ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.11 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk ಪುಟ:ಹಗಲಿರಳು.pdf/೧೨ 104 120983 325151 2026-07-18T16:03:54Z Viveka BG 8559 /* Proofread */ 325151 proofread-page text/x-wiki <noinclude><pagequality level="3" user="Viveka BG" /></noinclude> ಹಗಲಿರುಳು. 3 --------------------------------------------------------- ಇದಕ್ಕೂ, ಕೆಲವು ಆಕ್ಷೇಪಗಳುಂಟು. ಹೇಗೆಂದರೆ -*ಕತ್ತಲೆಯ ಅಭಾವವೆ ತೇಜಸ್ಸೆಂದು, ಯಾಕೆ ಹೇಳಕೂಡದು? ಪ್ರಬಲವಾದ ಕತ್ತಲೆ ಕವಿದರೆ, ಆತೇಜಸ್ಸೂ ತಲೆಯೆತ್ತುವುದಿಲ್ಲವಷ್ಟೆ. ಕೆಲವು ಚಿಕ್ಕಚಿಕ್ಕ ರತ್ನಗಳೆ ಮಿಣುಕೂ, ಕಗ್ಗತ್ತಲೆಯಲ್ಲಿ ಕಾಣುವುದಿಲ್ಲ. ಹಾಗೆಯೆ, ಆಶಕ್ತವಾದ ಕತ್ತೆಲೆಯೂ, ಪ್ರಬಲವಾದ ತೇಜಸ್ಸಿನ ಜಳ ಪದ ಎದುರಲ್ಲಿ, ಅಡಗುತ್ತ. ಮಡಿಕೆ ಮೊಡಲಾದುವುಗಳಲ್ಲಿ, ಕಪ್ಪಾಗಿ ನೆಲೆನಿಂತ ಕತ್ತಲೆ, ಬೆಳಕಿಗೆ ಅಳುಕುವುದೆ? ರಾತ್ರಿಯ ರಂಗಿನಂತಿರುವ ಅಬಲವಾದ ಕತ್ತಲೆಯನ್ನು ಮಾತ್ರ, ತೇಜಸ್ಸು ಚದರಿಸುವುರು.” ಇದು ಸರಿಯಲ್ಲ. ವಸ್ತುವಿಲ್ಲದೆ, ಅದರ ಬಣ್ಣವೂ ಇಲ್ಲವೆಂಬುದು ಸರ್ವ ಸಮ್ಮತವು. ಎಂದಮೇಲೆ, ಹಗಲಿನಲ್ಲಿ, ರಾತ್ರಿ ಇಲ್ಲದಿರುವುದರಿಂದ ಅದರ ಬಣ್ಣ ವೆಂದು ಕರೆಯಲ್ಪಡುವ ಕತ್ತಲೆಯೂ ಇಲ್ಲವೆಂದಾದಾಯಿತು. ಆದರೆ ಹಗಲಿನಲ್ಲೆ ಕೋಣೆ ಕೊಟ್ಟಡಿಗಳಲ್ಲೂ, ಕಾಡುಗವಿಗಳಲ್ಲೂ ಕತ್ತಲೆಯನ್ನು ನೋಡುವುದು ಪ್ರತ್ಯಕ್ಸಸಿದ್ಧವು. ಇದರಿಂದ, ಮೇಲಿನ ತರ್ಕವು ವ್ಯಥ್ಯವೆಂಬದು ನಿಶ್ಚಯವಾಗಿ, ಕತ್ತಲೆಯೆಂದಕೆ, ಕಣ್ಣುಗಟ್ಟುವ ಮಾಯಕದ ಮಂಕುಮಸಿಯೆಂದು, ಗೊತ್ತಾಗುವುದು. ಕೆಲವು ರತ್ನಗಳೆ ಹೊಳಪು, ಗಣಿಗಳಲ್ಲಿ ಮಿಣುಕದಿರುವುದೂ ಅವುಗಳ ಅಶಕ್ತಿಯಿಂದಲೆ. ಎಳ್ಳಷ್ಟಾದ ಜ್ಞಾನವು, ಅಜ್ಞಾನಪುಂಜದಲ್ಲಿ ಹೊಳೆಯುವುದೆ? ಅದ ರಿಂದ, ಅನಾಸ್ತಿತ್ವದ ಕತ್ತಲೆಗೆ, ಅಸ್ತಿತ್ವದ ತೇಜಸ್ಸಿನ ಮನ್ನಣೆ ಸಿಕ್ಕಲಾರದು. ನಿಜ ಸ್ಥಿತಿ, ಹೇಗಿದ್ದರೇನು? ಈಗ ಈ ಉಭಯಮತಗಳಲ್ಲಿಯೂ, ಜಗಳವು ಹುರಿಯೇ ತ್ತಿದೆ. ಇಂತಹ ಸoದರ್ಭಗಳಲ್ಲಿ, ಮಧ್ಯಸ್ಥನಾಗುವದೆಂದರೇ ಬಹಳ ಕಷ್ಟವು. ಆಗಲಿ, ನೆಡದವನಿಗೆ, ಮಳೆಬಿಸಿಲುಗಳ ಕಲ್ಲುಮುಳ್ಳುಗಳ ಕಾಟಿವು, ಕಟ್ಟಿಟ್ಟ ಗಂಟೇ ಸರಿ. ಅದರೂ ಕೆರವನ್ನೂ ಳೊಡೆಯನ್ನೂ ಒದಗಿಸಿತೊಂಡರೆ, ಹೇಗಾದರೂ ಸಾಗ ಬಹುದು. ಹಾಗೆಯೆ, ಭೂತಭವಿಷ್ಯತ್ಕಾಲಗಳವನ್ನು ಕೆಳಗೂ ಮೇಲೂ ವಿಸ್ತರಿಸಿ ಕೊಂಡು, ಅವುಗಳಿಗೆ ಅನುಸಾರವಾಗಿ, ನಾನೂ ವರ್ತಿಸುತ್ತಿರಬೇಕು. (ಆಕಾಶದಲ್ಲಿ- ಕಂದ॥ ಕಾಲಗತಿ ಹೇಗೊ? ನಮ್ಮಯ ಪಾಲಕನಾರ್ಯನಿಗೆ ಮುಪ್ಪು ಮಿರುತ ಬಂತಾ ! ಮೇಲೆ ಕತ್ತಲೆಯೆ ತನ್ನಯ ಕಾಲೂರುವದಂತೆ ಎಮ್ಮವಸ್ಥೆಯೇ! ಕಾ. ಕಾ! !!1!! ಎಂದು, ಕಾಗೆ ಮೊದಲಾದ ಪಕ್ಲಿಗಳು ಹಾರುತ್ತಿರುವುವು) --------------------------------------------------------- 1,ಕಾ.ಕಾ=ಎಂಥದೂ ಎಂಥದೂ,ಕಾ. ಕಾ ಎಂಬ ಕೂಗು<noinclude></noinclude> qfpp3o1hlm6ab5bhna6j9zc8eg1x8w3