ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.20
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಬಿಗರ ಚೌಡಯ್ಯ
0
3521
325408
250020
2026-09-23T11:39:11Z
Mallesh u barki
8679
/* ಅಂಬಿಗರ ಚೌಡಯ್ಯ */
325408
wikitext
text/x-wiki
==ಅಂಬಿಗರ ಚೌಡಯ್ಯ==
12ನೆಯ ಶತಮಾನದ ಬಸವಣ್ಣನವರ ಕಾಲದ ಒಬ್ಬ ವಚನಕಾರ. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ಬಸವಣ್ಣನವರ ಅನುಭವಮಂಟಪದಲ್ಲಿ ಸಮಾನಭೂಮಿಕೆಯ ಸಮ್ಮೇಳನದಲ್ಲಿ ಸೇರಿಕೊಂಡವ. ತನ್ನ ಕಾಯಕ ಅಥವಾ ವ್ಯಕ್ತಿನಾಮವಾದ ಅಂಬಿಗರ ಚೌಡಯ್ಯ ಎಂಬುದೇ ಈತನ ವಚನಗಳ ಅಂಕಿತವಾಗಿದೆ. ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದರಲ್ಲಿ ತನ್ನ ಅನುಭಾವದೃಷ್ಟಿಯನ್ನು ಪ್ರಕಟಿಸಿದ್ದಾನೆ ನಿಜಶರಣ ಅಂಬಿಗರ ಚೌಡಯ್ಯ.
ಉಳಿದ ವಚನಕಾರರ ವಚನಗಳಲ್ಲಿರುವಂತೆ ಇವನಲ್ಲಿಯೂ ಶಿವಾನುಭವಪರವಾದ ವಚನಗಳಿದ್ದರೂ ಅವುಗಳಲ್ಲಿ ಕಂಡುಬರುವ ಸಮಕಾಲೀನ ಸಮಾಜ ವಿಡಂಬನೆಯ ವ್ಯಗ್ರದೃಷ್ಟಿ ಬೇರೆಯವರಲ್ಲಿ ವಿರಳವೆಂದೇ ಹೇಳಬೇಕು. ಅವನ ವಚನಗಳ ವಸ್ತು, ಭಾಷೆ, ಶೈಲಿ ಗಮನಿಸಿದರೆ ಅವನೊಬ್ಬ ಕೆಚ್ಚೆದೆಯ, ನಿಷ್ಠುರಪ್ರಕೃತಿಯ, ಗ್ರಾಮ್ಯಮನೋಧರ್ಮದ ಒರಟು ವಚನಕಾರ ಎಂಬುದು ಸ್ಪಷ್ಟವಾಗುತ್ತದೆ. ಅವನು ನ್ಯಾಯನಿಷ್ಠುರ, ದಯಾದಾಕ್ಷಿಣ್ಯಪರನಲ್ಲ. ಯಾರನ್ನೇ ಆಗಲಿ ಯಾವುದನ್ನೇ ಆಗಲಿ ಅವನು ಟೀಕಿಸದೆ ಬಿಡುವುದಿಲ್ಲ. ಅವನು ಮೃದುವಾಗಿ ಮಾತನಾಡುವುದು ಅಪುರ್ವ; ಮಾತಿನ ಬಹುಭಾಗ ಹರಿತವಾದದ್ದು, ಸಂಸ್ಕಾರದೂರವಾದದ್ದು. ‘ಕೇಳಿರಯ್ಯ ಮಾನವರೇ’, ‘ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೋ’, ‘ನನಗೊಬ್ಬರೆಂಜಲು ಸೇರದೆಂದು ಶುಚಿತನದಲ್ಲಿ ಬದುಕುವ ಬರಿಯ ಮಾತಿನ ಭುಂಜಕರು ನೀವು ಕೇಳಿರೋ’, ‘ಪರಪುರುಷಾರ್ಥವನರಿಯದೆ ಕೆಟ್ಟನರ ಕುರಿಗಳು ನೀವು ಕೇಳಿರೋ’ ಎಂದು ಆರಂಭವಾಗಿ ‘ಮೆಟ್ಟಿದ್ದ ದೊಡ್ಡ ಪಾದರಕ್ಷೆಯ ತಕ್ಕೊಂಡು ಲಟಲಟನೆ ಹೊಡೆಯೆಂದ’, ‘ಪಡಿಹಾರ ಉತ್ತಣ್ಣನ ಎಡಪಾದರಕ್ಷೆಯಿಂದ ಪಟಪಟನೆ ಹೊಡೆಯೆಂದ’, ‘ಮೂಗ ಕೊಯ್ದು ಇಟ್ಟಂಗಿಯ ಕಲ್ಲಿಲೆ ಸಾಸಿವೆಯ ತಿಕ್ಕಿ ಹಿಟ್ಟಿನ ತಳಿದು ಮೇಲೆ ನಿಂಬೆಯ ಹುಳಿಯನೆ ಹಿಂಡಿ ಪಡುವಲ ಗಾಳಿಗೆ ಹಿಡಿ’-ಹೀಗೆ ಮುಕ್ತಾಯವಾಗುತ್ತದೆ, ಇವನ ವಚನಗಳ ಶೈಲಿ. ಹಳೆಯ ಮತ್ತು ಹೊಸ ನಂಬಿಕೆಗಳ ಅವಸ್ಥಾಂತರದ ಅವ್ಯವಸ್ಥೆಯಲ್ಲಿದ್ದ ಅಂದಿನ ವೀರಶೈವ ಸಮಾಜದ ಲೋಪದೋಷಗಳನ್ನು ನಿರ್ದಾಕ್ಷಿಣ್ಯವಾಗಿ ಎತ್ತಿ ತೋರಿಸುವ ನಿಜಶರಣ ಅಂಬಿಗರ ಚೌಡಯ್ಯನ ಈ ವಚನಗಳು ಬಹುಶಃ ಅಂದಿನ ಸಾಮಾಜಿಕ ಆವಶ್ಯಕತೆಯ ಪರಿಣಾಮಗಳೆಂದು ನಾವು ಭಾವಿಸಬಹುದು. ನಿಜಶರಣ ಅಂಬಿಗರ ಚೌಡಯ್ಯನ ವಚನಗಳಿಂದ ನಮಗೆ ಕಂಡುಬರುವ ಸಮಾಜದ ಅವ್ಯವಸ್ಥೆಯ ಚಿತ್ರ, ಬೇರೆಯವರಲ್ಲಿ ನಮಗೆ ಇಷ್ಟರಮಟ್ಟಿಗೆ ಕಾಣದು. ಅವನ ವಚನಗಳಲ್ಲಿ ನಿಜಶರಣನ ಮೊರೆತದ ಜೊತೆಗೆ ಸುಧಾರಕನ ಕಟುಟೀಕೆಯೂ ಕೇಳಿಬರುತ್ತದೆ. ಅವನ ವಚನಗಳು ಅನರ್ಥ ಸಾಧಕವಾದ ಕೋಪದಿಂದ ಹೊಮ್ಮಿದುವಲ್ಲ; ಸದರ್ಥಸಾಧಕವಾದ ಸತ್ಕೋಪದಿಂದ ಹೊಮ್ಮಿರುವುವು. ಕನ್ನಡ ಸಾಹಿತ್ಯದಲ್ಲಿ ಈ ಬಗೆಯ ದಿಟ್ಟತನ, ವ್ಯಗ್ರತೆ ಕಂಡುಬರುವುದು ಬಹುಶಃ ಇಬ್ಬರಲ್ಲೇ ಎಂದು ತೋರುತ್ತದೆ. ಒಬ್ಬ ಸಿಡಿಲು ನುಡಿಯ ಸರ್ವಜ್ಞ; ಇನ್ನೊಬ್ಬ ಕೆಚ್ಚೆದೆಯ ವಚನಕಾರ ನಿಜಶರಣ ಅಂಬಿಗರ ಚೌಡಯ್ಯ.
[[:wikipedia:kn:ಅಂಬಿಗರ_ಚೌಡಯ್ಯ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
gokyi9o6lzklgtp85qjfnhbmzedpmyc
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಲಿಮ್, ಜೊಹಾನ್ ವಿಲ್ಹೆಲ್ಮ್ ಲೂಡ್ವಿಗ್
0
23353
325406
66387
2026-09-23T06:10:18Z
~2026-50067-18
8674
325406
wikitext
text/x-wiki
ಗ್ಲಿಮ್, ಜೊಹಾನ್ ವಿಲ್ಹೆಲ್ಮ್ ಲೂಡ್‍ವಿಗ್ -
1719 - 1803. ಜರ್ಮನ್ ಕವಿ. ಕಿರಿಯ ಕವಿಗಳಿಗೆ ಈತನು ನೀಡುತ್ತಿದ್ದ ಪ್ರೋತ್ಸಾಹ ಮತ್ತು ಸಹಾಯಗಳಿಂದಾಗಿ ಈತನನ್ನು ಫಾದರ್ ಗ್ಲಿಮ್ ಎಂದು ಕರೆಯಲಾಗುತ್ತಿತ್ತು. ಉಜ್ವಲವಾದ ದೇಶಾಭಿಮಾನದಿಂದ ಪ್ರೇರಿತವಾದ ಈತನು ಕವಿತೆಗಳು, ಫ್ರೆಡರಿಕ್ ಮಹಾಶಯನ ಕಾಲದ ವೀರರಸ ಪ್ರಧಾನವಾದ ಕವಿತೆಗಳ ಸಾಲಿನಲ್ಲಿ ಬಹಳ ಮೆಚ್ಚುಗೆಯನ್ನು ಪಡೆದವು. ಭಾವನೆಗಳ ಸಹಜತೆಯಿಂದ ಮತ್ತು ಪರಿಣಾಮಕಾರಿಯಾದ ಶೈಲಿಯಿಂದ ಇವುಗಳಲ್ಲಿ ಅನೇಕವು ಶ್ರೇಷ್ಠ ಕವಿತೆಗಳೆನ್ನಿಸಿವೆ ಈತನ ಎಲ್ಲ ಕೃತಿಗಳನ್ನು ಎಂಟು ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಲಾಗಿದೆ. (1811 -14). ಈತನ ಪ್ರೂಸಿಷೆ ಕ್ರೀಗ್‍ಸ್ಟೀಡರ್ ಘಾನ್ ಈನೆಮ್ ಗ್ರೆನಾಡಿಯರ್ - ಎಂಬುದು ಬಹು ಉತ್ತಮವಾದ ಕೃತಿಯೆಂದು ಖ್ಯಾತವಾಗಿದೆ. (ಪಿ.ಎನ್.ಆರ್.)
(ಪಿ.ಆರ್.ಎಂ.)
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
ia0vgddlcuj0yocuxb3r1m8ywpz78yi
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗ್ಲೂಕ್, ಕ್ರಿಸ್ಟೊಫ್ ವಿಲಿಬಾಲ್ಡ್
0
23356
325407
66389
2026-09-23T09:19:51Z
~2026-50067-18
8674
325407
wikitext
text/x-wiki
ಗ್ಲೂಕ್, ಕ್ರಿಸ್ಟೊಫ್ ವಿಲಿಬಾಲ್ಡ್ -
1714-1787. ಜರ್ಮನಿಯ ಒಬ್ಬ ಪ್ರಸಿದ್ದ ವಾಗ್ಗೇಯಕಾರ. ಈತ ರಚಿಸಿದ ಹಲವಾರು ಗೇಯಕೃತಿಗಳು ಅದರಲ್ಲೂ ಮುಖ್ಯವಾಗಿ ಆಪೆರಗಳು, ಯುರೋಪಿನ ಸಂಗೀತ ಇತಿಹಾಸದಲ್ಲಿ ಹೊಸ ತಿರುವನ್ನು ಗುರುತಿಸಿದವೆನ್ನಲಾಗಿದೆ. ಗ್ಲೂಕ್ ಹುಟ್ಟಿದ್ದು ಜರ್ಮನಿಯ ವೈಡೆನ್ ವ್ಯಾಂಗ್ ಎಂಬಲ್ಲಿ. ಇವನ ತಂದೆ ರಾಜಕುಮಾರ ಲೊಬ್ಕೋವಿಟ್‍ಜóನ ಸೇವೆಯಲ್ಲಿ ಇದ್ದುಕೊಂಡು ಅವನ ಬೇಟೆಯಾಟಗಳಲ್ಲಿ ಸಹಕರಿಸುತ್ತಿದ್ದ. ಗ್ಲೂಕ್‍ಗೆ 12 ವರ್ಷವಾದಾಗ ಅವನನ್ನು ಕೊಮೋಟ ಎಂಬಲ್ಲಿನ ಜೆಸ್ಯೂಟ್ ಕಾಲೇಜಿಗೆ ಸೇರಿಸಲಾಯಿತು. ಈತ ಅಲ್ಲಿ ಪ್ರಪ್ರಥಮವಾಗಿ ಸಂಗೀತಪಾಠಗಳನ್ನು ಕಲಿತುಕೊಂಡ. ಅನಂತರ 1732ರಲ್ಲಿ ದ್ರಾಗ್ ವಿಶ್ವವಿದ್ಯಾಲಯ ಸೇರಿದ. ಸುಮಾರು ನಾಲ್ಕು ವರ್ಷಗಳ ಕಾಲ ಜೀವನೋಪಾಯಕ್ಕಾಗಿ ಪಿಟೀಲು, ಸೆಲ್ಲೋ ಮುಂತಾದ ವಾದ್ಯಗಳನ್ನು ನುಡಿಸುತ್ತ ಸಂಗೀತಪಾಠಕಲಿಸುತ್ತ ಕಾಲ ಕಳೆದ. ಸರ್ನೊಹರ್‍ಸ್ಕಿ ಎಂಬ ಸಂಗೀತ ವಿದ್ವಾಂಸನೊಬ್ಬ ಇವನ ಗುರುವಾದ. 1736ರಲ್ಲಿ ರಾಜಕುಮಾರ ಲೊಬ್ಕೋವಿಜûನ ಪರಿವಾರದಲ್ಲಿ, ಚೇಂಬರ್ ಸಂಗೀತಗಾರನಾಗಿ ವಿಯನ್ನಕ್ಕೆ ಹೋಗಿದ್ದಾಗ ಇವನಿಗೆ ಇಟಲಿಯ ಆಪೆರದಲ್ಲಿ ಹೆಚ್ಚಿನ ಅಭಿರುಚಿಯುಂಟಾಯಿತು. ಮರುವರ್ಷವೇ ಈತ ಅಲ್ಲಿನ ರಾಜಕುಮಾರ ಮೆಲ್‍ಜಿóಯನ್ನು ಸಂದರ್ಶಿಸಿ ಅವನ ಆಶ್ರಯ ದೊರಕಿಸಿಕೊಂಡ. ರಾಜಕುಮಾರನ ನೆರವಿನಿಂದ ಮಿಲಾನಿಗೆ ಹೋಗಿ ಅಲ್ಲಿ ಮೂರು ವರ್ಷಗಳ ಕಾಲ ಪ್ರಸಿದ್ದ ಸಂಗೀತಶಾಸ್ತ್ರಜ್ಞ ಜಿಯೊವಾನಿ ಬ್ಯಾಟಿಸ್ಟ ಸ್ಯಾನ್ ಮಾರ್ಟಿನಿ ಎಂಬುವವನ ಬಳಿ ತನ್ನ ವ್ಯಾಸಂಗವನ್ನು ಮುಂದುವರಿಸಿದ. 1741ರಲ್ಲಿ ಆಟಾರ್ಸೆಸ್ ಎಂಬ ತನ್ನ ಪ್ರಪ್ರಥಮ ಆಪೆರವನ್ನು ರೂಪಿಸಿ ಪ್ರದರ್ಶಿಸಿದ. ಮುಂದಿನ ನಾಲ್ಕುವರ್ಷಗಳ ಅವಧಿಯಲ್ಲಿ ಸುಮಾರು 8 ಇಟಾಲಿಯನ್ ಮಾದರಿಯ ಆಪೆರಗಳನ್ನು ಪ್ರದರ್ಶಿಸಿದ. 1745ರಲ್ಲಿ ರಾಜಕುಮಾರ ಲೊಬ್ಕೋವಿಜûನ ಜೊತೆಯಲ್ಲಿ ಲಂಡನ್ನಿನ ಬೇಟಿಯಿತ್ತ. ಪ್ಯಾರಿಸಿನಲ್ಲಿ ತಂಗಿದ್ದಾಗ ಫ್ರೆಂಚ್ ಗೇಯಕಾರ ಜೀನ್ ಫಿಲೆಪ್ಟೆ ರಾಮೋ (1683-1764) ಎಂಬುವವನ ಆಪೆರಗಳನ್ನು ನೋಡಿ ಮೆಚ್ಚಿಕೊಂಡ. ಸುಮಾರು ಒಂದು ವರ್ಷಕಾಲ ಲಂಡನಿನಲ್ಲಿದ್ದಾಗ ತನ್ನ 2 ಸಂಕೀರ್ಣಗೀತಗಳನ್ನೂ (ಪ್ಯಾಸ್ಟಿಚ್) 6 ತ್ರೀವಾದ್ಯಕೃತಿಗಳನ್ನೂ (ಟ್ರಿಯೋಸೊನಾಟಾಸ್) ಶ್ರುತಪಡಿಸಿದ. ಅಲ್ಲಿ ಇವನಿಗೆ ಹ್ಯಾಂಡಲ್ ಆರ್ನ್ ಮುಂತಾದ ಸಂಗೀತಗಾರರ ಪರಿಚಯವಾಯಿತು. ಲಂಡನಿನಲ್ಲಿ ಈತ ಪಿಎತ್ರೋ ಮಿನ್‍ಗೊಟ್ಟಿ ಎಂಬುವವನ ಇಟಾಲಿಯನ್ ಆಪೆರ ಕಂಪೆನಿಗೆ ಸೇರಿ, ಅದರ ಸಂಗೀತ ನಿರ್ದೇಶಕನಾಗಿ, ಕಂಪೆನಿಯೊಂದಿಗೆ ಅಲ್ಲಲ್ಲೇ ಸಂಚರಿಸಿದ. ಅಷ್ಟು ಹೊತ್ತಿಗೆ ಇವನಿಗೆ ಸಾಕಷ್ಟು ಕೀರ್ತಿ ದೊರಕಿತ್ತು.
ಶ್ರೀಮಂತ ವ್ಯಾಪಾರಿಯೊಬ್ಬನ ಮಗಳಾದ ಮಾರಿಯಾನಿ ಪರ್ಗಿನ್ ಎಂಬುವವಳನ್ನು 1750ರಲ್ಲಿ ವಿವಾಹವಾಗಿ ವಿಯನ್ನದಲ್ಲಿ ನೆಲಸಿದ. ನೇಪಲ್ಸ್ ಮುಂತಾದ ಕಡೆ ಈತ ರೂಪಿಸಿದ ವಾದ್ಯಮೇಳ ಗೋಷ್ಠಿಗಳಿಂದಾಗಿ ಇವನ ಹೆಸರು ಇಟಲಿಯಲ್ಲೆಲ್ಲ ವ್ಯಾಪಿಸಿತು. 1754ರಲ್ಲಿ ಕೌಂಟ್ ಡುರಾಸೋó ಎಂಬುವವನ ಆಸ್ಥಾನದಲ್ಲಿ ಸಂಗೀತ ನಾಟ್ಯಗೃಹಗಳ ನಿರ್ದೇಶಕನಾಗಿ ನೇಮಿತನಾದ. 1760ರಿಂದಾಚೆಗೆ ಸೇವಾವೃತ್ತಿಯನ್ನು ತ್ಯಜಿಸಿ ಸ್ವತಂತ್ರ ಜೀವನ ನಡೆಸುವಂತಾದ.
1761ರ ವರೆಗೆ ಈತ ರಚಿಸದಿ ಕೃತಿಗಳಲ್ಲಿ ಹೆಚ್ಚು ಸ್ವಂತಿಕೆ ಕಂಡುಬರದಿದ್ದರೂ ಆ ವರ್ಷ ರಚಿಸಿದ ಡಾಮ್‍ಜುಆನ್ ಮತ್ತು ಆರ್ಫಿಯಸ್ ಆಂಡ್ ಯ್ಯೂರಿಡೀಸ್ ಎಂಬ ಬ್ಯಾಲೆಗಳಲ್ಲಿ ಈತನ ಪ್ರತಿಭೆ ಎದ್ದುಕಾಣುತ್ತವೆ. ಜರ್ಮನಿಯ ಅಭಿಜಾತವಾದಿ ವಿಂಕಲ್‍ಮನ್ನನನ್ನು ಸಂದರ್ಶಿಸಿದಾಗಿನಿಂದ ಗ್ಲೂಕ್‍ಗೆ ವಿಶೇಷ ಅನುಭವಗಳು ಲಭಿಸಿದವು. ವಿಶೇಷ ನಾಟ್ಯಪ್ರಜ್ಞೆಯುಳ್ಳ ಗ್ಲೂಕ್ ಹದಿನೆಂಟನೆಯ ಶತಮಾನದ ನವ ಅಭಿಜಾತ ಪಂಥದವರಂತೆ ತಾನೂ ಪುರಾತನ ಗ್ರೀಕರ ಸಾಹಿತ್ಯ ಹಾಗೂ ಕಲಾತತ್ತ್ವಗಳಿಗೆ ಮಾರುಹೋದನಾದರೂ ಕೆಲವು ಕಾಲ ಇಟಾಲಿಯನ್ ಮಾದರಿಯ ಆಪೆರಗಳ ರಚನೆಯನ್ನೇ ಮುಂದುವರಿಸಿದ. 1769ರಲ್ಲಿ ಆಲ್‍ಸೆಸ್ತ್ ಎಂಬ ತನ್ನ ಆಪೆರಕ್ಕೆ ಬರೆದ ಮುನ್ನುಡಿಯಲ್ಲಿ ತನ್ನ ಸಂಗೀತಸೂತ್ರಗಳನ್ನೂ ಸಿದ್ದಾಂತಗಳನ್ನೂ ಖಚಿತವಾಗಿ ವ್ಯಕ್ತಪಡಿಸಿದ. ಆಪೆರದ ರಚನೆಯಲ್ಲಿ ವಾಗ್ಗೇಯಕಾರನಿಗೆ ಆಯಾ ಸನ್ನಿವೇಶಗಳಲ್ಲಿನ ನಾಟ್ಯಪ್ರಜ್ಞೆಯ ಅರಿವಿರಬೇಕು. ಅವನು ಕಣ್ಣಿಗೆ ಹೊಡೆಯುವಂಥ ದೃಶ್ಯಾತ್ಮಕ ಅಂಶಗಳಿಗೆ ಹೆಚ್ಚು ಗಮನವೀಯಬಾರದು. ಗೇಯಕೃತಿಗಳು ಸರಳವೂ ಉದಾತ್ತವೂ ಆದ ಕಲಾವಂತಿಕೆಯಿಂದ ಕೂಡಿರಬೇಕು. - ಎಂಬುದು ಗ್ಲೂಕನ ಅಭಿಮತ. ಇವನ್ನು ಎತ್ತಿತೋರಿಸಲೆಂದೇ ಆಲ್‍ಸೆಸ್ತ್ ಎಂಬ ಕೃತಿಯನ್ನು ಈತ ಬರೆದದ್ದು. ಆದರೆ ಇವನ ಕಲಾಪ್ರತಿಭೆಗೆ ಸದವಕಾಶ ದೊರತದ್ದು ಈತ ಪ್ಯಾರಿಸಿನಲ್ಲಿಲ್ಲದಿದ್ದಾಗ. ಪ್ಯಾರಿಸಿನ ಆಪೆರ ಸಂಸ್ಥೆ ಇವನ ಪ್ರತಿಭೆಗೆ ಪುರಸ್ಕಾರವಿತ್ತು ಕೆಲವು ಕೃತಿಗಳನ್ನು ರಚಿಸುವಂತೆ ಆಹ್ವಾನಿಸಿತು. ಇದರ ಸಲುವಾಗಿ ಗ್ಲೂಕ್ 6 ಆಪೆರಗಳನ್ನು ಬರೆದು ತಾನೇ ಅವನ್ನು ನಿರ್ದೇಶಿಸಿ ಪ್ರದರ್ಶನಕ್ಕೆ ಅಣಿಮಾಡಿದ. ತನಗೆ ಮೆಚ್ಚುಗೆಯಾದ ಕಲಾಪಾತ್ರಗಳೆಲ್ಲವನ್ನೂ ಈ ಆಪೆರಗಳಲ್ಲಿ ಪ್ರಯೋಗಿಸಲು ಗ್ಲೂಕ್‍ಗೆ ಸಾಧ್ಯವಾಯಿತು. ಫ್ರೆಂಚ್ ರಸಿಕರನ್ನು ಮೆಚ್ಚಿಸಲು ಈತ ಹೆಚ್ಚಿನ ಸ್ವಾತಂತ್ರ್ಯ ವಹಿಸಿದ. ಆ ವೇಳೆಗೆ ಇಟಲಿಯ ಆಪೆರಗಳಲ್ಲಿದ್ದ ಕಠಿಣಸೂತ್ರಗಳನ್ನು ತ್ಯಜಿಸಿ ಲುಲ್ಲಿ, ರಾಮೋ ಮುಂತಾದವರು ಹೊಸ ಸೂತ್ರಗಳನ್ನು ತೋರಿಸಿಕೊಟ್ಟಿದ್ದರು. ಗ್ಲೂಕ್ ಕೂಡ ಅವರ ದಾರಿಯನ್ನೇ ಅನುಸರಿಸಿದ. ಆದರೆ ಫ್ರೆಂಚ್ ರಸಿಕಸಮುದಾಯ ಇವನ ಸ್ವಾತಂತ್ರ್ಯಪ್ರಿಯತೆ ಹಾಗೂ ಸ್ವೋಪಜ್ಞತೆಯನ್ನು ಅಷ್ಟು ಸುಲಭವಾಗಿ ಮೆಚ್ಚಲಿಲ್ಲ. ಬದಲು ಅವನನ್ನು ವಿರೋಧಿಸಿತು. ಫ್ರೆಂಚ್ ಸಂಗೀತಜ್ಞರ ಕ್ಷೇತ್ರದಲ್ಲಿ ಉಗ್ರ ವಿವಾದಗಳೇರ್ಪಟ್ಟವು. ಇಟಲಿಯ ಆಪೆರ ಸಂಪ್ರದಾಯವನ್ನು ಮೆಚ್ಚುವ ತಂಡದವರು ನಿಕೊಲಾ ಪಿಚೀನಿ (1728-1800) ಎಂಬುವವನ ರಚನೆಗಳನ್ನು ಪ್ರಶಂಸಿಸಿ ಅವನ ಪಕ್ಷ ಹಿಡಿದರು. ಗ್ಲೂಕ್ ಪಂಥದವರಿಗೂ ಪಿಚೀನಿ ಪಂಥದವರಿಗೂ ದೊಡ್ಡ ಚರ್ಚೆ, ಸೆಣಸಾಟಗಳೇ ಪ್ರಾರಂಭವಾಗಿ, ಫ್ರೆಂಚ್ ಆಪೆರ ಮತ್ತು ಇಟಲಿ ಆಪೆರಗಳ ನಡುವೆ ವಿರೋಧಾಭಿಪ್ರಾಯಗಳು ತಲೆದೋರಿದವು. ಈ ಘೋರ ವಾಗ್ವಾದದಲ್ಲಿ ಗ್ಲೂಖ್ ಪಂಥೀಯರು ಮತ್ತೆ ಇಟಲಿಯ ಅತಿಭಾವುಕ ಆಪೆರಗಳಿಗೆ ಮಾರುಹೋದರು. ಗ್ಲೂಕನ ಪ್ರಕಾಶದುತ್ತೆ ಮುಸುಕಾಯಿತು.
ಗ್ಲೂಕ್ ಇಡೀ ಜೀವಿತಕಾಲದಲ್ಲಿ ತನ್ನ ಸೂತ್ರಗಳನ್ನು ಉಗ್ರವಾಗಿ ಸಮರ್ಥಿಸಿಕೊಳ್ಳುವುದು ಮಾತ್ರವಲ್ಲದೆ ತನಗೆ ಮೆಚ್ಚಗೆಯಾದ ರೀತಿಯಲ್ಲಿ ಹೊಸಮಾರ್ಗವನ್ನು ತುಳಿಯಲು ಪ್ರಯತ್ನಿಸಿದ. ತಾನು ಜನ್ಮತಃ ಜರ್ಮನಿಯವನಾದರೂ ಫ್ರೆಂಚ್ ಜನತೆಯ ಆತ್ಮಾಭಿಮಾನವನ್ನು ಕೆರಳಿಸಿ, ಅವರಿಗೆ ತಮ್ಮ ಹಿರಿಮೆ ಗರಿಮೆಗಳ ಅರಿವಾಗುವಂತೆ ಮಾಡಿದ. ಇವನ ಆತ್ಮಪ್ರತ್ಯಯ ಪ್ಯಾರಿಸಿನ ಕಲಾವಂತರಿಗೆ ಸ್ವಲ್ಪಕಾಲವಾದರೂ ಪ್ರಬಲ ಪ್ರೇರಣೆ ನೀಡಿತು.
1779ರಲ್ಲಿ ಗ್ಲೂಕ್ ಪಾಶ್ರ್ವವಾಯುಗ್ರಸ್ತನಾಗಿ 8 ವರ್ಷ ದೀರ್ಘ ವಿಶ್ರಾಂತಿಯನ್ನು ಪಡೆದು 1787ರಲ್ಲಿ ಕಾಲವಾದ. ತನ್ನ ಕಾಲದಲ್ಲಿ ಗ್ಲೂಕ್ ಎಷ್ಟೇ ಕ್ರಾಂತಿಕಾರನೆನಿಸಿಕೊಂಡಿದ್ದರೂ ನವ ಅಭಿಜಾತ ಪಂಥದವನೇ ಈತನ ಸಂಕುಚಿತ ಮನೋಧರ್ಮ ಅನಂತರ ಬಂದ ರಸಿಕರಿಗೆ ಮೆಚ್ಚುಗೆಯಾಗಲಿಲ್ಲ. ಗೇಯ ರಚನೆಗಳಲ್ಲಿ ಕಠಿಣವಾದ ಅಭಿಜಾತ ಕಲಾಸೂತ್ರಗಳನ್ನು ಅನುಸರಿಸಿ ಪ್ರಖರವಾದ ನಾಟ್ಯಪ್ರಜ್ಞೆಯನ್ನು ಅಳವಡಿಸಿದ್ದು ಇವನ ಶ್ರೇಷ್ಠಗುಣವನ್ನು ಎತ್ತಿತೋರಿಸುವಂತಾಯಿತು. ಇವನ ಗೇಯರಚನೆಗಳು ರಂಗಭೂಮಿಯ ಮೇಲೆ ಅತ್ಯದ್ಭುತ ಪರಿಣಾಮ ಬೀರಬಲ್ಲುತ್ತವೆಯಾದರೂ ಸಂಗೀತದ ದೃಷ್ಟಿಯಿಂದ ನೀರಸವೆನಿಸುತ್ತದೆ. ಈ ಸಂಬಂಧದಲ್ಲಿ ಹೆಚ್ಚಿನ ಸುಧಾರಣೆಗಳು ಕಂಡುಬಂದು ಅವು ಇತ್ತೀಚಿಗೆ ಜನಪ್ರಿಯವಾಗಿವೆ.
ಆಪೆರ ರಚನೆ ಹಾಗೂ ಪ್ರದರ್ಶನ ತಂತ್ರದಲ್ಲಿ ಗ್ಲೂಕ್ ಅಪೂರ್ವ ಅಂಶಗಳನ್ನು ಸಾಧಿಸಿದ. ಆಪೆರಗಳಲ್ಲಿನ ಗೀತ ನಿರೂಪಣೆಯ ಶೈಲಿಯನ್ನು ಈತ ಉಜ್ಜ್ವಲಗೊಳಿಸಿದ. ಆರಂಭಮೇಳ (ಓವರ್ಚರ್) ಹಾಗೂ ವಾದ್ಯಮೇಳಗಳನ್ನು (ಆರ್ಕೆಸ್ಟ್ರಾ) ಈತ ನವೀನ ರೀತಿಯಲ್ಲಿ ಬಳಸಿಕೊಂಡು ವೇಗವಾದ ಗತಿಯನ್ನೂ ಪರಿಣಾಮವನ್ನೂ ಸಾಧಿಸಿದ. ಹಾಪ್ರ್ಸಿಕಾರ್ಡ್ ವಾದ್ಯದ ಬಳಕೆಯನ್ನು ಬಿಟ್ಟುಕೊಟ್ಟು, ಹಾರ್ಪ್, ಟ್ರೋಂಬೋನ್ ಮತ್ತು ಕ್ಲಾರಿನೆಟ್ ವಾದ್ಯಗಳನ್ನು ಸಂದರ್ಭೋಚಿತವಾಗಿ ಬಳಸಿದ. ನಾಟಕೀಯತೆಯ ಮೇಲೆ ಹೆಚ್ಚಿನ ಪರಿಣಾಮಬೀರಲು ಆರ್ಕೆಸ್ಟ್ರಾವನ್ನು ಸೊಗಸಾಗಿ ಅಳವಡಿಸಿಕೊಂಡ. ಗ್ಲೂಕ್ ಸಂಗೀತಗಾರನಾಗಿ ಕಾಲಕ್ಕೆ ತಕ್ಕಂತೆ ನಡೆದುಕೊಂಡು, ಅರ್ಥಾರ್ಥಿಯಾಗಿ ಬದುಕಬೇಕಾಗಿ ಬಂದರೂ ಅವನ ರಸವಂತಿಕೆ, ಕಲಾಭಿಜ್ಞತೆ ಅನನ್ಯವಾದವು. (ಎಚ್.ಕೆ.ಆರ್.)
(ಪಿ.ಆರ್.ಎಂ.)
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
lruzhebfs36dnrkbyhojmy4bbwpqebq