ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.7
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಚಂದ್ರನಾಥ.pdf/೬
104
120902
325097
324960
2026-06-20T14:10:46Z
Hariprasad Shetty10
7490
/* Validated */
325097
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{center|{{x-larger|'''ಪ್ರಕಾಶಕರ ಮಾತು'''}}}}
ಭಾರತೀಯ ಸಾಹಿತ್ಯಕ್ಕೆ ಹೊಸ ಬಗೆಯ ಕಾದಂಬರಿಗಳನ್ನೊದಗಿಸಿದ ದಿವಂಗತ ಶರಚ್ಚಂದ್ರರ ತಕ್ಕಷ್ಟು ಕೃತಿಗಳು ಕನ್ನಡಕ್ಕೆ ಬಂದಿವೆ. ಆದ್ದರಿಂದ ಅವರ ಸಾಹಿತ್ಯವನ್ನು ಕುರಿತು ಇಲ್ಲಿ ನಾನು ಹೆಚ್ಚು ಏನೂ ಹೇಳುವ ಅಗತ್ಯವಿಲ್ಲ. ಈ ಕಾದಂಬರಿ - ಚಂದ್ರನಾಥ - ೧೯೩೭ರಲ್ಲಿ ಧಾರವಾಡದ 'ಪ್ರೇಮ
ಗ್ರಂಥಮಾಲೆ'ಯಲ್ಲಿ ಮೊದಲ ಸಲ ಪ್ರಕಟವಾಯಿತು. ಈಗ ೪-೫ ವರುಷಗಳಿಂದ ಇದರ ಪ್ರತಿಗಳೆ ದೊರಕುತ್ತಿರಲಿಲ್ಲ. ಆದ್ದರಿಂದ ಶ್ರೀ. ಗುರುನಾಥ ಜೋಶಿಯವರ ಅಪ್ಪಣೆ ಪಡೆದು ಎರಡನೆ ಆವೃತ್ತಿಯನ್ನು ಈಗ ಪ್ರಕಟಿಸಲಾಗಿದೆ. ಈ ಬಗ್ಗೆ ಒಪ್ಪಿಗೆ ಕೊಟ್ಟ ಶ್ರೀ. ಗುರುನಾಥ ಜೋಶಿಯವರಿಗೆ ಕೃತಜ್ಞತೆಗಳು.
ಮೊದಲ ಆವೃತ್ತಿಗೂ ಈ ಆವೃತ್ತಿಗೂ ಶೈಲಿಯಲ್ಲಿ - ಅಲ್ಲಲ್ಲಿ - ಸ್ವಲ್ಪ ಹೆಚ್ಚು ಕಡಿಮೆ ಇದೆ. ಇದೇ ಕಾದಂಬರಿಯ ಹಿಂದೀ ಕೃತಿಯನ್ನು ಎದುರಿಗಿಟ್ಟುಕೊಂಡು ಈ ಹೆಚ್ಚು ಕಡಿಮೆಯನ್ನು ಮಾಡಿದವರು ಶ್ರೀ. ಮ. ಗೋವಿಂದರಾಯರು. ಆದ್ದರಿಂದ ಈ ತಿದ್ದುವಿಕೆಯ ಜೊತೆಗೆ ಬಂದ ಒಳಿತು ಕೆಡಕುಗಳಿಗೆ ಗೋವಿಂದರಾಯರು ಹೊಣೆಯೆ ಹೊರತು ಭಾಷಾಂತರಕಾರರಾದ ಗುರುನಾಥ ಜೋಶಿಯವರಲ್ಲ.
ಸಾಧ್ಯವಾದರ ಇಂತಹ ಇನ್ನೂ ಹಲವು ಪುಸ್ತಕಗಳನ್ನು ಪ್ರಕಟಿಸುವ ಯೋಚನೆ ಇದೆ. ಅದಕ್ಕೆ ಬೇಕಾಗುವ ಹಲವು ಅನುಕೂಲತೆಗಳಲ್ಲಿ ಓದುಗರಿಂದ ಬರಬೇಕಾದ ನೆರವು ಬಹಳ ಮುಖ್ಯ. ಅದು ಸಿಗಬಹುದೆಂಬ ನಂಬುಗೆಯಿಂದ ಈ ಸಾಹಸ ಕೈಕೊಂಡಿದೆ.
ಚೆನ್ನಾಗಿ ಮುದ್ರಿಸಿಕೊಟ್ಟ ಬೆಂಗಳೂರಿನ ಟೌನ್ ಮುದ್ರಣಾಲಯವ ಒಡೆಯರಾದ ಹೆಚ್. ಎಲ್. ಪ್ರಸಾದರಿಗೂ, ಅಲ್ಲಲ್ಲಿ ತಿದ್ದಿದ ಶ್ರೀ. ಗೋವಿಂದರಾಯರಿಗೂ ನಾವು ಆಭಾರಿಗಳು.
ಏಪ್ರಿ೮, ೧೯೪೪
<br />ಬೆಂಗಳೂರು
{{Right|ಪ್ರಕಾಶಕ}}<noinclude></noinclude>
dl9avcy34f9g5vlopt17ea14rg0it8n
ಪುಟ:ಚಂದ್ರನಾಥ.pdf/೧೬
104
120920
325086
324965
2026-06-20T14:03:52Z
Santhosh Notagar99
7298
/* Validated */
325086
proofread-page
text/x-wiki
<noinclude><pagequality level="4" user="Santhosh Notagar99" /></noinclude>{{rh|left=೧೨}}
{{center|೪}}
ಚಂದ್ರನಾಥನ ಅತ್ತೆ ಹರಕಾಲಿಗೆ ಈಗ ಸುಖವೆನ್ನುವುದು ಉಳಿಯದಂತಾಯಿತು. ಪರಮಾತ್ಮ ಅವಳನ್ನು ದುಃಖದಲ್ಲಿಯೇ ದೂಡಿಬಿಟ್ಟಿದ್ದ. ಕೆಲವರಿಗೆ
ಈ ಸಂಸಾರವು ಮುಳ್ಳುಗಳಿಂದ ತುಂಬಿದ ಅರಣ್ಯವೆನಿಸುತ್ತದೆ. ಅವರು
ತಮಗಾಗಿ ಅದರೊಳಗೆ ಒಂದು ಮಾರ್ಗವನ್ನು ಹುಡುಕಿಕೊಂಡು ಮುಂದೆ
ಸಾಗಬೇಕಾಗುವುದು. ಕೆಲವರಿಗೆ ಮಾರ್ಗವು ಸಿಕ್ಕುವುದು. ಇನ್ನು ಹಲವರಿಗೆ
ಸಿಕ್ಕುವುದಿಲ್ಲ. ಹರಕಾಲಿಯೂ ಈ ಕಂಟಕಗಳಿಂದ ತುಂಬಿದ ಸಂಸಾರದಲ್ಲಿ
ಚಿಕ್ಕದಾದ ಒಂದು ಮಾರ್ಗವನ್ನು ಹುಡುಕುತ್ತಿದ್ದಳು. ಚಂದ್ರನಾಥನ ತಂದೆ
ತೀರಿಹೋದ ಮೇಲೆ ಅವಳಿಗೊಂದು ಒಳ್ಳೆಯ ಹಾದಿ ದೊರೆತಿದ್ದಿತು; ಆದರೆ
ಚಂದ್ರನಾಥನ ವಿವಾಹ, ಚಂದ್ರನಾಥನ ಹೆಂಡತಿ ಸರಯೂ, ಚಂದ್ರನಾಥ — ಸರಯೂ ಅವರ ಪ್ರೇಮ, ಮೊದಲಾದುವು ಆಕೆಯ ಮಾರ್ಗದಲ್ಲಿ ಬಂಡೆಗಲ್ಲುಗಳಾದುವು. ಹರಕಾಲಿಯ ತಂಗಿಯ ಐದು ವರ್ಷದ ಹುಡುಗಿಯೊಂದು ತನ್ನ ತಂದೆಯ ಮನೆಯಲ್ಲಿ ಬೆಳೆದು ಹತ್ತುವರುಷದ್ದಾಗಿದ್ದಿತು. ಈಗ ಆ ಮಾತು
ತೆಗೆದುಕೊಂಡು ಏನು ಪ್ರಯೋಜನ ? ಬಿಟ್ಟೇ ಬಿಡೋಣ ಅದನ್ನು. ಇವೆಲ್ಲ
ಕಾರಣಗಳಿಂದ ಹರಕಾಲಿಯ ಮನದಲ್ಲಿ ಮೂಡಿ ಬೆಳೆಯುತ್ತಲಿದ್ದ ಸುಖಶಾಂತಿಗಳು ಕಂದಿ ಕುಂದಿಹೋದುವು.
ಈಗಲೂ ಮನೆಗೆ ಹರಕಾಲಿಯ ಒಡತಿ ; ಆಕೆಯ ಪತಿಯೆ ಒಡೆಯ. ಎಲ್ಲವೂ ಮೊದಲಿನಂತೆಯೆ ಇದೆ. ಸರಯೂ ಅವರ ಮುಖವನ್ನೆ ನೋಡಿಕೊಂಡು ಅವರು ಹೇಳಿದಂತೆ ನಡೆಯುತ್ತಿದ್ದಾಳೆ. ಯಾವ ಬಗೆಯ ಅಹಂ ಭಾವವನ್ನೂ ತೋರಿಸುತ್ತಿಲ್ಲ. ಅವಳನ್ನು ನೋಡಿದರೆ ಮನೆಯಲ್ಲಿ ಇದೊಂದು ಸಾಧುವಾದ ಪ್ರಾಣಿಯೆಂದು ಎಲ್ಲರಿಗೂ ಎನಿಸುತ್ತದೆ. ಈ ಮನೆಯಲ್ಲಿ ಅವಳ ಅಧಿಕಾರ ಅವಳ ಹಕ್ಕು ಇದ್ದರೂ ಬೇರೆಯವರ ಅನುಗ್ರಹವನ್ನೆ ಅವಳು ಅವಲಂಬಿಸಿಕೊಂಡಿರಬೇಕಾಗಿದೆ. ಸರಿಯೂನನ್ನು ನೋಡಿದ ಕೂಡಲೆ ಹರಕಾಲಿಯ ಪತಿಗೆ ಅಪಾರವಾದ ಹರ್ಷವಾಗುತ್ತದೆ. ಅವರ ಬಾಯಿಂದ 'ನಮ್ಮ ಸೊಸೆಯೆಂದರೆ ಸ್ವರ್ಗದಿಂದ ಭೂಮಿಗೆ ಅವತರಿಸಿ ಬಂದ........' ಎಂದು ಮಾತುಗಳು ಹೊರಬೀಳುವಷ್ಟರಲ್ಲಿ ಹರಕಾಲಿ ಅವರನ್ನು ಬೆದರಿಸಿ “ಸಾಕು ಸಾಕು, ಸುಮ್ಮನಿರಿ. ತಿಳಿಯದೆ ಇದ್ದ ಮಾತಿನಲ್ಲಿ ಅಡ್ಡ ಬಾಯಿ ಹಾಕಬೇಡಿರಿ.<noinclude></noinclude>
r06xl7mg8i3yhy6aduwukysvox7yai4
ಪುಟ:ಚಂದ್ರನಾಥ.pdf/೧೭
104
120921
325087
324966
2026-06-20T14:04:19Z
Santhosh Notagar99
7298
/* Validated */
325087
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|right=೧೩}}
ನನ್ನ ತಂದೆ ತಾಯಂದಿರು ನಿಮಗೆ ಕೊಡುವ ಬದಲು ನನ್ನನ್ನು ಕೈಕಾಲು ಕಟ್ಟಿ
ಯಾವುದಾದರೂ ಬಾವಿಯಲ್ಲಿ ಚೆಲ್ಲಿದ್ದರೆ ನೆಟ್ಟಗಾಗುತ್ತಿತ್ತು” ಎನ್ನುತ್ತಿದ್ದಳು.
ಸರಿ, ವ್ರಜಕಿಶೋರರು ಚಿಕ್ಕಮುಖದೊಂದಿಗೆ ಹೊರಕ್ಕೆ ಹೋಗಿ ಬಿಡುತ್ತಿದ್ದರು.
ಹರಕಾಲಿಗೆ ಸುಮಾರು ಮೂವತ್ತು ವರ್ಷ. ಸರಯೂಗೆ ಇನ್ನೂ ಹದಿನೈದು ತುಂಬಿರಲಿಕ್ಕಿಲ್ಲ. ಸರಯೂ ಬಂದಂದಿನಿಂದ ಅವರಿಬ್ಬರ ಮನಸ್ಸಿನಲ್ಲಿ ಒಂದಿಲ್ಲೊಂದು ಬಗೆಯ ಯುದ್ಧ ನಡೆದೇ ಇದೆ. ಎಷ್ಟು ಮನಃಪೂರ್ವಕವಾಗಿ
ಯತ್ನಿಸಿದರೂ ಹರಕಾಲಿಗೆ ಜಯವು ಸಿಕ್ಕದಂತಾಗಿದೆ. ಇಷ್ಟು ಚಿಕ್ಕ ಹುಡಿಗಿಯ ಇಂತಹ ಕೆಚ್ಚು ನೋಡಿ ಅವಳಿಗೆ ಆಶ್ಚರ್ಯ. ಹೊರಗಿನವರಿಗೆ ಈ ಅಂತರ್ಯುದ್ದದಲ್ಲಿ ಸರಯೂ ಜಯ ಸಂಪಾದಿಸಿದ್ದಾಳೆನ್ನುವುದು ಗೊತ್ತಾಗಿಲ್ಲ. ಇದನ್ನು ಅವಳು ಹೊರಕ್ಕೂ ಹಾಕಿಲ್ಲ. ತನ್ನ ವಿಜಯದ ಕೀರ್ತಿಯನ್ನು ಸ್ವಲ್ಪವಾದರೂ ತನಗಿಟ್ಟುಕೊಳ್ಳದೆ ಎಲ್ಲವನ್ನೂ ಹರಕಾಲಿಗೇ ಕೊಟ್ಟುಬಿಟ್ಟಿದ್ದಾಳೆ.
ಇದರಿಂದಂತೂ ಹರಕಾಲಿ ತೀರ ಸೋತುಹೋಗಿದ್ದಾಳೆ. ಇನ್ನು ಅವಳು ಜೀವಮಾನದಲ್ಲಿ ಗೆದೆಯುವ ವಿಚಾರವನ್ನೆ ಎತ್ತುವಂತಿಲ್ಲ.
ಸರಯೂ ಮೂಕಿಯಲ್ಲ, ಹುಚ್ಚಿಯಲ್ಲ, ಎಂದು ಹರಕಾಲಿಗೆ ಗೊತ್ತು. ಎಂತೆಂತಹ ಮಾತುಗಳಿಗೂ ಅವಳು ತಲೆಬಾಗಿಸಿ ನಿಂತುಕೊಂಡೆ ಉತ್ತರ ವನ್ನೀಯುವಳು. ಅದನ್ನು ಕೇಳಿ ಹರಕಾಲಿ ಸ್ತಂಭಿತಳಾಗುತ್ತಾಳೆ. ಆಕೆಯೊಡನೆ ಒಪ್ಪಂದ ಮಾಡಿಕೊಳ್ಳಲಿಕ್ಕೂ ಆಗಲೊಲ್ಲದು. ತನ್ನವಳನ್ನಾಗಿ ಮಾಡಿಕೊಳ್ಳುವುದಕ್ಕೂ ಆಗಲೊಲ್ಲದು. ಸರಯೂ ಜಗಳಗಂಟೆಯೂ ಎದುರಾಡುವವಳೂ ಸ್ವಾರ್ಥಿಯೂ ನಿರ್ದಯಳೂ ಹೊಟ್ಟೆಕಿಚ್ಚಿನವಳೂ ಅಭಿಮಾನಿಯೂ ಇದ್ದುದಾಗಿದ್ದರೆ ಹರಕಾಲಿ ಬಹುಶ: ಗೆದೆಯಬಹುದಾಗಿದ್ದಿತು. ಸರಯೂ ತನ್ನ ಬಳಿಯಲ್ಲಿದ್ದ ದಯೆಯನ್ನು ಉದಾರ ಅಂತಃಕರಣದಿಂದ ಹಂಚಿ ಬಿಟ್ಟಿದ್ದಾಳೆ; ಆದುದರಿಂದ ಬೇರೆಯವರ ದಯೆ ಬೇಡಲು ಅವಳಿಗೆ ಎಡೆಯೆ ಸಿಕ್ಕುತ್ತಿರುವುದಿಲ್ಲ. ಈ ಮನೆಯ ಸಂಪೂರ್ಣ ಒಡತಿ ತಾನೇ ಎಂದೂ ಹರಕಾಲಿ ಈ ಮನೆಗೆ ಏನೂ ಸಂಬಂಧವಿಲ್ಲೆಂದೂ ಸರಯೂಗೆ ಚೆನ್ನಾಗಿಗೊತ್ತು. ಅದರೂ ತಾನು ಈ ಮನೆಗೆ ಯಃಕಶ್ಚಿತಳು, ಹರಕಾಲಿಯೆ ಸರ್‍ವಸ್ವ ಎಂದು ತೋರುವ ಹಾಗೆ ನಡತೆಯನ್ನಿಟ್ಟುಕೊಂಡಿದ್ದಾಳೆ. ಆದುದರಿಂದ<noinclude></noinclude>
56rtq5xdcd21eueq707mstn9mxs0bbi
ಪುಟ:ಚಂದ್ರನಾಥ.pdf/೧೮
104
120929
325088
324980
2026-06-20T14:04:47Z
Santhosh Notagar99
7298
/* Validated */
325088
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚ೦ದ್ರನಾಥ}}
{{rh|left=೧೪}}
ಹರಕಾಲಿ ಹೊಟ್ಟೆಕಿಚ್ಚಿನಿಂದ ಇನ್ನಿಷ್ಟು ಸುಟ್ಟು ಸುಟ್ಟು ಗಾಸಿಯಾಗುತ್ತಿದ್ದಾಳೆ.
ಸರಯೂ ಒಂದೇ ಒಂದು ಸ್ಥಾನವನ್ನು ತನ್ನ ಸಂಪೂರ್ಣ ಅಧಿಕಾರದಲ್ಲಿಟ್ಟುಕೊಂಡಿದ್ದಾಳೆ. ಅಲ್ಲಿ ಹರಕಾಲಿ ಯಾವ ಬಗೆಯಿ೦ದಲೂ ಕಾಲಿಡಲಾಗದು. ತನ್ನ ಪತಿಯ ಸುತ್ತಲೂ ಒಂದು ಅಗೋಚರವಾದ ಗೆರೆಯನೆಳೆದಿದ್ದಾಳೆ. ಅದನ್ನು ದಾಟಿಹೋಗದೆ ತನ್ನ ಪತಿಯನ್ನು ಮುಟ್ಟುವಹಾಗಿಲ್ಲ. ಹರಕಾಲಿ ಆ ಗೆರೆಯ ಹೊರಗಿದ್ದುಕೊಂಡು ಏನು ಬೇಕೋ ಅದನ್ನು ಮಾಡಲಿ. ಆದರೆ ಒಳಕ್ಕೆ ಹೆಜ್ಜೆಯನ್ನಿಕ್ಕಲು ಅವಳಿಗೆ ಅಧಿಕಾರವಿಲ್ಲ. ಈ ಗೇಣುದ್ದ ಹುಡುಗಿ ಯಾವುದೋ ಮಾಯಮಂತ್ರದಿಂದ ತನ್ನ ಉಗುರು
ಹಲ್ಲುಗಳಲ್ಲಿಯ ವಿಷವನ್ನು ಹರಣಮಾಡಿ ಬಿಟ್ಟಿದ್ದಾಳೆನ್ನುವದು ಹರಕಾಲಿಗೆ ಚೆನ್ನಾಗಿ ಗೊತ್ತಾಗುತ್ತಲಿದೆ.
ಹೀಗೆಯೆ ಆರು ವರುಷಗಳ ದೀರ್ಘಕಾಲವು ಕಳೆದುಹೋಯಿತು. ಹನ್ನೊಂದು ವರುಷದವಳಿದ್ದಾಗ ತನ್ನ ಪತಿಯ ಮನೆಗೆ ಬಂದಿದ್ದ ಸರಯೂ ಈಗ ಹದಿನೇಳು ವರುಷದವಳಾಗಿದ್ದಾಳೆ.
{{center|೫}}
ವಯಸ್ಸಿಗೆ ತಕ್ಕಂತೆ ಮಾನಕೊಡಬೇಕೆಂಬ ಜ್ಞಾನ ಪುರುಷರಲ್ಲಿರುವಂತೆ—
ಸ್ತ್ರೀಯರಲ್ಲಿರುವುದಿಲ್ಲ. ಪುರುಷರಲ್ಲಿ ಎಷ್ಟೋ ಅವಸ್ಥೆಗಳಿವೆ: ೧೦, ೨೦, ೩೦, ಇತ್ಯಾದಿ. ಮೂವತ್ತು ವರುಷದ ಯುವಕನೊಬ್ಬನು ತನಗಿಂತ ಚಿಕ್ಕವನಾದ ಇಪ್ಪತ್ತು ವರುಷದ ಯುವಕನೊಂದಿಗೆ ಅತ್ಯಂತ ಆದರ ಸನ್ಮಾನದಿಂದ ನಡೆದುಕೊಳ್ಳುತ್ತಾನೆ. ಆದರೆ ಸ್ತ್ರೀಯರಲ್ಲಿ ಈ ಪ್ರಕಾರದ ನಡತೆ ಕಂಡುಬರುವುದಿಲ್ಲ. ವಿವಾಹಿತರಾಗುವವರೆಗೆ ತಮ್ಮ ಅಕ್ಕ, ಅತ್ತಿಗೆ, ತಾಯಿ, ಅತ್ತೆ, ಮೊದಲಾದವರ
ಬಳಿಯಲ್ಲಿದ್ದು ಕೆಲವು ದಿವಸ ಉಮೇದುವಾರಿಕೆ ಮಾಡಿ ಕಲಿಯಬೇಕಾದುದನ್ನೆಲ್ಲ ಕಲಿತುಕೊಳ್ಳುತ್ತಾರೆ. ಆ ಮೇಲೆ ದೊಡ್ಡವರ ಸಾಲಿನಲ್ಲಿ ಸೇರಿಕೊಂಡು ಬಿಡುತ್ತಾರೆ. ಅಲ್ಲಿಗೆ ೧೬ ವರ್ಷದ ಹೆಂಗುಸರಿಂದ ಮೊದಲುಗೊಂಡು ೬೦ ವರ್ಷದ ಮುದುಕಿಯರ ವರೆಗೆ ಎಲ್ಲರೂ ಸಮಾನಸ್ಕಂಧರು. ಸ್ಥಾನಭೇದದಿಂದ ಇದರಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾಗಬಹುದಲ್ಲದೆ ಸಾಮಾನ್ಯವಾಗಿ ಅವರು ಸಮಾನ ದರ್ಜೆಯವರೆ ಆಗಿರುತ್ತಾರೆ. ಚಂದ್ರನಾಥನ ಊರಲ್ಲಿಯೂ<noinclude></noinclude>
7z3lxiec4lsy8hiyj8b681boyq6twix
ಪುಟ:ಚಂದ್ರನಾಥ.pdf/೧೯
104
120930
325089
324982
2026-06-20T14:05:15Z
Santhosh Notagar99
7298
/* Validated */
325089
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
ಹೀಗೆಯೆ. ಅಲ್ಲಿ ಊರಿನ ಹೆಂಗುಸರೆಲ್ಲರೂ ಸರಿಸಮಾನರಾಗಿಯೇ ಇದ್ದಾರೆ. ಹರಿಬಾಲೆ ಮುದುಕಿಯಾಗಿದ್ದರೂ ಕಿರಿಯರ ಸಮಾನಳೆ. ಒಂದು ಮಧ್ಯಾಹ್ನ
ಸರಯೂ ತನ್ನ ಮನೆಯಲ್ಲಿ ಪಶ್ಚಿಮದ ಕಿಟಕಿಯನ್ನು ತೆರೆದುಕೊಂಡು ಕುಳಿತು
ಆಕಾಶದ ಕಡೆಗೆ ನೋಡುತ್ತಿದ್ದಳು. ಹರಿಬಾಲೆ ಒಂದು ಕೈಯಲ್ಲಿ ಮಿಠಾಯಿಯ ತಟ್ಟೆ, ಇನ್ನೊಂದು ಕೈಯಲ್ಲಿ ಹೂವಿನ ತುರಾಯಿ ಹಿಡಿದುಕೊಂಡು ಸರಯೂನ
ಬಳಿ ಬಂದು ನಿಂತಳು. ಆ ತುರಾಯಿಯನ್ನು ಸರಯೂನ ಕೈಯಲ್ಲಿ ಕೊಟ್ಟು
" ಇಂದಿನಿಂದ ನೀನು ನನ್ನ ಸಖಿ. ಒಂದು ಸಲ ನನ್ನನ್ನು 'ಸಖಿ' ಎಂದು ಕರೆ ” ಎಂದಳು.
ಸರಯೂ ಧರ್ಮಸಂಕಟದಲ್ಲಿ ಬಿದ್ದಳು. ಆದರೂ ಅವಳು ನಸುನಕ್ಕು "ಒಳ್ಳೇದು ” ಎಂದಳು.
“ಒಳ್ಳೇದು ಎಂದ ಮಾತ್ರಕ್ಕೆ ಮುಗಿಯಲಿಲ್ಲ. ನೀನು 'ಸಖಿ ' ಎಂದು
ಕರೆಯಲೇಬೇಕು."
ಇದಕ್ಕೆ ನೀವು ಆದರವೆಂದಾದರೂ ಹೇಳಿ, ಪ್ರೀತಿಯೆಂದಾದರೂ ಹೇಳಿ ; ಸರಯೂನ ಜೀವನದಲ್ಲಿ ಈ ಬಗೆಯ ಘಟನೆ ಸಂಭವಿಸಿರಲಿಲ್ಲ. ಆದುದರಿಂದ ಇಷ್ಟು ಅಲ್ಪಾವಧಿಯಲ್ಲಿ ಈ ಆತ್ಮೀಯ ಭಾವನೆಯನ್ನು ತನ್ನದನ್ನಾಗಿ ಮಾಡಿ
ಕೊಳ್ಳದಾದಳು. ತನಗಿಂತ ಹೆಚ್ಚು ಹಿರಿಯಳಾದವಳನ್ನು ಆಲಿಂಗಿಸಿ 'ಸಖಿ' ಎನ್ನಲು
ಅವಳಿಗೆ ನಾಚಿಕೆಯಾಗತೊಡಗಿತು ; ಆದರೆ ಹರಿಬಾಲೆ ಬಿಡಲಿಲ್ಲ. ಹೀಗೆನ್ನುವುದು ಅಸ್ವಾಭಾವಿಕವೆಂದೂ ಹೊಸ ರೀತಿಯೆಂದೂ ಆಕೆಗೆ ಎನಿಸಲೇ ಇಲ್ಲ. ಆದುದರಿಂದಲೇ ಸರಯೂ 'ಸಖಿ' ಎನ್ನಲು ತಡಮಾಡುವುದನ್ನು ಅವಳು ಕಂಡು ಖಿನ್ನಳಾಗಿ “ ಹಾಗಾದರೆ ನನ್ನ ತುರಾಯಿ ಕೊಟ್ಟು ಬಿಡಮ್ಮಾ. ಇನ್ನೊಬ್ಬರ ಬಳಿಗೆ ಹೋಗುತ್ತೇನೆ” ಎಂದಳು.
ಸರಯೂಗೆ ಏನು ಮಾಡಬೇಕೆನ್ನುವುದು ಹೊಳೆಯಲಿಲ್ಲ. ಆದರೆ ಕೊಂಚ ಕಾಲವಾದ ಮೇಲೆ ಕೋಮಲವಾದ ದನಿಯಿಂದ ಕೇಳಿದಳು—— " ಸಖಿಯನ್ನು ಹುಡುಕಲು ಹೋಗುವೆಯಾ ”
“ಓಹೋ, ನೀನು ಚೆನ್ನಾಗಿ ಮಾತಾಡುತ್ತೀ ! ಜನರು ನಿನಗೆ ಮಾತಾಡಲಿಕ್ಕೇ ಬರುವುದಿಲ್ಲೆಂದು ಹೇಳುತ್ತಾರೆ !"
ಸರಯೂ ನಗಲಾರಂಭಿಸಿದಳು.<noinclude></noinclude>
4inb1qdubhdksbjfsep1egdtt688tn2
ಪುಟ:ಚಂದ್ರನಾಥ.pdf/೨೦
104
120931
325091
324983
2026-06-20T14:05:50Z
Santhosh Notagar99
7298
/* Validated */
325091
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|left=೧೬}}
"ಹಾಗಾದರೆ ಕೇಳು-ಈ ಊರಲ್ಲಿ ನಿನಗೆ ಸಖಿಯರಾರೂ ಇಲ್ಲ. ಕೆಲವರು ದೊಡ್ಡವರ ಮನೆಯೆಂದು, ಕೆಲವರು ನಿಮ್ಮತ್ತೆಯ ಮಾತಿನ ರೀತಿ ಹಾಗು ದನಿಯನ್ನು ಕೇಳಿ, ಅಂತು ನಿಮ್ಮ ಮನೆಗೆ ಯಾರೂ ಬರುವುದಿಲ್ಲೆಂದು ನನಗೆ ಗೊತ್ತು. ಇನ್ನು ನಾನು ಆಗಾಗ್ಗೆ ಬರುತ್ತೇನೆ. ಆದರೆ ನಮ್ಮಿಬ್ಬರಲ್ಲಿಯೂ ಒಂದು ಸಂಬಂಧವಾಗಬೇಕು. ಎಂತಲೆ ನಿನ್ನನ್ನು ಇವೊತ್ತು ಸಖಿಯನ್ನಾಗಿ ಮಾಡಿಕೊಂಡಿದ್ದೇನೆ. ನಾನು ಮುದುಕೆಯಾಗಿದ್ದರೂ ಇಡೀ ದಿನ ಹರಿ-ಹರಿ ಎಂದು ಜಪ ಮಾಡುತ್ತ ಕಳೆಯಲಾರೆ.
ಇನ್ನು ನೀನಿದ್ದಲ್ಲಿಗೆ ದಿನಾಲು ಬರುತ್ತೇನೆ.
"ದಿನಾಲು ಬನ್ನಿ."
ಹರಿಬಾಲೆ ಗರ್ಜಿಸಿ ನುಡಿದಳು. " 'ಬನ್ನಿ' ಏಕೆ? 'ಸಖೀ ದಿನವೂ ಬಾ' ಎನ್ನು. 'ನೀನು' ಎನ್ನುತ್ತೀಯೋ ಇಲ್ಲವೋ ಹೇಳು. ”
ಸರಯೂ ಬಿದ್ದು ಬಿದ್ದು ನಕ್ಕು " ಕ್ಷಮಿಸಿರಮ್ಮಾ, ಕುತ್ತಿಗೆ ಕೊಯ್ದರೂ ನಾನು ಏಕವಚನದಲ್ಲಿ ಮಾತನಾಡಲಾರೆ ” ಎಂದಳು.
ಹರಿಬಾಲೆಯೂ ನಕ್ಕು “ ಒಳ್ಳೇದು, 'ನೀನು' ಎನ್ನಲಿಕ್ಕಾಗದಿದ್ದರೆ 'ನೀವು' ಎನ್ನಲೇಬೇಕು, 'ತಾವು' ಎಂದು ಎಂದೂ ಕರೆಯಬಾರದು ನೋಡು. ಹೇಳು ಹಾಗಾದರೆ 'ಸಖಿ, ನೀವು ನಿತ್ಯ ಬನ್ನಿ' ಎಂದು” ಎಂದಳು.
ಸರಯೂ ಸ್ವಲ್ಪ ನಾಚಿಕೆಯಿಂದ ತಲೆಬಾಗಿಸಿ ನಗುತ್ತ ನುಡಿದಳು - " ಸಖೀ, ನೀವು ನಿತ್ಯ ಬನ್ನಿ.”
ಈಗ ಹರಿಬಾಲೆಯದೊಂದು ದೊಡ್ಡ ಚಿಂತೆ ದೂರವಾದಂತಾಯಿತು. ಅವಳೆಂದಳು—" ಹಾಂ, ನಿತ್ಯ ಬರುವೆ, ಸಖೀ. ”
ಮರುದಿನದಿಂದಲೇ ನಿತ್ಯವೂ ಹರಿಬಾಲೆ ಸರಯೂನ ಮನೆಗೆ ಬರಲಾರಂಭಿಸಿದಳು. ಕೆಲಸ ತುಂಬಿದ್ದರೂ ಬಿಟ್ಟು ಒಂದು ಸಲ ಸರಯೂನ ಮನೆಗೆ ಬಂದು ಹಾಜರಿಕೊಟ್ಟು ಹೋಗುತ್ತಿದ್ದಳು. ಅವರಿಬ್ಬರಲ್ಲಿ ಮೊಳೆತ ಸಖೀಭಾವನೆ ದಿನದಿನಕ್ಕೆ ದೃಢವಾಗಿ ಬೆಳೆಯತೊಡಗಿತು. ಸರಯೂ ಕೂಡ ಹರಿಬಾಲೆ ತನಗಿಂತ ಹಿರಿಯಳೆಂಬುದನ್ನೂ ಅವಳನ್ನು ಆಲಿಂಗಿಸಿ ಮಾತನಾಡುವುದು ನಗುವುದು ಸರಿಯಾದುದಲ್ಲವೆಂಬುದನ್ನೂ ಮರೆತುಬಿಟ್ಟಳು.<noinclude></noinclude>
3s0qa4k44t56ksbwgp3pct9ni13cu24
ಪುಟ:ಚಂದ್ರನಾಥ.pdf/೨೧
104
120932
325092
324984
2026-06-20T14:06:39Z
Santhosh Notagar99
7298
/* Validated */
325092
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|right=೧೭}}
ಇವರಿಬ್ಬರ ಗೆಳೆತನವು ಹರಕಾಲಿಗೆ ಹೇಗೆನಿಸುತಿದ್ದಿತೊ ನಾವರಿಯೆವು. ಆದರೆ ಚಂದ್ರನಾಥನಿಗೆ ಈ ಗೆಳೆತನವು ಬಹಳ ಒಪ್ಪಿಗೆಯಾಯಿತೆಂದು ನಿರಾತಂಕವಾಗಿ ಹೇಳಬಹುದು. ಈ ವಿಷಯವಾಗಿ ಅವನು ಯಾವಾಗಲೂ ಮಾತನಾಡುತ್ತಿದ್ದ. ಹರಿಬಾಲೆಯ ಈ ಅಸ್ವಾಭಾವಿಕ ಗೆಳೆತನದಿಂದ ಅವನಿಗೇನೊ ಅನಂದವೆನಿಸುತಿದ್ದಿತು. ಈ ಆನಂದಕ್ಕೆ ಇನ್ನೂ ಒಂದು ಕಾರಣವಿದ್ದಿತು. ಚಂದ್ರನಾಥ ತನ್ನ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಅತ್ಯಂತ ಹೃತ್ವೂರ್ವಕವಾಗಿ ಪ್ರೀತಿಸದೆ ಇದ್ದರೂ ಅವನ ಹೃದಯದಲ್ಲಿ ಸ್ನೇಹವು ತುಂಬಿಕೊಂಡಿತ್ತು. ಮನದೊಳಗೆ ಯೋಚಿಸುತ್ತಿದ್ದ - ಒಂದೇ ಬಗೆಯಾಗಿರುವ ಹೆಂಡತಿ ಸಿಕ್ಕುವುದು ಸರ್ವರ ಸೌಭಾಗ್ಯದಲ್ಲಿ ಬರೆದಿರುವುದಿಲ್ಲ. ಇದರ ತಾತ್ಪರ್ಯವಿಷ್ಟೆ: ಒಬ್ಬರ ಹೆಂಡತಿ ಗಂಡನ ದಾಸಿಯಾಗಿರುತ್ತಾಳೆ; ಇನ್ನೊಬ್ಬರ ಹೆಂಡತಿ ಗೆಳತಿಯಾಗಿರುತ್ತಾಳೆ ; ಮತ್ತೊಬ್ಬರ ಹೆಂಡತಿ ಅವರ ಒಡತಿಯಾಗಿರುತ್ತಾಳೆ. ನನ್ನ ಸೌಭಾಗ್ಯದಿಂದ ಪುಣ್ಯವತೀ ಪವಿತ್ರಮಯೀ ಸ್ನೇಹಮಯೀ ಸಾಧ್ವೀ ದಾಸಿಯು ದೊರೆತಿರುವಳೆಂದಮೇಲೆ ನಾನು ದುಃಖವನ್ನೇಕೆ ಪಡಬೇಕು ? ಇದಲ್ಲದೆ ಇನ್ನೂ ಒಂದು ವಿಚಾರವು ಅವನ ಮನದಲ್ಲಿ ಆಗಾಗ್ಗೆ ಮೂಡುತ್ತಿದೆ : ಸರಯೂ ಕಳೆದ ದುಃಖಪೂರ್ಣವಾದ ಜೀವನಕತೆ. ಸರಯೂನ ಬಾಲ್ಯ ದುಃಖದಲ್ಲಿಯೇ ಕಳೆದುಹೋಗಿದ್ದಿತು. ಇದುವರೆಗೆ ಅವಳು ತನ್ನ ಜೀವನವನ್ನು ದುಃಖದಲ್ಲಿಯೇ ಕಳೆಯಬಹುದಾಗಿದ್ದಿತು. ಯಾವನಾದರೂ ಒಬ್ಬ ದುಷ್ಟರಿತ್ರನ ಕೈ ಹಿಡಿದು ಕಷ್ಟದ ಕಂಬನಿಗಳನ್ನು ಉದುರಿಸಬಹುದಾಗಿದ್ದಿತು. ಅಲ್ಲದೆ ದಾಸಿಯಾಗಿ ನಾನಾ ಬಗೆಯ
ಅತ್ಯಾಚಾರಗಳನ್ನೂ ಕಷ್ಟಗಳನ್ನೂ ತಾಳಿಕೊಳ್ಳಬಹುದಾಗಿದ್ದಿತು. ಇಷ್ಟು
ರೂಪ-ಲಾವಣ್ಯವಿದ್ದಮೇಲೆ ನರಕವು ಮಾರ್ಗವನ್ನು ತೆರೆದು ತನ್ನೆಡೆಗೆ ಬರ
ಮಾಡಿಕೊಳ್ಳದೆ ಬಿಡುತ್ತಿರಲಿಲ್ಲ. ಹೀಗಾಗಿದ್ದರೆ ? ಎಂಬ ವಿಚಾರಗಳು
ಚಂದ್ರನಾಥನ ತಲೆಯಲ್ಲಿ ಸುಳಿಯತೊಡಗಿದೊಡನೆ ಅವನು ಗಂಭೀರನಾಗಿ,
ಕರುಣಾಳುವಾಗಿ, ನಾಚಿಕೆಯಿಂದ ಕೆಂಪೇರಿದ ಆಕೆಯ ಮುಖಕಮಲವನ್ನು
ಹಿಡಿದೆತ್ತಿ “ ಸರಯೂ, ನಾನು ನಿನ್ನನ್ನು ನೋಡದೆ ಹೋಗಿದ್ದರೆ, ನಿನ್ನೊಡನೆ
ಮದುವೆಯಾಗದೆ ಇದ್ದಿದ್ದರೆ, ಇಲ್ಲಿಯವರೆಗೆ ನೀನಾರ ಹತ್ತಿರ ಇರುತ್ತಿದ್ದೆ?” ಎಂದು ಕೇಳುತ್ತಿದ್ದ.<noinclude></noinclude>
el1ul7rx5pg97vcmw88jga4bmunw63l
ಪುಟ:ಚಂದ್ರನಾಥ.pdf/೨೨
104
120933
325093
324991
2026-06-20T14:07:31Z
Santhosh Notagar99
7298
/* Validated */
325093
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|left=೧೮}}
ಸರಯೂ ಈ ಮಾತುಗಳಿಗೆ ಉತ್ತರವೀಯುತ್ತಿರಲಿಲ್ಲ. ಆತನ ಎದೆಯನ್ನು ಬಿಗಿಯಾಗಿ ಅಪ್ಪುತ್ತಿದ್ದಳು. ಚಂದ್ರನಾಥನು ಅವಳ ತಲೆಯ ಮೇಲೆ ತನ್ನ ಕೈಯಿಟ್ಟು ಅವಳಲ್ಲಿ ಧೈರ್ಯ ಸಾಹಸ ತುಂಬುವಂತೆ ಮನದಲ್ಲಿಯೇ ಎಂದುಕೊಳ್ಳುತ್ತಿದ್ದ-'ಇಲ್ಲ, ನಿನಗೇತರ ಅಂಜಿಕೆ !'
ಸರಯೂ ಇನ್ನಿಷ್ಟು ಹತ್ತಿರ ಸರಿದು ಆತನನ್ನು ಅಂಟಿಕೊಳ್ಳುತ್ತಿದ್ದಳು ನಿಜವಾಗಿಯೂ ಈ ತೆರನಾದ ಮಾತುಗಳಿಂದ ಅವಳಿಗೆ ಬಹಳ ಹೆದರಿಕೆಯಾಗುತ್ತಿದ್ದಿತು. ಚಂದ್ರನಾಥನೂ ಅವಳ ಅಂಜಿಕೆಯನ್ನು ಕಂಡು ಅವಳನ್ನು ಇನ್ನಷ್ಟು ಬಿಗಿಯಾಗಿ ಅಪ್ಪಿಕೊಳ್ಳುತ್ತಿದ್ದ. “ಇಲ್ಲ, ಸರಯೂ, ಹಾಗೇನು ಇಲ್ಲ. ನೀನು ಓರ್ವ ಬಡವೆಯ ದುಃಖಿಯ ಮನೆಯಲ್ಲಿ ಏಕೆ ಜನ್ಮವೆತ್ತಿದೆಯೆಂಬುದೆ ತಿಳಿಯದಂತಾಗಿದೆ. ಆದರೆ ಸರಯೂ, ಸರಯೂ, ನೀನೇ ನನ್ನ ಜನ್ಮಾಂತರದ ಪತಿವೃತಾ ಹೆಂಡತಿ. ನೀನು ಜಗದಲ್ಲಿ ಎಲ್ಲಿಯೇ ಇದ್ದುದಾಗಿದ್ದರೂ ನಿನ್ನೆಡೆಗೆ ನಾನು ಬರಲೆ ಬೇಕಾಗುತ್ತಿದ್ದಿತು ಸರಿಯೂ. ನೀನೇ
ನನ್ನನ್ನು ಕಾಶಿಗೆ ಕರೆಯಿಸಿದೆ. ಸರಯೂ, ನನ್ನ ಸ್ನೇಹದ ಮಣಿ” ಹೀಗೆಂದು ಮತ್ತೆಮತ್ತೆ ಬಿಗಿಬಿಗಿದು ಅಪ್ಪಿಕೊಳ್ಳುತ್ತಿದ್ದ. ಇಬ್ಬರ ನೇತ್ರಗಳಿಂದಲೂ ಸ್ನೇಹದ ಸ್ನಿಗ್ಧಧಾರೆ ಹರಿದು ಹೋಗುತ್ತಿದ್ದಿತು.
ಈಗ ಚಂದ್ರನಾಥನ ಹೃದಯದಲ್ಲಿ ಹರಿಯುತ್ತಿರುವ ಭಾವನೆಯನ್ನು ಸರಯೂನ ಸಮಸ್ತ ಸ್ನೇಹ, ಪ್ರೇಮ, ಸೇವೆ ಮತ್ತು ಭಕ್ತಿ ಎಲ್ಲವೂ ಒಟ್ಟು ಸೇರಿದರೂ ಸರಿಗಟ್ಟಲಾರವು. ದೀನ ದುಃಖಿಗಳ ಮೇಲೆ ದಯೆದೋರಿದರೆ, ಅವರ ಮೇಲೆ ನಮ್ಮ ಅನುಗ್ರಹವನ್ನು ಸುರಿದರೆ ಒಂದು ಬಗೆಯ ಅಭಿಮಾನ ನಮ್ಮಲ್ಲಿ ಅಂಕುರಿಸುತ್ತದೆ, ತೃಪ್ತಿಯುಂಟಾಗುತ್ತದೆ. ಅದೇ ಬಗೆಯ ಅಭಿಮಾನವೂ ತೃಪ್ತಿಯೂ ಸರಯೂನನ್ನು ಮದುವೆಯಾದಾಗ ಚಂದ್ರನಾಥನಿಗೆ
ಉಂಟಾಗಿದ್ದಿತು. ಆ ಅಭಿಮಾನ, ಆ ತೃಪ್ತಿ ಗುಪ್ತವಾಗಿ ಅವನ ಹೃದಯದಲ್ಲಿ ಮೂಡಿದ್ದುವು. ಈಗ ಎಷ್ಟು ಪ್ರಯತ್ನ ಪಟ್ಟರೂ ಅವನ್ನು ಹೃದಯದಿಂದ ಪೂರ್ತಿಯಾಗಿ ಕಿತ್ತೊಗೆಯುವುದು ಸಾಧ್ಯವಿರಲಿಲ್ಲ. ಅವನ ಹೃದಯದ
ಒಂದು ಮೂಲೆಯಲ್ಲಿ ಅದು ಹಾಗೆಯೇ ಬಿದ್ದುಕೊಂಡಿದ್ದಿತು. ಆದುದರಿಂದ
ಆ ಭಾವವು ತಲೆಯೆತ್ತಿದಾಗ ಚಂದ್ರನಾಥನು ಸರಯೂನನ್ನು ಬಿಗಿದಪ್ಪಿಕೊಳ್ಳುತ್ತಿದ್ದ. "ಸರಯೂ, ಎಷ್ಟೋ ದಿನಗಳಿಂದ ಯಾರನ್ನು ನೀನು ನೋಡುತ್ತ<noinclude></noinclude>
fpq21wgbgkvivnapcmx1z9nzy7a3qq4
ಪುಟ:ಚಂದ್ರನಾಥ.pdf/೨೩
104
120934
325094
324993
2026-06-20T14:08:39Z
Santhosh Notagar99
7298
/* Validated */
325094
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|right=೧೯}}
ಬಂದಿರುವೆಯೊ ಅವರನ್ನು ಇದುವರೆಗೂ ನೀನು ಚೆನ್ನಾಗಿ ಗುರುತಿಸಿಲ್ಲ. ಗುರುತಿಸಲು ವಿಲಂಬಬೇಕಾಗುತ್ತಿದೆ ನಿನಗೆ ? ಇದೇ ನನಗೆ ಅಚ್ಚರಿಯ ಮಾತು, ಹೊಳೆಯದ ವಿಚಾರವಾಗಿದೆ. ನಿನ್ನನ್ನು ಕಾಶಿಯಲ್ಲಿ ನೋಡಿದ ಕೂಡಲೆ ಗುರುತಿಸಿದೆ-ನೀನು ನನ್ನವಳೇ ಎಂದು ! ಎಷ್ಟೋ ಯುಗಗಳಿಂದ, ಕಲ್ಪಗಳಿಂದ, ಜನ್ಮಗಳಿಂದ ನೀನು ನನ್ನವಳು ಎಂದು ! ನಾವು ಅದೇಕೊ ಅಷ್ಟುಕಾಲ ಅಗಲಿದ್ದೆವು ! ಈಗ ಮತ್ತೆ ಒಂದಾಗಿ ಒಂದೆಡೆಯಲ್ಲಿ ವಾಸಿಸಲು
ಬಂದಿದ್ದೇವೆ” ಎನ್ನುತ್ತಿದ್ದ.
ಸರಯೂ ಚಂದ್ರನಾಥನ ಎದೆಯ ಮೇಲೆ ತಲೆಯಿಟ್ಟು ಸೆರಗಿನಿಂದ ಮುಚ್ಚಿಕೊಂಡು ಕೋಮಲವಾದ ದನಿಯಲ್ಲಿ ಹೇಳುತ್ತಿದ್ದಳು— "ನಾನು
ನಿಮ್ಮನ್ನು ಗುರುತಿಸಿಲ್ಲವೆಂದು ಯಾರು ಹೇಳುತ್ತಾರೆ ?"
ಅತ್ಯಂತ ಉತ್ಸಾಹದ ಮೂಲಕ ಚಂದ್ರನಾಥನು ಸರಯೂನ ನಾಚಿಕೆಯಿಂದ ಕೆಂಪೇರಿದ ಮುಖವನ್ನು ತನ್ನ ಮುಖದ ಎದುರಿನಲ್ಲಿ ಹಿಡಿದುಕೊಂಡು ಎನ್ನುತ್ತಿದ್ದ- "ಗುರುತಿಸಿದ್ದೇಯಾ ? ಹಾಗಾದರೆ ಇಷ್ಟೇಕೆ ಹೆದರಿಕೆ ? ನಾನು
ನಿನ್ನ ಕೂಡ ಯಾವ ಬಗೆಯ ದುರ್ವ್ಯವಹಾರವನ್ನೂ ಮಾಡುವುದಿಲ್ಲ. ಸರಯೂ,
ನನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ ನಿನ್ನನ್ನು.”
ಮತ್ತೆ ಸರಯೂ ತನ್ನ ಮುಖವನ್ನು ಮುಚ್ಚಿಕೊಳ್ಳುತ್ತಿದ್ದಳು. ಚಂದ್ರನಾಥ ಮತ್ತೆ ಕೇಳುತ್ತಿದ್ದ — “ಹೇಳು ಸರಯೂ ; ಏಕೆ ಹೆದರುತ್ತೀ ಹೇಳು.”
ಸರಯೂನ ಬಾಯಿಂದ ಉತ್ತರ ಬರುತ್ತಿರಲಿಲ್ಲ. ಸ್ವಾಮಿಯನ್ನು ಸ್ಪರ್ಶಿಸಿದ ಮೇಲೆ ಅಂಜಿಕೆಯಿಲ್ಲವೆಂದು ಸುಳ್ಳು ಹೇಗೆ ಹೇಳಬಲ್ಲಳು ? ನಿಜವಾಗಿಯೂ ಅವಳಿಗೆ ಭಯವಾಗುತ್ತಿದ್ದಿತು. ಅದು ಚಂದ್ರನಾಥನ ಹೊರತಾಗಿ ಯಾರಿಗೂ ಗೊತ್ತಿರಲಿಲ್ಲ.
ಅಹುದು, ನಾವು ಮರೆತು ಬೇರೆ ಕಡೆ ಹೊರಟಿದ್ದೆವು ಈಗ ಸ್ವಲ್ಪ ಹೊತ್ತಿನ ಹಿಂದೆ ಹರಿಬಾಲೆ ಬಂದು ಹೋಗುವುದರಿಂದ ಚಂದ್ರನಾಥನಿಗೆ ಆನಂದವಾಗುತ್ತಿದ್ದಿತೆಂದು ಹೇಳುತ್ತಿದ್ದೆವು. ಸರಯೂಗೆ ಒಬ್ಬ ಸಖಿ ದೊರೆತಳೆಂಬುದೆ ಚಂದ್ರನಾಥನ ಆನಂದಕ್ಕೆ ಕಾರಣ. ಸರಯೂಗೆ ತನ್ನ ಮನದ ದುಗುಡವನ್ನು ತೋಡಿಕೊಂಡು ಕಳೆದುಕೊಳ್ಳುವುದಕ್ಕೆ ಒಬ್ಬ ಸಖಿ ದೊರೆತಳಲ್ಲ !<noinclude></noinclude>
e280z1dutke0tcsbzojhwzz1gxdfjnp
ಪುಟ:ಚಂದ್ರನಾಥ.pdf/೨೪
104
120935
325095
324994
2026-06-20T14:08:57Z
Santhosh Notagar99
7298
/* Validated */
325095
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|left=೨೦}}
ಒಂದು ದಿನ ಸರಯೂ ಮಧ್ಯಾನ್ಹ ಹರಿಬಾಲೆಯ ದಾರಿಯನ್ನೆ ನೋಡುತ್ತ ಕುಳಿತುಕೊಂಡಿದ್ದಳು. ಮೋಡಗಳು ಮುಸುಕಿದ್ದುವು, ಹನಿಗಳೂ ಮೆಲ್ಲಗೆ ಉದುರುತ್ತಿದ್ದುವು. ಹರಿಬಾಲೆ ಬರಲಿಲ್ಲ. ಮಳೆಯ ಹನಿ ಉದುರುತ್ತಿದುದರಿಂದಲೆ ಅವಳು ಬಂದಿರಲಿಕ್ಕಿಲ್ಲವೆಂದು ಸರಯೂ ಯೋಚಿಸುತ್ತಿದ್ದಳು. ಸಾಯಂಕಾಲವಾಗುತ್ತ ಬಂದಿದ್ದಿತು; ಒಬ್ಬಳೆ ಇಡಿಯ ದಿನವನ್ನು ಕಳೆದಿದ್ದಳು.
ಹರಕಾಲಿಯೂ ಮನೆಯಲ್ಲಿರಲಿಲ್ಲ. ಸರಯೂ ಸ್ವಲ್ಪ ಸಾಹಸಮಾಡಿ ಚಂದ್ರನಾಥನ ಓದುವ ಮನೆಯನ್ನು ಪ್ರವೇಶಿಸಿದಳು. ವಿಶೇಷ ಕೆಲಸವಿಲ್ಲದೆ ಯಾರೂ ಈ ಕಿರುಮನೆಯಲ್ಲಿ ಹೆಜ್ಜೆಯಿಡುತ್ತಿರಲಿಲ್ಲ. ಸರಯೂ ಕೂಡ ಹಾಗೆಯೆ.
ಚಂದ್ರನಾಥ ಓದುವುದನ್ನು ಬಿಟ್ಟು ತಲೆಯೆತ್ತಿ ನೋಡಿ ಎಂದ — "ಈ ಹೊತ್ತು
ನಿನ್ನ ಸಖಿ ಬಂದಿಲ್ಲವೆಂದು ಕಾಣುತ್ತದೆ. ಅಲ್ಲವೆ ?”
“ಇಲ್ಲ."
“ಅದಕ್ಕೋಸ್ಕರವೆ ನಿನಗೆ ನನ್ನ ನೆನಪಾದುದು ?”
ಸರಯೂ ನಸುನಕ್ಕಳ. ಸದಾ ನೆನಪಾಗುತ್ತದೆ ; ಬರುವ ಸಾಹಸ ಮಾತ್ರ ಆಗುವುದಿಲ್ಲವೆನ್ನುವುದೆ ಅವಳ ನಗೆಯ ಭಾವವಾಗಿದ್ದಿತೇನೊ ! “ಮಳೆ
ಬರತೊಡಗಿದ್ದರಿಂದ ಹರಿಬಾಲೆ ಬಂದಿರಲಿಕ್ಕಿಲ್ಲ” ಎಂದಳು.
“ಇಲ್ಲ, ಹಾಗೇನೂ ಇಲ್ಲ. ಈ ಹೊತ್ತು ಚಿಕ್ಕಪ್ಪನ ಮಗಳು ನಿರ್ಮಲೆಯನ್ನು ಯಾರೋ ನೋಡುವುದಕ್ಕೆ ಬಂದಿದ್ದಾರೆ. ಬೇಗನೆ ಅವಳ ಮದಿವೆಯಾಗುವುದಿದೆ. ಅದರ ಸಿದ್ಧತೆಯಲ್ಲಿಯೆ ಮನೆಯವರು ತೊಡಗಿದ್ದಾರೆ.”
“ಹೌದು, ಹೀಗೆಯೆ ಇರಬಹುದು.”
ಸ್ವಲ್ಪ ಸಮಯ ಸುಮ್ಮನಿದ್ದ ಮೇಲೆ ಚಂದ್ರನಾಥನೆಂದ — "ಏನು ಹೇಳಲಿ, ಸರಯೂ ? ನಾವು ಬೇರೆಯಾದೆವು ಅವರಿಗೆ. ಇದರಿಂದ ದುಃಖವಾಗುತ್ತವದೆ, ಸರಯೂ. ಅತ್ತೆಯೆಲ್ಲಿ ?”
"ಆದರೂ ಅಲ್ಲಿಗೇ ಹೋಗಿದ್ದಾರೇನೊ!”
ಚಂದ್ರನಾಥ ಮಾತನಾಡದೆ ಯೋಚಿಸತೊಡಗಿದ.
ಸರಯೂ ಬಂದು ಬಳಿಯಲ್ಲಿ ಕುಳಿತು - "ಹೇಳಬಾರದೆ ಏನು ಯೋಚಿಸುತ್ತ ಇದ್ದೀರಿ ?” ಎಂದಳು.<noinclude></noinclude>
joufszaf1cao27l8ciayimybjx1j34w
ಪುಟ:ಚಂದ್ರನಾಥ.pdf/೨೫
104
120936
325096
324995
2026-06-20T14:09:10Z
Santhosh Notagar99
7298
/* Validated */
325096
proofread-page
text/x-wiki
<noinclude><pagequality level="4" user="Santhosh Notagar99" /></noinclude>{{center|ಚಂದ್ರನಾಥ}}
{{rh|right=೨೧}}
ಚಂದ್ರನಾಥನು ನಗಲು ಯತ್ನಿಸಿ ಸರಯೂನ ಕೈಯನ್ನು ಎಳೆದುಕೊಂಡು ತನ್ನ ಕೈಯಲ್ಲಿರಿಸಿಕೊಳ್ಳುತ್ತ ಮೆಲ್ಲಗೆ ಮಾತಿಗೆ ಮೊದಲು ಮಾಡಿದ.
“ಇಲ್ಲ, ಸರಯೂ, ಹಾಗೆ ಮತ್ತೇನೂ ಇಲ್ಲ. ನಿರ್ಮಲೆಯ ಮದಿವೆ. ಅದರ
ಸುದ್ದಿಯನ್ನು ಕೂಡ ನನಗೆ ಚಿಕ್ಕಪ್ಪ ಹೇಳಲಿಲ್ಲ. ಅತ್ತೆಯನ್ನು ಕರೆದುಕೊಂಡೇ ಹೋದ. ನಾವಿಬ್ಬರೂ ಪರಕೀಯರಾದೆವಲ್ಲ! ಎಂದು ಯೋಚಿಸುತಿದ್ದೆ.”
ಚಂದ್ರನಾಥನ ದನಿಯಲ್ಲಿ ಸ್ವಲ್ಪ ವೇದನೆಯಿದ್ದಿತು. ಸರಯೂ ಅದನ್ನು ಲಕ್ಷಿಸಿ ನುಡಿದಳು — " ನನ್ನನ್ನು ಮದಿವೆಯಾಗಿ ನೀವು ಇನ್ನಿಷ್ಟು ಪರಕೀಯರಾಗಿದ್ದೀರಿ. ಇಲ್ಲದೆ ಹೋಗಿದ್ದರೆ ಇಷ್ಟು ದಿನಗಳಲ್ಲಿ ನೀವು ಇನ್ನಷ್ಟು ಪ್ರೀತಿಯಿಂದ ಇರಬಹುದಾಗಿದ್ದಿತು.”
ಚಂದ್ರನಾಥ ನಕ್ಕು ಎಂದ — “ಇಲ್ಲ, ಪ್ರೀತಿ ಬೆಳೆಯಿಸುವ ಅಗತ್ಯವೇನೂ ಇಲ್ಲ. ನಿನ್ನೊಡನೆ ಪ್ರೀತಿ ಬೆಳೆಯಿಸುವುದನ್ನು ಬಿಟ್ಟು ಚಿಕ್ಕಪ್ಪನೊಡನೆ ಸ್ನೇಹವನ್ನು ಹೆಚ್ಚಿಸಿಕೊಂಡಿದ್ದರೆ ಅಷ್ಟು ಸುಖವೇನೂ ಆಗುತ್ತಿರಲಿಲ್ಲ. ಹಾಗೆ ನೋಡಿದರೆ ನಮ್ಮಲ್ಲಿ ವೈಮನಸ್ಸೇನೂ ಇಲ್ಲ ; ಚೆನ್ನಾಗಿಯೇ ಇದ್ದೇವೆ. ನಿನ್ನ ಮದಿವೆಯಾಗುವ ಕಾಲಕ್ಕೆ ಚಿಕ್ಕಪ್ಪನ ಸಲಹೆ ಕೇಳಿದ್ದರೆ ನಿನ್ನೊಡನೆ ಮದಿವೆಯಾಗುವುದು ಸಂಭವವಿರಲಿಲ್ಲ. ಒಂದಿಲ್ಲೊಂದು ಎಡರು ಬಂದೇ ಬರುತ್ತಿದ್ದಿತು; ಕುಲದ ಮಾತು ಏಳುತ್ತಿತ್ತು; ಇಲ್ಲವೆ ವಂಶದ ಜಗಳವಾಗುತ್ತಿತ್ತು. ಅದೇನೇ ಇರಲಿ, ಒಂದಿಲ್ಲೊಂದು ಬಗೆಯ ಎಡರು ಬರದೆ ಇರುತ್ತಿರಲಿಲ್ಲ.”
ಒಳಗಿಂದೊಳಗೆ ಭೀತಿಯಿಂದ ನಡುಗಿದಳು ಸರಯೂ. ಅಂದಿನ ನೆರಳೂ
ಮನೆಯಲ್ಲಿ ಕತ್ತಲನ್ನುಂಟು ಮಾಡಿದ್ದಿತು. ಆದುದರಿಂದ ಚಂದ್ರನಾಥ ಅವಳ
ಮುಖವನ್ನು ನೋಡದಾದ. ಆದರೂ ಅವನ ಕೈಯಲ್ಲಿದ್ದ ಅವಳ ಕೈ ನಡುಗಿ
ಆಕೆಯ ಅಂತರಂಗದಲ್ಲಿನ ಸಮಸ್ತ ಮಾತುಗಳನ್ನೂ ಚಂದ್ರನಾಥನಿಗೆ ಅರುಹಿತು. ಚಂದ್ರನಾಥ ನಸುನಕ್ಕು ಕೇಳಿದ — " ನಾನು ಚಿಕ್ಕಪ್ಪನ ಸಲಹೆ ಕೇಳದೆ ಇದ್ದದ್ದು ಸರಿಯೊ ತಪ್ಪೊ ತಿಳಿದುಕೊಂಡೆಯಾ ?”
ಸ್ವಲ್ಪ ಸಮಯ ಸುಮ್ಮನಿದ್ದು ಆಮೇಲೆ ಸರಯೂ ಎಂದಳು "ನಾನು<noinclude></noinclude>
hd4322tgncou7grisqml47at366v1m4
ಪುಟ:ಚಂದ್ರನಾಥ.pdf/೨೬
104
120937
325090
324996
2026-06-20T14:05:38Z
Hariprasad Shetty10
7490
/* Validated */
325090
proofread-page
text/x-wiki
<noinclude><pagequality level="4" user="Hariprasad Shetty10" /></noinclude>{{center|ಚಂದ್ರನಾಥ}}
{{rh|left=೨೨}}
ತಿಳಿದುಕೊಂಡದ್ದು ಇಷ್ಟು: ನನ್ನಂಥ ಸಾವಿರಾರು ದಾಸಿಯರ ಕೊರತೆ ನಿಮಗಿರುತ್ತಿರಲಿಲ್ಲ!"
ಆಕೆಯ ಕೋಮಲವಾದ ಕರವನ್ನು ಒತ್ತುತ್ತ ಚಂದ್ರನಾಥನೆಂದ — “ಅದು
ನನಗೆ ಗೊತ್ತಿಲ್ಲ. ನನಗಿರುವುದು ಒಬ್ಬಳೇ ಒಬ್ಬಳು ದಾಸಿ ಅವಳು ಇದ್ದಿಲ್ಲವಾದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ನಿನಗೆ ಇಷ್ಟವಿದ್ದರೆ ಸಾವಿರಾರು ದಾಸಿಯರ ವಿಷಯ ಯೋಚಿಸಿ ನೋಡು.”
ಮರುದಿನ ಹರಿಬಾಲೆ ಬಂದಳು. ಆದರೆ ಅವಳ ಮುಖದ ಮೇಲೆ ಕಳೆ ಮೊದಲಿನಂತಿರಲಿಲ್ಲ; ಬದಲಾಗಿತ್ತು. ದಿನದಂತೆ ಸರಯೂನನ್ನು ಅಪ್ಪಿಕೊಂಡು “ಸಖೀ ಸಖೀ ” ಎಂದು ಹೇಳಿಸಲು ಒತ್ತಾಯ ಪಡಿಸಲಿಲ್ಲ ; ಆಡುವುದಕ್ಕೆ ಇಸ್ಪೀಟು ಬೇಡಲಿಲ್ಲ ; ರಮಿಸಿ ತನ್ನನ್ನು ತಣಿಸಿಕೊಳ್ಳಲು ಯತ್ನಿಸಲೂ ಇಲ್ಲ. ಮಲಿನ ಮುಖದವಳಾಗಿ ಸುಮ್ಮನೆ ಕುಳಿತಿದ್ದಳು.
“ಸಖೀ, ನಿನ್ನೆ ನೀವೇಕೆ ಬರಲಿಲ್ಲ ? ”
“ನಿನ್ನೆ ಬಹಳ ಕೆಲಸವಿತ್ತು, ಸಖೀ. ನಿರ್ಮಲೆಯ ಮದುವೆ ಇದೆಯಲ್ಲವೆ ಆ ಮನೆಯಲ್ಲಿ !”
“ಹೌದು, ಕೇಳಿದ್ದೇನೆ. ಎಲ್ಲವೂ ಗೊತ್ತಾಯಿತೆ ? ”
ಹರಿಬಾಲೆ ಸರಯೂನ ಪ್ರಶ್ನೆಗೆ ಉತ್ತರವೀಯದೆ ಅವಳ ಮುಖವನ್ನು
ನೋಡುತ್ತ ಎಂದಳು — “ಸಖೀ ಒಂದು ಮಾತಿದೆ, ಕೇಳಲೇ ? ಸರಿಯಾಗಿ ಉತ್ತರ ಕೊಡುತ್ತೀಯಾ ? ”
“ ಅದಾವ ಮಾತು ? ”
“ನಿಜ ಹೇಳಿದರೆ ಕೇಳುತ್ತೇನೆ. ಇಲ್ಲದೆ ಹೋದರೆ ಕೇಳಿ ಪ್ರಯೋಜನವೇನು ?”
ಸರಯೂ ಚಿಂತಾಯುಕ್ತಳಾಗಿ ಎಂದಳು — “ಏಕೆ, ನಿಜವನ್ನೇಕೆ ಹೇಳುವುದಿಲ್ಲ?"
“ಸಖೀ, ನನ್ನನ್ನು ನಂಬುತ್ತೀಯಷ್ಟೆ ?”
“ಅಹುದು, ನಂಬುವುದಿಲ್ಲವೇಕೆ ?"
“ಸರಿ, ಹೇಳು ಹಾಗಾದರೆ ಚಂದ್ರನಾಥರು ನಿನ್ನನ್ನು ಎಷ್ಟು ಪ್ರೀತಿಸುತ್ತಾರೆ ?”<noinclude></noinclude>
0dytvbwzh6u0fcxhi6ygdct4rr4yoi6
ಪರಿವಿಡಿ:ಆಶ್ರಮವಾಸಿ.pdf
106
120959
325082
325074
2026-06-20T12:11:43Z
Shyam 2808
8562
325082
proofread-index
text/x-wiki
{{:MediaWiki:Proofreadpage_index_template
|Type=book
|Title=ಆಶ್ರಮವಾಸಿ
|Language=kn
|Volume=159
|Author=ಬಸವರಾಜ ಕಟ್ಟಿಮನಿ
|Translator=
|Editor=
|Illustrator=
|School=
|Publisher=ಪ್ರತಿಭಾ ಮುದ್ರಣ, ಧಾರವಾಡ
|Address=
|Year=1956
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=_empty_
|Image=2
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
hzf3i741qp0uterhmpov24lbpsx5n1p
ಪರಿವಿಡಿ:ಬಲೆಯ ಬೀಸಿದರು.pdf
106
120962
325083
2026-06-20T12:47:16Z
Shyam 2808
8562
ಹೊಸ ಪುಟ:
325083
proofread-index
text/x-wiki
{{:MediaWiki:Proofreadpage_index_template
|Type=book
|Title=ಬಲೆಯ ಬೀಸಿದರು
|Language=kn
|Volume=267
|Author=ಬಸವರಾಜ ಕಟ್ಟೀಮನಿ
|Translator=
|Editor=
|Illustrator=
|School=
|Publisher=ಮೋಹನ ಪ್ರಕಾಶನ
|Address=
|Year=1954
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=
|Image=5
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
d00u6g8lyhi647ilk2x7nzvdc6clw1r
325084
325083
2026-06-20T12:48:57Z
Shyam 2808
8562
325084
proofread-index
text/x-wiki
{{:MediaWiki:Proofreadpage_index_template
|Type=book
|Title=ಬಲೆಯ ಬೀಸಿದರು
|Language=kn
|Volume=267
|Author=ಬಸವರಾಜ ಕಟ್ಟೀಮನಿ
|Translator=
|Editor=
|Illustrator=
|School=
|Publisher=ಮೋಹನ ಪ್ರಕಾಶನ
|Address=
|Year=1954
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=_empty_
|Image=6
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
sr544vuxwujsjtp2k7pf1imlfiv70zu
ಪುಟ:ಬಹದ್ದೂರ ಗಂಡ.pdf/೨೦
104
120963
325085
2026-06-20T13:32:43Z
Viveka BG
8559
/* Proofread */
325085
proofread-page
text/x-wiki
<noinclude><pagequality level="3" user="Viveka BG" /></noinclude>10 ಬಹದ್ದೂರ್ ಗಂಡ
ಚೆಚ್ಚಾಕ್ಬಿಟ್ಳಾಲ್ಲ, ಅವೇನಾದ್ರೂ ಕೈಯೋ ಕಾಲೋ ಮುರ್ಕೊಂಡ್ಪ್ರಾಣ ಬಿಟ್ಟಿದ್ರೆ ಜೈಲಿಗ್ಹೋಗ್ಬೆಕಾಗಿತ್ತಲ್ಲೆ ನಾವು
!
ಸೀತ: ಅದ್ಯಾಕಾದ್ರೂ ಹೀಗ್ಮಾಡ್ತಾಳೋ, ಅದ್ಯಾವೋನ್ನ ಸೃಷ್ಟಿ
ಮಾಡಿದಾನೋ ಬ್ರಹ್ಮ ಇವಳ್ನ ಗಂಟ್ಹಾಕ್ಕೋಳ್ಳೋಕೆ-----
ರಾ.ರಾ:- ಅವನ್ಗೂ ಏಳ್ರಾಟ ವಕ್ರಿಸ್ಕೊಬೇಕು, ಇವಳಿಗ್ಬಂದು
ತಾಳಿ ಕಟ್ಬೇಕು.
ಪುಜೋ:-(ನೇಪಥ್ಯ) ರಾವ್ ಸಾಹೇಬ್ರಿದಾರೇನೋ?
ಸೇವಕ:- (,, )ಔರೆ ಔರೆ,
ಸೀತ:- ಜೋಯಿಸ್ರು!
ಪುು.ಜೋ: (ಪ್ರವೇಶಿಸಿ) ನಮಸ್ಕಾರ, ರಾವ್ ಸಾಹೇಬ್ರಿಗೆ.
ರಾ.ರಾ ನಮಸ್ಕಾರ.......ಹಹಹಹ....... ಬನ್ನಿ ,ಬನ್ನಿ,
ದಯಮಾಡಿ.
ಫು.ಜೋ:- ಅಬ್ಬಾ ಬ್ಬಾ ಬ್ಬಾ ಬ್ಬಾ, ಈ ಸಾರಿ ಛಳಿ ನೋಡಿದ್ರಾ,
ಹೇಗಿದೆ? ನಡುಗಿಸಿ ನಡುಗಿಸ್ಪಿಡ್ತಾ ಇದೈಲ್ಲಾ!
ರಾ.ರಾ: (ಸೋಫಾ ತೋರುತ್ತಾ) ಕೂಡಿ, ಕೂಡಿ, ಅದರ ಕಥೆ ಯಾಕ್ಹೇಳ್ತೀರ?
(ತಾವೂ ಕಂಡುತ್ತಾ) ನನಗಂತೂ ಸಹಿಸೋಕೆ ಸಾಧ್ಯವೇ ಇಲ್ಲಾoದ್ರೆ.
ಬೆಳಿಗ್ನಿಂದ ಇದ್ವರ್ಗೊ, ನೋಡಿ, ಮೂರು ಸಾರಿ ಆಯ್ತು, ಕಾಫಿ. ಈಗ
ತಮ್ಮ ಜೊತೇಲಿ---
ಸೀತ:- ತಮ್ಮ ನೆಸದಿಂದ ನಾಕ್ನೆ dose ನ ದರ್ಶ್ನ ಎದುರ್ನೋಡ್ತಿದಾರೆ.
ರಾ.ರಾ: Quite right ಕಣೇ, ಹಹಹಹ. ಎಲ್ಲಿ, make haste-
'ಜೋಯಿಸ್ರಿಗೆ, ಪಾಪ ಚಳಿ... ( ಪು ಜೋ .ಗೆ) ದೇವರ ಪೂಜೆ ಆಗಿದೆ ತಾನೆ?
ಪು.ಜೋ:- ಓಹೊಹೊ, ಆಗಿದೆ ಆಗಿದೆ ಬೆಳಗ್ಗಿನ ಆಹ್ನೀಕಗ್ಳೆಲ್ಲಾ
ತೀರಿಸ್ಕೊಳ್ದೇ, ಹೊರಗ್ಹೊರ್ಡೋ.. ಪದ್ಧತಿನೇ ಇಲ್ಲ....ಆದ್ರೂ ಕಾಫಿ...
ಬೇಡ,ತಮಗ್ಯಾಕೆ ತೊಂದ್ರೆ...<noinclude></noinclude>
n0s1lygliwzx0uv9g35bqbpntoincvl
ಪರಿವಿಡಿ:ಹಗಲಿರಳು.pdf
106
120964
325098
2026-06-20T16:04:13Z
Viveka BG
8559
ಹೊಸ ಪುಟ:
325098
proofread-index
text/x-wiki
{{:MediaWiki:Proofreadpage_index_template
|Type=book
|Title=ಹಗಲಿರಳು
|Language=kn
|Volume=
|Author=[[User:ಮುಳಿಯ ತಿಮ್ಮಪ್ಪಯ್ಯ |ಮುಳಿಯ ತಿಮ್ಮಪ್ಪಯ್ಯ]]
|Translator=
|Editor=
|Illustrator=
|School=
|Publisher=ಶಾರದ ಛಾಪಖಾನೆ,
|Address=ಮಂಗಳೂರು. ಬ್ರಿಟಿಷ್ ಭಾರತ,
|Year=1918
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=
|Image=1
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
[[ವರ್ಗ:ಕನ್ನಡ ಕಥಾ ಸಂಕಲನ]]
josxn1y69t1j8og29qdx21ocwtvwayy
ಪರಿವಿಡಿ:ಬತ್ತದ ತೊರೆ.pdf
106
120965
325099
2026-06-21T03:51:43Z
Shyam 2808
8562
ಹೊಸ ಪುಟ:
325099
proofread-index
text/x-wiki
{{:MediaWiki:Proofreadpage_index_template
|Type=book
|Title=ಬತ್ತದ ತೊರೆ
|Language=kn
|Volume=310
|Author=ಶಿವರಾಮ ಕಾರಂತ
|Translator=
|Editor=
|Illustrator=
|School=
|Publisher=ಹರ್ಷ ಮುದ್ರಣಾಲಯ
|Address=
|Year=1953
|Key=
|ISBN=
|OCLC=
|LCCN=
|BNF_ARK=
|ARC=
|DOI=
|Source=
|Image=6
|Progress=X
|Transclusion=no
|Validation_date=
|Pages=<pagelist />
|Volumes=
|Remarks=
|Width=
|Header=
|Footer=
|tmplver=
}}
jb6xty7zq3d9okcrz5zkp35o3ryheg1
ಪುಟ:ಹಗಲಿರಳು.pdf/೧೦
104
120966
325100
2026-06-21T08:44:06Z
Viveka BG
8559
/* Not proofread */
325100
proofread-page
text/x-wiki
<noinclude><pagequality level="1" user="Viveka BG" /></noinclude>ಹಗಲಿರುಳು.
ಅನುಸ್ಟುಪ್ ॥ ಹಗಲ ಇರುಳೂ ತಾವು ತಿರುಗುತ್ತಿರುವಂದದಿ |
ಸುಖವೂ ಮಃಖನೂ ಮೇಲಿಮೇಲಿ ಬಪ್ಪುದುಮಂದಿಗೆ hot
ವಿಲ್ಲಕೂ ಕರ್ತವಾದೇನನದೆಕ್ಕಾನು ನಿಬತ್ತನ್ಯೆ
ಸೂಜಿ ಚಿಪ್ಲಿಗನೊಪ್ಪಿಂದ ನೂಲಂಬಟ್ಟೆ ಯೊಳಿೊಯ್ಬನೊಲ್ usu
(ಎನ್ನುತ್ತೆ ಕಾಲಫೆೇಟ ಸೂತ್ರೆಧಾರನು ಪ್ರವೇತಿಸ)
ಹಾ! ಸರ್ವಾಧಿಕಾರಿಯಾದ ಸರಮಾತ್ಯನ ದಯದಿಂದ, ನನ್ನಗತಿ, ಎಲ್ಲೆಲ್ಲಿ
ಯೂ ತಡೆಯಿಲ್ಲದೆ ನಡೆಯುತ್ತಿದೆ. ಪಕ್ಷಪಾತವಿಡದೆ, ಲೋಕನೆಲ್ಲವನ್ನೂ ಅವರ
ವರ ಕರ್ಮಾನುಸಾರವಾಗಿ ನಡೆಯಿಸೆಬೇಕೆಂದು, ಅವನ ಕಟ್ಟಪ್ಪಣೆ. ನನ್ನ ಮನಃ
'ಫೊರ್ವಕನಾದ ಎಣಿಕೆಯೂ ಹಾಗೆಯೆ. ಅದರಿಂದಲೇ ನನ್ನ ಅಧಿಕಾರವು ಶಾಶ್ವತ
ವಾಯಿತು, ಆದರೇನು? ಮೊದಲು, ಅಧಿಕಾರದಲ್ಲಿ ಅಸೆಯಿತ್ತು. ಈಗ, ಅದನ್ನು,
ಸೆರಿಯಾಗಿ ನಡೆಯಿಸುವುದು ಹೇಗೆ? ಎಂಬ ಅಂಜಿಕೆಯಾಗಿದೆ. ಅದೇನೆಂದರೆ
ಈಗ, ಇಡಿ ಲೋಕಪಿ ಎರಡು ಕವಲಾಗಿದೆ. ಒಂದು ನಾಡಿಗೆ ಒಯ್ದರೆ, ಇನ್ನೊಂದು
ಕಾಡಿಗೆ. ಒಂದುಕಡೆ, ಹೆಗಲಿನ ಬೆಳುಪು, ಮತ್ತೊಂದು ಕಡಿ ಕತ್ತಲೆಯ ಕಪ್ಪು.
ಈ ಇತ್ತಂಡನನ್ನು ಒತ್ತಟ್ಟಿಗೆ ತರುವುದೆಂದರೆ, ಸ್ವರ್ಗಪಾತಾಳೆಗಳನ್ನು, ಒಟ್ಟುಗೂಡಿ
ಸುವ ಕೆಲಸನೆ.
ಬೆಳಕೆಂದರೆ, ಬಹಳ ಮಂದಿ ಆಶಿಸತಕ್ಕುದು. ಪ್ರತಿಯೊಂದನ್ನೂ ನೋಡ
ಬೇಕೆಂದು, ತನ್ನ ಬಾಗಿಲುತೆಕೆದು, ಅಣಕಿಸುತ್ತಿರುವ ಕಣ್ಣಬೊಂಬೆಯನ್ನು, ಕೈ
ಗೊಟ್ಟು, ಬೇಕಾದಲ್ಲಿಗೆ ನಡೆಯಿಸುವುದರಿಂದೆ, ಅದಳ್ಳೆ ಅಷ್ಟು ಮೇಲ್ವೆ. (ಯೋಚಿಸಿ)
ಆದರೆ, ಬೆಳಕು ಆ ಕಣ್ಣಿಗೆ, ಅಷ್ಟು ಸೆಹಾಯಮಾಡಲಿಕ್ಕೆ, ಏನಾದರೂ ಕಾರಣ
ಎದೆಯೆ? ಹೌದು, ಕಾರಣವಿಲ್ಲದೆ ಕಾರ್ಯವಿರಲಾರದು. ತಾಯಿ ಇಲ್ಲದೆ ಮಗುವೆ
ಲ್ಲಿಂದ-ಜೋ! ನೆನಪಿನ ಬೀಗದ ಕೈ ಕೈಗೆ ಸಿಕ್ಕಿತು. ಕಣ್ಣೆಂದರೆ, ಬೆಳಕಿನ ಸಮೂಪದ
ಬಂಧು. ಅದರಿಂದಲೆ, ಬೆಳಕು, ಕಣ್ಣನ್ನು ಏಲ್ಲಿ ಬೇಕಾದರೂ ನೆಜೆಯಿಸಿ, ಬೇಕೆಂಬಷ್ಟು
ಕಾಣಿಸುವುದು. ಆ ಹೊರಗಿದ್ದು ದಾರಿತೋರಿಸುವ ಬೆಳೆಕು ಇಲ್ಲದಿರುವುದ
ರಿಂದಲೆ, ರಾತ್ರಿಯಲ್ಲಿ ಗತಿಗಾಣದೆ ಕಣ್ಣುಮುಚ್ಞುವುದು. ದೊಡ್ಡವರು, ಮಂದು<noinclude></noinclude>
id8reekf1a8crgeg61th187oamk0uni