ವಿಕಿಸೋರ್ಸ್ knwikisource https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F MediaWiki 1.47.0-wmf.23 first-letter ಮೀಡಿಯ ವಿಶೇಷ ಚರ್ಚೆಪುಟ ಸದಸ್ಯ ಸದಸ್ಯರ ಚರ್ಚೆಪುಟ ವಿಕಿಸೋರ್ಸ್ ವಿಕಿಸೋರ್ಸ್ ಚರ್ಚೆ ಚಿತ್ರ ಚಿತ್ರ ಚರ್ಚೆಪುಟ ಮೀಡಿಯವಿಕಿ ಮೀಡಿಯವಿಕಿ ಚರ್ಚೆಪುಟ ಟೆಂಪ್ಲೇಟು ಟೆಂಪ್ಲೇಟು ಚರ್ಚೆಪುಟ ಸಹಾಯ ಸಹಾಯ ಚರ್ಚೆಪುಟ ವರ್ಗ ವರ್ಗ ಚರ್ಚೆಪುಟ ಸಂಪುಟ ಸಂಪುಟ ಚರ್ಚೆ ಕರ್ತೃ ಕರ್ತೃ ಚರ್ಚೆ ಪುಟ ಪುಟ ಚರ್ಚೆ ಪರಿವಿಡಿ ಪರಿವಿಡಿ ಚರ್ಚೆ ಅನುವಾದ ಅನುವಾದ ಚರ್ಚೆ TimedText TimedText talk ಮಾಡ್ಯೂಲ್ ಮಾಡ್ಯೂಲ್ ಚರ್ಚೆಪುಟ Event Event talk In normal kannada 0 121098 325417 2026-10-07T07:22:57Z ~2026-54022-19 8688 yes 325417 wikitext text/x-wiki ತಿರುಕನೋರ್ವನೂರ ಮುಂದೆ ಮುರುಕು ಧರ್ಮಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ | ಪುರದ ರಾಜ ಸತ್ತರವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಾಲೆ ಕೊಟ್ಟು ಪುರದೊಳು || ೧ || ನಡೆದು ಯಾರ ಕೊರಳಿನಲ್ಲಿ ತೊಡರಿಸುವದೊ ಅವರ ಪಟ್ಟ ದೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ | ಒಡನೆ ತನ್ನ ಕೊರಳಿನಲ್ಲಿ ತೊಡರಿಸುವುದ ಕಂಡು ತಿರುಕ ಪೊಡವಿಯಾಳ್ವ ನೆಂದು ಮನದಿ ಹಿಗ್ಗುತಿದ್ದನು || ಪಟ್ಟವನ್ನು ಗಟ್ಟಲವಗೆ ನೃಪರು ಕೊಟ್ಟರವಗೆ ಕನ್ಯೆಯರನು ನೆಟ್ಟನವಗೆ ರಾಜ್ಯವಾಳ್ದ ಕನಸಿನಲ್ಲಿಯೇ | ಭಟ್ಟನಿಗಳ ಕೂಡಿ ನೆಲವ ಪುಟ್ಟಿನಿವರ ಸುಖದೊಳಿರಲು ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ || ೩ || ಓಲಗದಲಿರುತ್ತ ತೊಡೆಯ ಮೇಲೆ ಮಕ್ಕಳಾಡುತಿರಲು ಲೀಲೆಯಿಂದ ಚಾತುರಂಗ ಬಲವ ನೋಡುತ | ಲೋಲನಾಗಿ ನುಡಿದನಿನಿತು ಕೇಳು ಮಂತ್ರಿ ಸುತರುಗಳಿಗೆ ಬಾಲೆಯರನು ನೋಡಿ ಮಾಡುವೆ ಮಾಡಬೇಕೆಲೆ || ೪ || ನೋಡಿ ಬನ್ನಿರೆನಲು ಜೀಯ ನೋಡಿ ಬಂದೆವೆನಲು ಬೇಗ ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ | ಗಾಢವಾಗೆ ಸಂಭ್ರಮಗಳು ಮಾಡುತಿದ್ದ ಮದುವೆಗಳನು ಕೂಡಿದಖಿಳ ರಾಜರೆಲ್ಲ ಮೆಚ್ಚುವಂದದಿ || ೫ || ಧನದ ಮದವ ರಾಜ್ಯ ಮದ ವನಿತೆ ಸುತರ ನೋಡಿ ತಿರುಕ ಧನಿಕನಾಗೆ ಕಾಣುತ್ಕತಿದ್ನದ ಕನಸಿನಲ್ಲಿಯೇ| ಮುನಿದ ನೃಪರ ದಂಡು ಬಂದು ಮನೆಯ ಮುತ್ತಿದಂತೆಯಾಗೆ ಕನಸ ಕಾಣುತಿದ್ದೆನೆಂದು ಹೆದರಿ ಕಣ್ಣ ತೆರೆದನು ||೬ || ಮೆರೆದು ಹೋದ ಭಾಗ್ಯವೆಲ್ಲ ಹರಿದು ಹೋಯಿತೆನುತ ತಿರುಕ ಮರಳಿ ನಾಚಿ ಬೇಡುತಿದ್ದ ಹಿಂದಿನಂತೆಯೇ ||೭||[೧] 62mt8lofto6jkkv2hqr9g24kvyl034i