ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.19
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಪುಟ:ಹಗಲಿರಳು.pdf/೧೦
104
120966
325381
325100
2026-09-11T10:52:45Z
Viveka BG
8559
/* Proofread */ ಸರಿಪಡಿಸಿದೆ,
325381
proofread-page
text/x-wiki
<noinclude><pagequality level="3" user="Viveka BG" /></noinclude> ಹಗಲಿರುಳು.
---------------------------------------------------------
ಅನುಷ್ಟುಪ ॥ ಹಗಲ ಇರುಳೂ ತಾವು ತಿರುಗುತ್ತಿರುವಂದದಿ |
ಸುಖವೂ ದುಖಃಖವೂ ಮೇಲೆ ಮೇಲೆ ಬಪ್ಪುದುಮಂದಿಗೆ.||1||
ಎಲ್ಲಕೂ ಕರ್ತ್ನವಾದೇವನುದಕ್ಕನು ನಿಮಿತ್ತವೈ
ಸೂಜಿ ಚಿಪ್ಲಿಗನೊಪ್ಪಿಂದ ನೂಲಂಬಟ್ಟೆಯೊಳಿೊಯ್ವವೊಲ್||2||
(ಎನ್ನುತ್ತೆ ಕಾಲಫೆೇಟ ಸೂತ್ರಧಾರನು ಪ್ರವೇಶಿಸಿ)
ಆಹಾ! ಸರ್ವಾಧಿಕಾರಿಯಾದ ಪರಮಾತ್ಮನು ದಯದಿಂದ, ನನ್ನಗತಿ, ಎಲ್ಲೆಲ್ಲಿ
ಯೂ ತಡೆಯಿಲ್ಲದೆ ನಡೆಯುತ್ತಿದೆ. ಪಕ್ಷಪಾತವಿಡದೆ, ಲೋಕವೆಲ್ಲವನ್ನೂ, ಅವರ
ವರ ಕರ್ಮಾನುಸಾರವಾಗಿ ನಡೆಯಿಸೆಬೇಕೆಂದು, ಅವನ ಕಟ್ಟಪ್ಪಣೆ. ನನ್ನ ಮನಃ
'ಪೂರ್ವಕನಾದ ಎಣಿಕೆಯೂ ಹಾಗೆಯೆ. ಅದರಿಂದಲೇ ನನ್ನ ಅಧಿಕಾರವು ಶಾಶ್ವತ
ವಾಯಿತು, ಆದರೇನು? ಮೊದಲು, ಅಧಿಕಾರದಲ್ಲಿ ಅಸೆಯಿತ್ತು. ಈಗ, ಅದನ್ನು,
ಸರಿಯಾಗಿ ನಡೆಯಿಸುವುದು ಹೇಗೆ? ಎಂಬ ಅಂಜಿಕೆಯಾಗಿದೆ. ಅದೇನೆಂದರೆ
ಈಗ, ಇಡಿ ಲೋಕವೆ ಎರಡು ಕವಲಾಗಿದೆ. ಒಂದು ನಾಡಿಗೆ ಒಯ್ದರೆ, ಇನ್ನೊಂದು
ಕಾಡಿಗೆ. ಒಂದುಕಡೆ, ಹಗಲಿನ ಬೆಳುಪು, ಮತ್ತೊಂದು ಕಡೆ ಕತ್ತಲೆಯ ಕಪ್ಪು.
ಈ ಇತ್ತಂಡನನ್ನು ಒತ್ತಟ್ಟಿಗೆ ತರುವುದೆಂದರೆ, ಸ್ವರ್ಗಪಾತಾಳಗಳನ್ನು, ಒಟ್ಟುಗೂಡಿ
ಸುವ ಕೆಲಸವೆ.
ಬೆಳಕೆಂದರೆ, ಬಹಳ ಮಂದಿ ಆಶಿಸತಕ್ಕುದು. ಪ್ರತಿಯೊಂದನ್ನೂ ನೋಡ
ಬೇಕೆಂದು, ತನ್ನ ಬಾಗಿಲುತೆಕೆದು, ಅಣಕಿಸುತ್ತಿರುವ ಕಣ್ಣಬೊಂಬೆಯನ್ನು, ಕೈ
ಗೊಟ್ಟು, ಬೇಕಾದಲ್ಲಿಗೆ ನಡೆಯಿಸುವುದರಿಂದಲೆ, ಅದಕ್ಕೆ ಅಷ್ಟು ಮೇಲ್ಮೆ. (ಯೋಚಿಸಿ)
ಆದರೆ, ಬೆಳಕು ಆ ಕಣ್ಣಿಗೆ, ಅಷ್ಟು ಸಹಾಯಮಾಡಲಿಕ್ಕೆ, ಏನಾದರೂ ಕಾರಣ
ವಿದೆಯೆ? ಹೌದು, ಕಾರಣವಿಲ್ಲದೆ ಕಾರ್ಯವಿರಲಾರದು. ತಾಯಿ ಇಲ್ಲದೆ ಮಗುವೆ
ಲ್ಲಿಂದ-ಹೋ! ನೆನಪಿನ ಬೀಗದ ಕೈ ಕೈಗೆ ಸಿಕ್ಕಿತು. ಕಣ್ಣೆಂದರೆ, ಬೆಳಕಿನ ಸಮಿಪದ
ಬಂಧು. ಅದರಿಂದಲೆ, ಬೆಳಕು, ಕಣ್ಣನ್ನು ಏಲ್ಲಿ ಬೇಕಾದರೂ ನಡೆಯಿಸಿ, ಬೇಕೆಂಬಷ್ಟು
ಕಾಣಿಸುವುದು. ಆ ಹೊರಗಿದ್ದು ದಾರಿತೋರಿಸುವ ಬೆಳಕು ಇಲ್ಲದಿರುವುದ
ರಿಂದಲೆ, ರಾತ್ರಿಯಲ್ಲಿ ಗತಿಗಾಣದೆ ಕಣ್ಣುಮುಚ್ಞುವುದು. ದೊಡ್ಡವರು, ಮಂದು<noinclude></noinclude>
m0phpeb5a9pyt7foc2d5x0jxiwco36v