ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.8 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:Chitrakuuta (1954).djvu/೫೬ 104 120883 325119 324832 2026-06-25T11:41:04Z A826 6806 /* Validated */ 325119 proofread-page text/x-wiki <noinclude><pagequality level="4" user="A826" />{{rh||ಚಿತ್ರಕೂಟ|೪೧}}</noinclude>ರಾಮಾಶಾಸ್ತ್ರಿಯು " ಒಬ್ಬ ಹೆಣ್ಣೇನೋ ಇದ್ದಾಳೆ. ರೂಪಲಕ್ಷಣಗಳಂತೂ ಕೇಳಬೇಕಾಗಿಲ್ಲ. ಸಾಕ್ಷಾತ್ ಲಕ್ಷ್ಮಿಯಂತಿದ್ದಾಳೆ. ಆದರೆ ಎರಡನೆಯ ಸಂಬಂಧಕ್ಕೆ ಕೊಡಲು ಅವಳ ತಾಯಿ ಒಪ್ಪುತ್ತಾಳೋ ಇಲ್ಲವೋ ಸಂದೇಹ " ಎಂದನು. " ಸರಿ! ಮೊದಲು ಹೆಣ್ಣುನೋಡೋಣ. ವರನ ಐಶ್ವರ್ಯ ಲಕ್ಷಣಗಳನ್ನೆಲ್ಲಾ ಹೇಳಿ ನೋಡು! ಒಪ್ಪಿಕೊಂಡರೆ ಆಯಿತು. ಇಲ್ಲದಿದ್ದರೆ ಅವರ ಇಷ್ಟ. ಒಳ್ಳೆಯ ಕೆಲಸ, ಪ್ರಯತ್ನ ಮಾಡಿ ನೋಡೋಣ. " ರಾಮಾಶಾಸ್ತ್ರಿಯು ಒಪ್ಪಿದನು. ರಂಗಪ್ಪನ ಹೆಸರು ಈಗ ರಂಗರಾಯ! ಮಂಡಿಪೇಟೆಯಲ್ಲಿ ದೊಡ್ಡ ಅಂಗಡಿ ಚೌಬೀನೆ ವ್ಯಾಪಾರ ಬೇರೆ! ಲಕ್ಷ್ಮೀಪುರದಲ್ಲಿ ದೊಡ್ಡಮನೆ ಕಟ್ಟಿದ್ದಾನೆ. ದಾನ ಧರ್ಮಗಳಲ್ಲಿ ಎತ್ತಿದ ಕೈ. ವ್ಯಾಪಾರಸ್ಥರ ಮಧ್ಯೆ ಅವನಿಗೆ ಗಣ್ಯಸ್ಥಾನವಿದೆ. ವೈದಿಕ ಬ್ರಾಹ್ಮಣರಿಗಂತೂ ಕಲ್ಪವೃಕ್ಷ. ಅಣ್ಣ ತಮ್ಮಂದಿರಿಬ್ಬರೂ ಪಾರ್ವತಮ್ಮನ ಮನೆಗೆ ಹೊರಟರು. ಇವರು ಹೋಗುವ ಹೊತ್ತಿಗೆ ಸುಮಾರು ಹತ್ತು ಗಂಟೆಯ ಸಮಯ. ಶ್ಯಾಮಲೆಯು ಮಡಿಯುಟ್ಟುಕೊಂಡು ತುಳಸೀಪೂಜೆ ಮಾಡುತ್ತಿದ್ದಳು. ರಾಮಾಶಾಸ್ತ್ರಿಯು " ನೋಡಣ್ಣಾ! ಇವಳೇ ಹುಡುಗಿ " ಎಂದು ತೋರಿಸಿದನು. ಮನೆಯೊಳಗೆ ಹೋಗಿ ಇಬ್ಬರೂ ಚಾಪೆಯ ಮೇಲೆ ಕುಳಿತುಕೊಂಡರು. ರಾಮಾಶಾಸ್ತ್ರಿಯು ಮನೆಯೊಳಗೆ ಹೋಗಿ, ಪಾರ್ವತಮ್ಮನವರೇ ನಮ್ಮ ಅಣ್ಣ ಶಾಮಾಶಾಸ್ತ್ರಿಗಳು ಬಂದಿದ್ದಾರೆ. ಅವರು ಕನ್ಯಾರ್ಥಿಗಳಾಗಿ ಬಂದಿದ್ದಾರೆ. ನಾನು ಚೆನ್ನಾಗಿ ಬಲ್ಲೆ! ವರನು ಎಲ್ಲದರಲ್ಲಿಯೂ ಶ್ರೇಷ್ಠ. ಆದರೆ ಎರಡನೆಯ ಮದುವೆ. ಅದನ್ನೂ ನೀನು ನೋಡಬೇಕು " ಎಂದು ಹೇಳಿ ಪಾರ್ವತಮ್ಮನವರನ್ನು ಹಜಾರಕ್ಕೆ ಕರೆತಂದನು. ಶಾಮಾಶಾಸ್ತ್ರಿಯು ವಾಚಾಳಿ! ವರನ ಐಶ್ವರ್ಯವನ್ನು ಸ್ವಾರಸ್ಯವಾಗಿ ಬಣ್ಣಿಸಿದನು. ಅವನ ದಾನಧರ್ಮಗಳನ್ನು ಹೊಗಳಿದನು. ಆರೋಗ್ಯದೃಢ ಕಾಯನಾಗಿದ್ದಾನೆಂದು ಹೇಳಿದನು. ಮೊದಲನೆಯ ಸಂಬಂಧದಲ್ಲಿ ಮಕ್ಕಳಿಲ್ಲ. ಮೂವತ್ತೈದೇ ವರ್ಷ ವಯಸ್ಸು. ನಾನು ಅಂಥ ಸಂಬಂಧಗಳು ಸುಖವಾಗಿ<noinclude></noinclude> 2o9cocxwmbwkhhgt797zkta1gmlkcxu