ಲವೆ?
ಇನ್ನು "ಕತ್ತಲೆಯೆಂದರೇನು? ಎಂಬುದೊಂದು ಪ್ರಶ್ನವಿದೆ. ಅದಕ್ಕೆ, ಹಿರಿ
ಮರ ಹೇಳಿಕೆ ಹೀಗೆ
ಕತ್ತಲೆಯೆಂಬುದೊಂದು, ಬೇರೆ ಪದಾರ್ಥವಲ್ಲ. ಬೆಳಕಿಲ್ಲದುದೇ ಅದು.
ಅದನ್ನು "ತೇಜಸ್ಸಿನ ಆಭಾವ'ವೆಂದು ಕರೆಯುತ್ತಾರೆ. ಪ್ರಬಲವಾದ, ಯಾವುದಾದರೊಂದು
ತೇಜಸ್ಸು ಬಯಲಿಗೆ ಬಂದೊಡನೆ, ಅದು ಮಾಯವಾಗುವುದೆ, ಇದಕ್ಕೆ ಸಾಕ್ಷಿ,ಮಾಯಾದೇವಿಯೆಂದರೆ,
, ಹೇಗೆ ಅಜ್ಞಾನ ಸ್ವರೂಪವೊ, ಹಾಗೆಯೆ ಇದೂ
ಆದರ ರೂಪಾಂತರವು.
---------------------------------------------------------1.ಕೈ -ಹಸ್ತ,ಪ್ರಕಾಶ. 2.ಪಾದ- ಚಾರಣ,ಕಿರಣ.<noinclude></noinclude>
f2x8d24r7fulajdra7ufuyvmj8mk75m