ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.20
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕ್ಲೆಬ್ಸ್, ಥಿಯೊಡೊರ್ ಆಲ್ಬ್ರೇಷ್ಟ್ ಎಡ್ವಿನ್
0
22752
325395
62822
2026-09-19T05:51:20Z
~2026-50067-18
8674
325395
wikitext
text/x-wiki
ಕ್ಲೆಬ್ಸ್, ಥಿಯೊಡೊರ್ ಆಲ್ಬ್ರೇಷ್ಟ್ ಎಡ್ವಿನ್ 1834-1913. ಜರ್ಮನಿಯ ಏಕಾಣುಜೀವಿ ಶಾಸ್ತ್ರಜ್ಞ. ಮೂತ್ರಕೋಶದ ರೋಗವಾದ ಗ್ಲಾಮೆರುಲೊ ನೆಫ್ರೈಟಿಸನ್ನು ಆವಿಷ್ಕರಿಸಿದವ (1870). ಆದ್ದರಿಂದ ಅದಕ್ಕೆ ಕ್ಲೆಬ್ಸ್ ಕಾಯಿಲೆ ಎಂದು ಹೆಸರಾಯಿತು. ಉಪದಂಶ (ಸಿಫಿಲಿಸ್) ರೋಗವನ್ನು ಕೋತಿಗಳಿಗೆ ವರ್ಗಾಯಿಸಿ ಪ್ರಯೋಗ ನಡೆಸಿದ. ಫ್ರೆಡರಿಕ್ ಲಾಫೆಲರ್‍ನೊಡನೆ ಸಹಕರಿಸಿ ಡಿಫ್ತೀರಿಯಾ ದಂಡಾಣು ಜೀವಿಗಳನ್ನು ಆವಿಷ್ಕರಿಸಿದ. ಆದ್ದರಿಂದ ಅವುಗಳಿಗೆ ಕ್ಲೆಬ್ಸ್-ಲಾಫೆಲರ್ ದಂಡಾಣು ಜೀವಿಗಳೆಂದು ಹೆಸರು ಬಂದಿದೆ.
ಕ್ಲೆಬ್ಸ್ ಜನಿಸಿದ್ದು ಜರ್ಮನಿಯ ಕೊನಿಗ್ಸ್ ಬರ್ಗ್ ಎಂಬಲ್ಲಿ, 1834ರ ಫೆಬ್ರುವರಿ 6 ರಂದು. ಬರ್ಲಿನ್ನಿನ ರೋಗವಿಜ್ಞಾನ ಸಂಸ್ಥೆಯಲ್ಲಿ (ಪ್ಯಾಥಾಲಾಜಿಕಲ್ ಇನ್ಸ್‍ಟಿಟ್ಯೂಟ್) 1861-1866ರ ವರೆಗೆ ರುಡೋಲ್ಫ್ ವರ್‍ಷೊ ಎಂಬಾತನ ಸಹಾಯಕನಾಗಿ ಕೆಲಸ ಮಾಡಿದ. ಅನಂತರ ರೋಗವೈಜ್ಞಾನಿಕ ಅಂಗರಚನಾಶಾಸ್ತ್ರದ (ಪ್ಯಾಥಾಲಾಜಿಕಲ್ ಅನಾಟಮಿ) ಪ್ರಾಧ್ಯಾಪಕನಾಗಿ ಬರ್ನ್ (1866), ವಾಟ್ರ್ಸ್‍ವರ್ಗ್ (1871), ಪ್ರೇಗ್ (1873), ಜûುರಿಕ್ (1882) ಮತ್ತು ಚಿಕಾಗೊ (1896) ಪ್ರದೇಶಗಳಲ್ಲಿ ಕೆಲಸ ಮಾಡಿದ. ಫ್ರಾನ್ಸ್ ಮತ್ತು ಜರ್ಮನಿಗಳ ನಡುವೆ ನಡೆದ ಯುದ್ಧದಲ್ಲಿ, ಕೆಲವು ಗಾಯಗಳನ್ನು ಆಧರಿಸಿ ಗಾಯಗಳ ಸಾಂಕ್ರಾಮಿಕ ಏಕಾಣುಜೀವಿಗಳನ್ನು ಕುರಿತು ಸಂಶೋಧನೆ ನಡೆಸಿದ. ದೇಹದ ಯಾವುದೇ ಭಾಗದಲ್ಲಿರುವ ಸೋಂಕು ಹೃದಯದ ಒಳಪೊರೆಯ ಊತವನ್ನು (ಎಂಡೊಕಾರ್ಡೈಟಿಸ್) ಉಂಟುಮಾಡಬಹುದು ಎಂಬುದನ್ನು ಪ್ರಯೋಗದಿಂದ ತೋರಿಸುವುದರಲ್ಲಿ ಯಶಸ್ವಿಯಾದ (1876). ಕ್ಷಯರೋಗಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳನ್ನು ನಡೆಸಿ ಹಾಲಿನ ಮೂಲಕ ಕ್ಷಯರೋಗದ ಸಾಂಕ್ರಾಮಿಕತೆ ಉಂಟಾಗುವುದನ್ನು ಕಂಡುಹಿಡಿದ. 1913ರ ಅಕ್ಟೋಬರ್ 23ರಂದು ಬರ್ನಿನಲ್ಲಿ ಕ್ಲೆಬ್ಸ್ ಗತಿಸಿದ. (ಎಸ್.ಎಚ್.ಪಿ)
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
1zk79z943s88q30j3eragu1gki1kyi4