ವಿಕಿಸೋರ್ಸ್
knwikisource
https://kn.wikisource.org/wiki/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F
MediaWiki 1.47.0-wmf.24
first-letter
ಮೀಡಿಯ
ವಿಶೇಷ
ಚರ್ಚೆಪುಟ
ಸದಸ್ಯ
ಸದಸ್ಯರ ಚರ್ಚೆಪುಟ
ವಿಕಿಸೋರ್ಸ್
ವಿಕಿಸೋರ್ಸ್ ಚರ್ಚೆ
ಚಿತ್ರ
ಚಿತ್ರ ಚರ್ಚೆಪುಟ
ಮೀಡಿಯವಿಕಿ
ಮೀಡಿಯವಿಕಿ ಚರ್ಚೆಪುಟ
ಟೆಂಪ್ಲೇಟು
ಟೆಂಪ್ಲೇಟು ಚರ್ಚೆಪುಟ
ಸಹಾಯ
ಸಹಾಯ ಚರ್ಚೆಪುಟ
ವರ್ಗ
ವರ್ಗ ಚರ್ಚೆಪುಟ
ಸಂಪುಟ
ಸಂಪುಟ ಚರ್ಚೆ
ಕರ್ತೃ
ಕರ್ತೃ ಚರ್ಚೆ
ಪುಟ
ಪುಟ ಚರ್ಚೆ
ಪರಿವಿಡಿ
ಪರಿವಿಡಿ ಚರ್ಚೆ
ಅನುವಾದ
ಅನುವಾದ ಚರ್ಚೆ
TimedText
TimedText talk
ಮಾಡ್ಯೂಲ್
ಮಾಡ್ಯೂಲ್ ಚರ್ಚೆಪುಟ
Event
Event talk
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆ್ಯರೋಮ್ಯಾಟಿಕ್ ಸಂಯುಕ್ತಗಳು
0
3398
326180
6312
2026-10-17T19:39:59Z
Leyo
6775
redundant
326180
wikitext
text/x-wiki
[[File:Benzene_both.svg|thumb|Benzene both]]
ಒಂದೇ ರಾಸಾಯನಿಕ ಧಾತುವಿನ ಪರಮಾಣುಗಳಿರುವ ಆವರ್ತ ಯಾವುದೇ ಸಂಯುಕ್ತದ ಅಣು ರಚನೆಯಲ್ಲಿದ್ದರೆ ಅಂಥ ಸಂಯುಕ್ತವನ್ನು ಸಧಾತು ಚಕ್ರೀಯ ಸಂಯುಕ್ತ ಅಥವಾ ಹೋಮೊಸೈಕ್ಲಿಕ್ ಸಂಯುಕ್ತ ಎನ್ನಬಹುದು. ಆದರೆ ಸಾಮಾನ್ಯವಾಗಿ ಹೋಮೊಸೈಕ್ಲಿಕ್ ಸಂಯುಕ್ತಗಳು ಎನ್ನುವುದು ಕಾರ್ಬನ್ ಪರಮಾಣುಗಳ ಆವರ್ತವಿರುವ ಸಂಯುಕ್ತಗಳಿಗೇ.
ಹೋಮೊಸೈಕ್ಲಿಕ್ ಸಂಯುಕ್ತಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ.
# ಕೆಲವು ಹೋಮೊಸೈಕ್ಲಿಕ್ ಸಂಯುಕ್ತಗಳು ಆ್ಯಲಿಫ್ಯಾಟಿಕ್ ಸಂಯುಕ್ತಗಳ ಗುಣಧರ್ಮಗಳನ್ನು ಹೊಂದಿರುತ್ತವೆ. ಅವುಗಳಿಗೆ ಆಲಿಸೈಕ್ಲಿಕ್ ಸಂಯುಕ್ತಗಳೆಂದು ಹೆಸರು.
# ಬೆಂಜೀನ್ ಎಂಬ ಹೋಮೊಸೈಕ್ಲಿಕ್ ಹೈಡ್ರೊಕಾರ್ಬನ್ ಮತ್ತು ಅದರಿಂದ ಜನ್ಯವಾದ ಸಂಯುಕ್ತಗಳನ್ನು ಆ್ಯರೊಮ್ಯಾಟಿಕ್ ಸಂಯುಕ್ತಗಳು ಎಂದು ಕರೆಯುತ್ತಾರೆ. ಬೆಂಜೀನ್ ಹೈಡ್ರೊಕಾರ್ಬನ್ನಿನಲ್ಲಿ ಆರು ಕಾರ್ಬನ್ ಪರಮಾಣುಗಳು ಕ್ರಮ ಷಡ್ಭುಜಾಕಾರದಲ್ಲಿ ಜೋಡಿಸಿ ಕೊಂಡಿದ್ದು, ಅವುಗಳನ್ನು ಪರಸ್ಪರ ಬಂಧಿಸಿರುವ ಬಂಧಗಳು ಪರ್ಯಾಯವಾಗಿ ಏಕಬಂಧ ಮತ್ತು ದ್ವಿಬಂಧಗಳಾಗಿರುತ್ತವೆ. ಆದ್ದರಿಂದ ಬೆಂಜೀನ್ ಅಣುರಚನೆಯನ್ನು ಕೆಳಗೆ ಕಾಣುವಂತೆ ಬರೆಯುತ್ತಾರೆ:
ಈ ಬೆಂಜೀನ್ ಆವರ್ತದಲ್ಲಿ ಏಕಬಂಧ ಮತ್ತು ದ್ವಿಬಂಧಗಳು ಚಿತ್ರದಲ್ಲಿ ತೋರಿಸಿರು ವಂತೆ ಆಯಾ ಸ್ಥಾನದಲ್ಲಿ ಭದ್ರವಾಗಿರುವುದಿಲ್ಲ, ಸದಾ ತಮ್ಮ ಸ್ಥಾನಗಳನ್ನು ಬದಲಾಯಿಸು ತ್ತಿರುತ್ತವೆ ಎಂದು ಹಿಂದೆ ನಂಬಲಾಗಿತ್ತು. ಆದರೆ ಪ್ರಚಲಿತ ವಾದದ ಪ್ರಕಾರ ಚಕ್ರದಲ್ಲಿರುವ ಆರು ಬಂಧಗಳೂ ಸಮಾನ ಗುಣಧರ್ಮಗಳನ್ನು ಹೊಂದಿದ್ದು, ಅವು ತಮ್ಮ ಸ್ವಭಾವದಲ್ಲಿ ಏಕಬಂಧ ಮತ್ತು ದ್ವಿಬಂಧಗಳ ಮಧ್ಯವರ್ತಿ ಗುಣಧರ್ಮವನ್ನು ತೋರಿಸುತ್ತವೆ. ಆದ್ದರಿಂದ ಕೆಲವರು ಬೆಂಜೀನ್ ಆವರ್ತವನ್ನು ಕೆಳಗೆ ಕಾಣುವಂತೆ ಬರೆಯುವುದೂ ಉಂಟು.
ಆ್ಯರೋಮ್ಯಾಟಿಕ್ ಸಂಯುಕ್ತಗಳೆಲ್ಲವೂ ಬೆಂಜೀನಿನಿಂದ ಜನ್ಯವಾದುವಾದ್ದರಿಂದ ಅವುಗಳೆಲ್ಲದರಲ್ಲಿಯೂ ಈ ಬೆಂಜೀನ್ ಆವರ್ತವನ್ನು ಕಾಣಬಹುದು. ರಸಾಯನ ವಿಜ್ಞಾನದ ಚರಿತ್ರೆಯಲ್ಲಿ ಮೊದಲು ನಮ್ಮ ಗಮನಕ್ಕೆ ಬಂದ ಬೆಂಜೀನ್ಜನ್ಯ ಸಂಯುಕ್ತಗಳೆಲ್ಲದಕ್ಕೂ ತೀಕ್ಷ್ಣವಾದ ಸುವಾಸನೆ (ಅರೋಮ) ಇದ್ದುದರಿಂದ ಇವಕ್ಕೆ ಆ್ಯರೋಮ್ಯಾಟಿಕ್ ಸಂಯುಕ್ತಗ ಳೆಂಬ ಹೆಸರು ಬಂತು. ಆದರೆ ಈಗ ಆ ವಾಸನೆಯೇ ವರ್ಗೀಕರಣಕ್ಕೆ ಆಧಾರವಲ್ಲ. ವಾಸನೆ ಇರಲಿ, ಇಲ್ಲದಿರಲಿ, ಬೆಂಜೀನ್ ಆವರ್ತವಿರುವ ಸಂಯುಕ್ತಗಳೆಲ್ಲ ಆ್ಯರೋಮ್ಯಾಟಿಕ್ ಸಂಯುಕ್ತಗಳೇ.
ಬೆಂಜೀನ್ ಅಣುವಿನಲ್ಲಿಯ ಹೈಡ್ರೊಜನ್ ಪರಮಾಣುಗಳನ್ನು ಬೇರೆ ಬೇರೆ ಪರಮಾಣುಗಳಿಂದ ಅಥವಾ ಪರಮಾಣುಪುಂಜಗಳಿಂದ ಬದಲಿಸಿದರೆ ಉಂಟಾಗುವ ಸಂಯುಕ್ತಗಳು ಆರೋಮ್ಯಾಟಿಕ್ ಸಂಯುಕ್ತಗಳಲ್ಲಿ ಅತ್ಯಂತ ಸರಳವಾದುವು. ಉದಾಹರಣೆಗೆ, ಒಂದು ಹೈಡ್ರೊಜನ್ ಪರಮಾಣುವನ್ನು ಕ್ಲೋರೀನ್ ಪರಮಾಣುವಿನಿಂದ ಬದಲಿಸಿದರೆ ಕ್ಲೋರೊಬೆಂಜೀನ್ ಉಂಟಾಗುತ್ತದೆ. ಅದರ ಅಣು ರಚನೆಯನ್ನು ಹೀಗೆ ಬರೆಯುತ್ತಾರೆ:
ಬೆಂಜೀನ್ ಅಣುರಚನೆಯಲ್ಲಿ ಕಂಡುಬರುವ ಆರು ಹೈಡ್ರೊಜನ್ ಪರಮಾಣುಗಳೂ ಸಮಾನ ಸ್ಥಾನಗಳಲ್ಲಿರುವುದರಿಂದ ಸಮಮಿತಿಯ ಕಾರಣಗಳಿಂದ ಅವುಗಳಲ್ಲಿ ಯಾವುದನ್ನು ಕ್ಲೋರೀನ್ ಪರಮಾಣುವಿನಿಂದ ಬದಲಿಸಿದರೂ ಬರುವುದು ಒಂದೇ ಕ್ಲೋರೋಬೆಂಜೀನ್.
ಎರಡು ಅಥವಾ ಹೆಚ್ಚು ಹೈಡ್ರೊಜನ್ ಪರಮಾಣುಗಳನ್ನು ಇತರ ಪರಮಾಣುಗಳಿಂದ ಅಥವಾ ಪರಮಾಣು ಪುಂಜಗಳಿಂದ ಬದಲಿಸಿದರೆ ಬರುವ ಜನ್ಯ ಸಂಯುಕ್ತಗಳನ್ನು ಹೆಸರಿಸುವಾಗ ಬದಲಿ ಪುಂಜಗಳ ಸ್ಥಾನಗಳನ್ನು ಸೂಚಿಸಬೇಕಾಗುತ್ತದೆ. ಅದಕ್ಕಾಗಿ ಬೆಂಜೀನ್ ಅಣುವಿನಲ್ಲಿ ಯಾವುದಾದರೊಂದು ಸ್ಥಾನವನ್ನು ೧ ಎಂದು ಕರೆದು ಅಲ್ಲಿಂದ ಗಡಿಯಾರ ಕ್ರಮದಲ್ಲಿ ಬರುವ ಸ್ಥಾನಗಳಿಗೆ ಕ್ರಮವಾಗಿ ೨,೩,೪,೫ ಮತ್ತು ೬ ಎಂದು ಕರೆಯುತ್ತಾರೆ.
ಎರಡು ಕ್ಲೋರೀನ್ ಪರಮಾಣುಗಳಿರುವ ಮತ್ತು ಮೂರು ಕ್ಲೋರೀನ್ ಪರಮಾಣುಗಳಿರುವ ಬೆಂಜೀನ್ಜನ್ಯ ಸಂಯುಕ್ತಗಳ ರಚನೆಗಳನ್ನು ಮತ್ತು ಹೆಸರುಗಳನ್ನು ಈ ಕೆಳಗೆ ಕೊಟ್ಟಿದೆ.
ಮೇಲಿನಂತೆ ಹೈಡ್ರೊಜನ್ ಪರಮಾಣುವನ್ನು ಒಂದೇ ಒಂದು ಪರಮಾಣುವಿನಿಂದ ಬದಲಿಸದೆ, ಪರಮಾಣುಪುಂಜಗಳಿಂದ ಬದಲಿಸಬಹುದು. ಹಾಗೆ ಮಾಡಿದಾಗ ಪುಂಜಗಳಲ್ಲಿರ ಬಹುದಾದ ರಾಸಾಯನಿಕ ಗುಂಪುಗಳನ್ನು ಅವಲಂಬಿಸಿ ಎಸ್ಟರುಗಳು, ಈಥರುಗಳು, ಆಲ್ಡಿಹೈಡುಗಳು, ಅಮೀನುಗಳು ಉತ್ಪತ್ತಿಯಾಗುತ್ತವೆ. ಅನೇಕವೇಳೆ ಈ ಪುಂಜಗಳ ಸ್ವಭಾವಗುಣ ಆ್ಯಲಿಫ್ಯಾಟಿಕ್ ಸಂಯುಕ್ತಗಳಲ್ಲಿರುವುದಕ್ಕಿಂತ ಭಿನ್ನವಾಗಿರುತ್ತದೆ. ಉದಾಹರಣೆಗೆ, ಆಲ್ಕೋಹಾಲ್ಗಳಲ್ಲಿರುವ -ಔಊ ಪುಂಜ ಆ್ಯಲಿಫ್ಯಾಟಿಕ್ ಸಂಯುಕ್ತಗಳಲ್ಲಿದ್ದಾಗ ತೋರುವ ಗುಣಧರ್ಮಕ್ಕೂ ಅದೇ ಪುಂಜ ಬೆಂಜೀನ್ ಚಕ್ರಕ್ಕೆ ನೇರವಾಗಿ ಅಂಟಿಕೊಂಡಿದ್ದಾಗ ತೋರುವ ಗುಣಧರ್ಮಕ್ಕೂ ಬಹಳ ವ್ಯತ್ಯಾಸವಿರುತ್ತವೆ. ಆದುದರಿಂದಲೇ -ಔಊ ನೇರವಾಗಿ ಬೆಂಜೀನ್ ಚಕ್ರಕ್ಕೆ ಅಂಟಿಕೊಂಡಿರುವ ಸಂಯುಕ್ತಗಳನ್ನು ಆಲ್ಕೊಹಾಲ್ಗಳು ಎನ್ನುವುದಿಲ್ಲ; ಫೀನಾಲ್ಗಳು ಎಂದು ಕರೆಯುತ್ತಾರೆ.
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
6d63ssreebbx6gizdn29afoy1v2ksk3